#Bhagavadgeeta | ಹಿಂದೂ ಸಂಪ್ರದಾಯ, ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಸಜ್ಜು | ಕೋಲ್ಕತ್ತಾದಲ್ಲಿ ಲಕ್ಷಾಂತರ ಜನರಿಂದ ಭಗವದ್ಗೀತೆ ಪಠಣ ಕಾರ್ಯ |

August 4, 2023
1:40 PM
ಲೋಕಸಭೆ ಚುನಾವಣೆಗೂ ಮುನ್ನ ಬೃಹತ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮವು ಡಿಸೆಂಬರ್ 24ರಂದು ನಡೆಯಲಿದೆ, ಹಿಂದೂ ಸಂಪ್ರದಾಯ, ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

RSS ಹಿಂದೂ ಧರ್ಮ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಬರುವ ಹಿನ್ನೆಲೆಯಲ್ಲಿ ಕೂಡ ಇದು ಬಿಜೆಪಿಗೆ ಬಲ ತುಂಬುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘನ ಶಾಖೆಯಾದ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತು ಕೋಲ್ಕತ್ತಾದ ಬ್ರಿಗೇಡ್ ಮೈದಾನಲ್ಲಿ ಭಗವದ್ಗೀತೆ ಪಠಣ ಕಾರ್ಯಕ್ರಮವನ್ನು ಆಯೋಜಿಸಿದೆ.

Advertisement

ಮೂಲಗಳ ಪ್ರಕಾರ, ದೇಶದ ರಾಷ್ಟ್ರಪತಿ  ದ್ರೌಪದಿ ಮುರ್ಮು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಲೋಕಸಭೆ ಚುನಾವಣೆಗೂ ಮುನ್ನ ಬೃಹತ್ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮವು ಡಿಸೆಂಬರ್ 24ರಂದು ನಡೆಯಲಿದೆ, ಹಿಂದೂ ಸಂಪ್ರದಾಯ, ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ಮೂರು ಗಂಟೆಗಳ ಕಾಲ ಇರಲಿದೆ, ಇದರಲ್ಲಿ ಐದು ಅಧ್ಯಾಯಗಳನ್ನು ತಾವು ಓದುವುದಾಗಿ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತಿನ ಗೌರವ್ ತಿಳಿಸಿದ್ದಾರೆ. ಉತ್ತರ ಹಾಗೂ ಪಶ್ಚಿಮ ಬಂಗಾಳ ಹಾಗೂ ಹೊರಗಡೆಯಿಂದಲೂ ಜನರು ಆಗಮಿಸುತ್ತಿದ್ದಾರೆ, ಡಿಸೆಂಬರ್ 24 ರಂದು ಗೀತಾ ಜಯಂತಿಯಂದು ಈ ಕಾರ್ಯಕ್ರಮ ನಡೆಯಲಿದೆ.

ಬ್ರಿಗೇಡ್ ಮೈದಾನವು ಫೋರ್ಟ್​ ವಿಲಿಯಂ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಇಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಸೇನೆಯ ಅನುಮತಿ ಬೇಕಾಗುತ್ತದೆ. ಮೂಲಗಳ ಪ್ರಕಾರ ಈಗಾಗಲೇ ಸೇನೆಯಿಂದ ಅನುಮತಿ ಪಡೆಯಲಾಗಿದೆ. ವಿವಿಧ ಮಠ, ಮಂದಿರಗಳಿಗೂ ಆಹ್ವಾನ ನೀಡಲಾಗುತ್ತದೆ. ಬ್ರಿಗೇಡ್​ನಲ್ಲಿ ಗೀತಾ ವಾಚನದ ಕುರಿತು ಸಿಪಿಎಂ ಮುಖಂಡ ಸುಜನ್ ಚಕ್ರವರ್ತಿ ಮಾತನಾಡಿ, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮತಾಂಧತೆ ಹಾಗೂ ಕೋಮುವಾದವನ್ನು ತುಂಬಲು ಬಿಜೆಪಿ ಸಿದ್ಧವಾಗಿದೆ. ವರ್ಷಕ್ಕೆ 2 ಕೋಟಿ ರೂ ಉದ್ಯೋಗಗಳ ಭರವಸೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ತೃಣಮೂಲ ವಕ್ತಾರ ಕುನಾಲ್ ಘೋಷ್ ಮಾತನಾಡಿ, ಗೀತಾವನ್ನು ರಾಜಕೀಯಕ್ಕೆ ತರಬೇಡಿ ಎಂದು ಹೇಳಿದ್ದಾರೆ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 09-05-2025 | ಮೇ14 ರಿಂದ ಉತ್ತಮ ಮಳೆಯ ನಿರೀಕ್ಷೆ ಇದೆ
May 10, 2025
12:20 PM
by: ಸಾಯಿಶೇಖರ್ ಕರಿಕಳ
ಜೂನ್‌ನಿಂದ ಈ 6 ರಾಶಿಯವರ ಅದೃಷ್ಟ ಖುಲಾಯಿಸಲಿದೆ… ಕೋಟ್ಯಾಧಿಪತಿಗಳಾಗುವ ಯೋಗ!
May 10, 2025
8:07 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ – ಪಾಕಿಸ್ತಾನದ ದಾಳಿಗೆ ಭಾರತದ ಪ್ರತ್ಯುತ್ತರ
May 9, 2025
8:00 PM
by: The Rural Mirror ಸುದ್ದಿಜಾಲ
ಭಾರತ, ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಳ | ವಾಯುಪಡೆಯ ನೆಲೆಯಿಂದ ಎಚ್ಚರಿಕೆ
May 9, 2025
7:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group