ಪ್ರತಿ ದಿನ ಬೆಲೆ ಏರಿಕೆಯದ್ದೇ ಸುದ್ದಿ. ಟೊಮೆಟೋ, ಹಾಲು, ಬೇಳೆ ಕಾಳು, ತರಕಾರಿ, ಮೆಣಸು, ಎಣ್ಣೆ ಹೀಗೆ.. ಇವುಗಳ ಏರಿಕೆಯಿಂದ ಹೊಟೇಲ್ ತಿಂಡಿಗಳ ಬೆಲೆನೂ ಏರಿಕೆ. ಆದರೆ ಈ ತಿಂಗಳ ಮೊದಲ ದಿನ ಸಾರ್ವಜನಿಕರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಇದು ಕೊಂಚ ನಿರಾಳವಾಗಿಸಿದೆ. ಇಂದಿನಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾಗಿದೆ.
ತೈಲ ಕಂಪನಿಗಳು ಗ್ರಾಹಕರು ನಿಟ್ಟುಸಿರು ಬಿಡುವಂತಹ ನಿರ್ಧಾರವನ್ನು ತೆಗೆದುಕೊಂಡಿವೆ. ಇಂದಿನಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಜಾರಿಗೆ ಬರಲಿವೆ. ಬೆಲೆ ಏರಿಕೆಯಿಂದ ಕಂಗಾಲು ಆಗಿರುವ ಜನರಿಗೆ ಇದು ಸಿಹಿ ಸುದ್ದಿಯಾಗಿದೆ. ಆದ್ರೆ ಈ ಸಿಹಿ ಸುದ್ದಿ ಕೆಲವರಿಗೆ ಮಾತ್ರ ಅನ್ವಯವಾಗಲಿದೆ. ಸಿಲಿಂಡರ್ ಬೆಲೆ ಕಡಿತ ಸೀಮಿತವಾಗಿರಲಿದೆ. ಈ ಬೆಲೆ ಇಳಿಕೆ ಕೇವಲ ವಾಣಿಜ್ಯ ಸಿಲಿಂಡರ್ಗಳಿಗೆ ಮಾತ್ರ ಅನ್ವಯವಾಗಲಿದೆ. ವ್ಯಾಪಾರಿ, ಹೋಟೆಲ್ ವರ್ಗದವರಿಗೆ ಬೆಲೆ ಇಳಿಕೆ ಕೊಂಚ ಸಮಾಧಾನ ತಂದಿದೆ ಎಂದು ಹೇಳಬಹುದು. ಭಾರತ್, ಇಂಡೇನ್, ಎಚ್ಪಿಯಂತಹ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಳಿಸಿವೆ.
19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 100 ರೂ.ಗಳಷ್ಟು ಇಳಿಕೆಯಾಗಿದೆ. ದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,680 ರೂಪಾಯಿ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 1,105 ರೂಪಾಯಿ ಇದೆ. 5 ಕೆಜಿ ಸಿಲಿಂಡರ್ ಬೆಲೆ 406 ರೂಪಾಯಿಗಳಾಗಿದೆ. ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,767 ರೂಪಾಯಿ ಆಗಿದೆ. ರಾಜಧಾನಿಯಲ್ಲಿ 92.50 ರೂ.ವರೆಗೆ ಬೆಲೆ ಇಳಿದಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 1,802 ರೂಪಾಯಿ, ಮುಂಬೈನಲ್ಲಿ 1,640 ರೂಪಾಯಿ ಮತ್ತು ಚೆನ್ನೈನಲ್ಲಿ 1,852 ರೂಪಾಯಿ ಆಗಿದೆ.
ಗೃಹ ಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ಕೊನೆಯ ಬಾರಿ ಮಾರ್ಚ್ನಲ್ಲಿ ಸಿಲಿಂಡರ್ ಬೆಲೆ ಬದಲಾಗಿತ್ತು. ಸದ್ಯ 14.2 ಕೆಜಿ ಸಿಲಿಂಡರ್ ಬೆಲೆ 1,103 ರೂಪಾಯಿ ಇದೆ. ಈ ತಿಂಗಳು ಗೃಹ ಬಳಕೆಯ ಸಿಲಿಂಡರ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತೈಲ ಕಂಪನಿಗಳು ಕೇವಲ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಮಾಡಿವೆ.