Advertisement
MIRROR FOCUS

ಇಸ್ರೇಲ್-ಹಮಾಸ್‌ ಸಂಘರ್ಷ | ಆಹಾರ, ನೀರಿಗಾಗಿ ಪರದಾಡುತ್ತಿರುವ ಗಾಝಾ ಜನತೆ | ಎರಡು ತುಂಡು ಬ್ರೆಡ್‌ ಇವರ ಫುಡ್‌…! | ವಿಶ್ವ ಸಂಸ್ಥೆ ಅಧಿಕಾರಿ ಹೇಳಿಕೆ

Share

ಇಸ್ರೇಲ್-‌ ಪ್ಯಾಲೆಸ್ತೀನ್‌(Palestine-Israel) ಯುದ್ಧದ ತೀವ್ರರೂಪ ನಾಗರೀಕರ ಮೇಲೆ ಬಹಳ ಕಠೋರವಾಗಿ ಪರಿಣಾಮ ಬೀರುತ್ತಿದೆ. ಯುದ್ಧದಾಹಕ್ಕೆ ಸಾಮಾನ್ಯ ಜನತೆಯ ಜೀವನ ನಲುಗಿ ಹೋಗುತ್ತಿದೆ. ದಿನನಿತ್ಯದ ಆಹಾರ,(Food) ನೀರು, ಆಸ್ಪತ್ರೆ ವ್ಯವಸ್ಥೆ, ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮಮ ಬೀರುತ್ತಿದ್ದು, ಜನ ಪರದಾಡುವಂತಾಗಿದೆ. ಹೆಂಗಸರು, ಮಕ್ಕಳು ಅನ್ನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇಸ್ರೇಲ್‌ನಿಂದ ಗಾಝಾ(Gaza)ದ ಮೇಲೆ ಸತತ ದಾಳಿಗಳಾಗುತ್ತಿದ್ದು, ಅಲ್ಲಿನ ಜನರ ಬದುಕು ಮೂರಾಬಟ್ಟೆಯಾಗಿದೆ. ಈಗ ಅಲ್ಲಿ ವಿಶ್ವಸಂಸ್ಥೆ ಶೇಖರಿಸಿಟ್ಟಿದ್ದ ಅರೆಬಿಕ್‌ ಬ್ರೆಡ್‌ನ( Arabic bread) ಕೇವಲ ಎರಡು ತುಂಡುಗಳನ್ನು ತಿಂದು ಜನ ದಿನ ದೂಡುತ್ತಿದ್ದಾರೆ. ಅದರ ಜೊತೆಗೆ ಈಗ ಅಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ ಎಂದು ಫೆಲೆಸ್ತೀನಿ ನಿರಾಶ್ರಿತರಿಗಾಗಿರುವ ವಿಶ್ವ ಸಂಸ್ಥೆಯ ಏಜನ್ಸಿಯ(UN agency) ಗಾಝಾ ನಿರ್ದೇಶಕರಾದ ಥಾಮಸ್‌ ವೈಟ್‌ ಹೇಳಿದ್ದಾರೆ.

ಕಳೆದ ಕೆಲ ವಾರಗಳಲ್ಲಿ ಗಾಝಾದ ಉದ್ದಗಲಕ್ಕೂ ತಾವು ತೆರಳಿರುವುದಾಗಿ ತಿಳಿಸಿದ ಅವರು ಎಲ್ಲೆಡೆ ಸಾವು ಮತ್ತು ವಿನಾಶ ಕಾಣಿಸುತ್ತಿದೆ. ಅಲ್ಲಿ ಸುರಕ್ಷಿತ ಸ್ಥಳವೆಂಬುದಿಲ್ಲ, ಜನರು ತಮ್ಮ ಜೀವಗಳಿಗೆ, ಭವಿಷ್ಯದ ಕುರಿತು ಹಾಗೂ ತಮ್ಮ ಕುಟುಂಬಗಳನ್ನು ಸಲಹುವ ಬಗೆ ಹೇಗೆ ಎಂಬ ಕುರಿತು ಚಿಂತಿತರಾಗಿದ್ದಾರೆ ಎಂದು ಅವರು ಹೇಳಿದರು. ವಿಶ್ವ ಸಂಸ್ಥೆಯ ಫೆಲೆಸ್ತೀನಿ ನಿರಾಶ್ರಿತರ ಏಜನ್ಸಿಯು ಗಾಝಾದಾದ್ಯಂತ 89 ಬೇಕರಿಗಳಿಗೆ ಬೆಂಬಲ ನೀಡುತ್ತಿದ್ದು 17 ಲಕ್ಷ ಜನರಿಗೆ ಬ್ರೆಡ್‌ ದೊರೆಯುವಂತೆ ಮಾಡುವ ಉದ್ದೇಶ ಅದಕ್ಕಿದೆ. ಆದರೆ ಈಗ ಜನರು ನೀರಿಗಾಗಿ ಹುಡುಕುವ ಸ್ಥಿತಿ ಬಂದಿದೆ ಎಂದು ಅವರು ಹೇಳಿದರು.

ಇಸ್ರೇಲ್‌ನಿಂದ ಮೂರು ನೀರು ಸರಬರಾಜು ಮಾರ್ಗಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. “ಅನೇಕ ಜನರು ಉಪ್ಪು ಅಥವಾ ಲವಣಯುಕ್ತ ಅಂತರ್ಜಲವನ್ನು ಅವಲಂಬಿಸಿದ್ದಾರೆ”.  ಯುಎನ್ ಮಾನವೀಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ ಅವರು ಇಸ್ರೇಲ್, ಈಜಿಪ್ಟ್, ಯುನೈಟೆಡ್ ಸ್ಟೇಟ್ಸ್ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳ ನಡುವೆ ಗಾಜಾವನ್ನು ಪ್ರವೇಶಿಸಲು ಇಂಧನವನ್ನು ಅನುಮತಿಸುವ ಬಗ್ಗೆ ತೀವ್ರವಾದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದರು. ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನೀರು ಮತ್ತು ವಿದ್ಯುತ್ ವಿತರಣೆಗೆ ಇಂಧನದ ಅಗತ್ಯ ಬಹಳ ಇದೆ ಎಂದು ಅವರು ಹೇಳಿದರು.

“ಪ್ರಮುಖ ವಸ್ತುಗಳ ಸರಬರಾಜಿಗೆ ವಿಶ್ವಾಸಾರ್ಹವಾಗಿ, ಪುನರಾವರ್ತಿತವಾಗಿ ಮತ್ತು ಅವಲಂಬಿತವಾಗಿ ಗಾಜಾಕ್ಕೆ ಅನುಮತಿಸಬೇಕು.” ಆಸ್ಪತ್ರೆಗಳು, ನೀರಿನ ನಿರ್ವಹಕ ಘಟಕಗಳು, ಆಹಾರ ಉತ್ಪಾದನಾ ಸೌಲಭ್ಯಗಳು ಮತ್ತು ಇತರ ಅಗತ್ಯ ಸೇವೆಗಳು ಕಾರ್ಯನಿರ್ವಹಿಸಲು ಅತ್ಯಗತ್ಯವಾಗಿರುವ ಬ್ಯಾಕಪ್ ಜನರೇಟರ್‌ಗಳು “ಇಂಧನ ಪೂರೈಕೆಗಳು ಖಾಲಿಯಾಗುತ್ತಿದ್ದಂತೆ ಒಂದೊಂದಾಗಿ ಸ್ಥಗಿತಗೊಳ್ಳುತ್ತಿವೆ” ಎಂದು ಹೇಸ್ಟಿಂಗ್ಸ್ ಹೇಳಿದರು.

– ಪಿಟಿಐ ಮಾಹಿತಿ

There are continuous attacks on Gaza by Israel, and the life of the people there has become a nightmare. Now people are eating only two pieces of Arabic bread that the United Nations has stored there. In addition, there is now a shortage of drinking water there, said Thomas White, the Gaza director of the UN agency for Palestinian refugees.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

5 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

6 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

6 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

9 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

20 hours ago