ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ ಗೋವು ಆಧರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರವು ಫೆ.27 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಗೋಫಲ ಟ್ರಸ್ಟ್ ನ ಟ್ರಸ್ಟಿ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನದ ಮೂಲಕ ಉದ್ಘಾಟಿಸಲಿದ್ದಾರೆ. ಗೋಫಲ ಟ್ರಸ್ಟ್ ನ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಗೋವೋತ್ಪನ್ನ ತಯಾರಿಕೆ ಶಿಬಿರವು ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಜರುಗಲಿದೆ. ಆಸಕ್ತ ಪುರುಷರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರಾರ್ಥಿಗಳು ಬರುವಾಗ ಪೆನ್ನು ಮತ್ತು ಪುಸ್ತಕ ತರುವಂತೆ ಕೋರಲಾಗಿದೆ. ಅಲ್ಲದೆ ಒಂದು ದಿನದ ಊಟ, ಉಪಾಹಾರ, ಪಾನೀಯ ಮತ್ತಿತರ ಖರ್ಚುಗಳಿಗಾಗಿ 100 ರೂ ಶುಲ್ಕ ನಿಗದಿಪಡಿಸಲಾಗಿದೆ.\
ಗೋವಿನಿಂದಾಗಿ ಮನುಷ್ಯರಿಗೆ ದಿನನಿತ್ಯ ಬಳಕೆಯಾಗುವ ದಂತಮಂಜನ್, ಸೋಪು, ದೂಪಬತ್ತಿ, ಅಮೃತ್ ಮಲಂ ಅಲ್ಲದೆ ಇತರ ಸೌಂದರ್ಯವರ್ಧಕ ಸಾಮಾಗ್ರಿಗಳು, ಕೃಷಿ ಭೂಮಿಗೆ ಬೇಕಾಗುವ ಜೀವಾಮೃತ, ಕೀಟ ನಿಯಂತ್ರಕ, ಜೀವಾಮೃತ ಔಷಧಿಗಳನ್ನು ತಯಾರಿಸುವ ವಿಧಾನವನ್ನು ಈ ಶಿಬಿರದಲ್ಲಿ ಕಲಿಸಿಕೊಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ – ಗೋಸೇವಾ ಗತಿವಿಧಿ, ಗೋ ಉತ್ಪನ್ನ ತಯಾರಿ ಆಯಾಮ ವಿಷಯದ ಪ್ರಾಂತ ಪ್ರಮುಖರಾದ ಉಮೇಶ್ ಕುಲಕರ್ಣಿ, ಡಿ.ಸಿ. ಆರ್ ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಎಂ. ಯದುಕುಮಾರ್, ನಿವೃತ್ತ ಉಪನ್ಯಾಸಕ ಹಾಗೂ ಗೋ ಆಧಾರಿತ ಕೃಷಿಕರಾದ ಉದಯಶಂಕರ, ಗೋಉತ್ಪನ್ನಗಳ ತಯಾರಕರಾದ ಕೆ.ಟಿ ವೆಂಕಟೇಶ್, ಸ್ವರ್ಗಸಾರ ಗೋ ಉತ್ಪನ್ನಗಳ ತಯಾರಕರಾದ ಭಾಸ್ಕರ್ ರಾವ್ ಉಬರಡ್ಕ, ಹೈನುಗಾರಿಕಾ ಕೃಷಿಕರಾದ ಜಯಗುರು ಆರ್ಯ ಹಿಂದಾರು ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮುಳಿಯ ಗೋವಿಹಾರದ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…