MIRROR FOCUS

ಮಂಗಳೂರಿನಲ್ಲಿ ಗೆಡ್ಡೆಗೆಣಸು ಮೇಳ | ಬೆಳೆಸುವವರಿಂದ ಬಳಕೆದಾರರವರೆಗೆ |

Share

ಮಂಗಳೂರಿನ ಸಂಘನಿಕೇತನದ ವಠಾರದಲ್ಲಿ ಎರಡು ದಿನಗಳ ಗೆಡ್ಡೆ ಗೆಣಸು ಮೇಳ ಆರಂಭವಾಗಿದೆ. ನಗರದ ಹಲವಾರು ಮಂದಿ ಮೇಳಕ್ಕೆ ಆಗಮಿಸಿ ಖರೀದಿ ಮಾಡುತ್ತಿದ್ದರು. ಒಂದೇ ದಿನದಲ್ಲಿ ಬಹುಪಾಲು ಗೆಡ್ಡೆಗೆಣಸು-ಸೊಪ್ಪುಗಳು ಖಾಲಿಯಾಗುತ್ತಿದ್ದವು, ಮೇಳದ ಉದ್ದೇಶ ಸಾರ್ಥಕ ಕಂಡಿದೆ.…..ಮುಂದೆ ಓದಿ….

ರಾಜ್ಯಮಟ್ಟದ ಮೇಳ ಇದಾಗಿದೆ. ಮಂಗಳೂರಿನ ಸಾವಯವ ಬಳಗದ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಈ ಮೇಳ ಆಯೋಜನೆಗೊಂಡಿದೆ.ಕೇರಳ-ಕರ್ನಾಟಕ ಸೇರಿದಂತೆ ಹಲವಾರು ರೈತರು ಆಗಮಿಸಿದ್ದಾರೆ. ತಾವೇ ಬೆಳೆದ ಗೆಡ್ಡೆಗೆಣಸುಗಳನ್ನು-ಸೊಪ್ಪುಗಳನ್ನು ಮಾರಾಟ ಮಾಡುತ್ತಿದ್ದರು. ಅದರ ಜೊತೆಗೆ ಗೆಡ್ಡೆಗಳನ್ನು ಬಿತ್ತಲು ಕೂಡಾ ಕೊಂಡೊಯ್ಯುತ್ತಿದ್ದಾರೆ. ಸುಮಾರು 45 ಮಳಿಗೆಗಳು ಇವೆ. ಬಹುಪಾಲು ಮಳಿಗೆಗಳು ಗೆಡ್ಡೆ ಗೆಣಸುಗಳು-ಸೊಪ್ಪುಗಳಿಗೇ ಮೀಸಲಾಗಿವೆ. ಗೆಡ್ಡೆ ಗೆಣಸುಗಳಿಂದಲೇ ತಯಾರಿಸುವ ಖಾದ್ಯಗಳ ಮಳಿಗೆಗಳೂ ಇವೆ. ವಿಶೇಷವಾಗಿ ಗೆಡ್ಡೆ ಗೆಣಸಿನ ಐಸ್ ಕ್ರೀಂ, ಹೋಳಿಗೆ, ಸೊಪ್ಪಿನ ದೋಸೆ ಹಾಗೂ ಮೌಲ್ಯ ವರ್ಧಿತ ಆಹಾರ ಪದಾರ್ಥಗಳು ಕಂಡವು. ಅನೇಕರು ಇಂತಹ ಮಳಿಗೆಯ ಕಡೆಗೆ ಭೇಟಟಿ ನೀಡಿ ಖಾದ್ಯಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಮೇಳದಲ್ಲಿ ಕೈತೋಟಗಳಲ್ಲಿ ಬೆಳೆಬಹುದಾದ ಸೊಪ್ಪು-ತರಕಾರಿ, ಗೆಡ್ಡೆ ಗೆಣಸುಗಳ ಪರಿಚಯವೂ ಇತ್ತು. ತೋಟಗಳಲ್ಲಿ ಇರುವ ಸೊಪ್ಪುಗಳ ಬಳಕೆಯ ಪ್ಲೆಕ್ಸ್‌ ಕೂಡಾ ಕಂಡುಬಂತು. ಹೀಗಾಗಿ ಮೇಳಕ್ಕೆ ಬಂದಿರುವ ಎಲ್ಲರಿಗೂ ತಮ್ಮ ಆಸಕ್ತಿಯ ವಿಭಾಗದಲ್ಲಿ ಭಾಗವಹಿಸಬಹುದಾಗಿತ್ತು.ಅನೇಕ ಸಮಯಗಳ ಪ್ರಯತ್ನವು ಯಶಸ್ಸು ಕಂಡಿದೆ. ಮೇಳಗಳ ಉದ್ದೇಶವೂ ಬೆಳೆಯುವವರಿಂದ ಬಳಕೆದಾರರಿಗೆ ಪರಿಚಯಿಸುವುದು. ಈ ಉದ್ದೇಶ ಯಶಸ್ಸು ಕಂಡಿದೆ.

ರೈತರು ಹಲವು ಉತ್ಪನ್ನಗಳನ್ನು ಬೆಳೆಯುತ್ತಾರೆ. ವಿಶೇಷವಾದ ತಳಿ, ಗಿಡ, ಫಸಲು ಇದ್ದರೂ ಮಾರುಕಟ್ಟೆ ಸಮಸ್ಯೆಯನ್ನು ಬಹುಪಾಲು ರೈತರು ಅನುಭವಿಸುತ್ತಾರೆ. ಜೋಯಿಡಾದಂತಹ ಪ್ರದೇಶದಲ್ಲಿ ಹಲವು ಬಗೆಯ ಗೆಡ್ಡೆಗೆಣಸು ಬೆಳೆಯುತ್ತಾರೆ, ಸೊಪ್ಪು ತರಕಾರಿ ಇದೆ,  ಹೊಸ ಹೊಸ ಬಳಕೆ ಅಲ್ಲಿದೆ. ಆದರೆ ಮಾರುಕಟ್ಟೆಯ ಕಡೆಗೆ ಬಂದಾಗ ಎಲ್ಲಾ ರೈತರು ಅನುಭವಿಸುವ ಸಮಸ್ಯೆಯನ್ನೇ ಅನುಭವಿಸುತ್ತಾರೆ. ಹೀಗಾಗಿ ಇಂತಹ ಮೇಳಗಳು ರೈತರಿಗೆ ದೊಡ್ಡ ವೇದಿಕೆ. ಇಲ್ಲಿ ತಾವು ಬೆಳೆಯುವ ಉತ್ಪನ್ನಗಳ ಪರಿಚಯ ಮಾಡಿ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಹೀಗಾಗಿ ರೈತರಿಗೆ ಇದೊಂದು ಉತ್ತಮವಾದ ವೇದಿಕೆ.

 

 

ನಗರದಲ್ಲಿ ಇರುವ ಬಹುಪಾಲು ಮಂದಿಗೆ ತರಕಾರಿಗಳನ್ನು ನೇರವಾಗಿ ರೈತರಿಂದಲೇ ಖರೀದಿ ಮಾಡಬೇಕು ಎನ್ನುವ ಅಭಿಲಾಷೆ ಇದ್ದರೂ ಸಾಧ್ಯವಾಗುವುದಿಲ್ಲ. ಮಂಗಳೂರಿನ ಸಾವಯವ ಬಳಗ ಈ ವೇದಿಕೆಯನ್ನು ಹಲವು ಸಮಯಗಳಿಂದ ನೀಡುತ್ತಿದೆ. ಆದರೆ ಗೆಡ್ಡೆ ಗೆಣಸು-ಸೊಪ್ಪು ತರಕಾರಿಯ ಮೇಳದ ಮೂಲಕ ಗ್ರಾಹಕರನ್ನು ಸೆಳೆದು ರೈತರಿಗೂ ಅನುಕೂಲ ಮಾಡಿಕೊಟ್ಟಿದೆ, ಗ್ರಾಹಕರಿಗೂ ಅವಕಾಶ ಕಲ್ಪಿಸಿದೆ. ಹೀಗಾಗಿ ಈ ಮೇಳವು ಮಹತ್ವವಾಗಿದೆ.

ಮೇಳದಲ್ಲಿ ವಿಶೇಷವಾಗಿ ಗೆಡ್ಡೆಗೆಣಸು ಪಾನಿಪೂರಿ, ತೆಂಗಿನಕಾಯಿನಿಂದಲೇ ತಯಾರಿಸುವ ಐಸ್‌ಕ್ರೀಂ, ಗೆಣಸು ಐಸ್‌ಕ್ರೀಂ, ಚಿಪ್ಸ್‌, ಮರಗೆಣಸು ಇತ್ಯಾದಿಗಳು ಗೆಡ್ಡೆ ಗೆಣಸುಗಳ ಬಳಕೆ ಮಾಡುವ ವಿಧಾನಗಳನ್ನೂ ಪರಿಚಯಿಸಿತು. ಹೀಗೂ ಗೆಡ್ಡೆ ಗೆಣಸುಗಳನ್ನು ಬಳಕೆ ಮಾಡಲು ಸಾಧ್ಯವಿದೆ ಎನ್ನುವ ಸಂದೇಶವೂ ಲಭ್ಯವಾಗಿದೆ.

 

 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಪೋಷಕರನ್ನು ಬಿಟ್ಟು ಮಕ್ಕಳು ನಾಪತ್ತೆ…!

ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ನಂತರ, ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಯಲ್ಲಿ ಬಿಟ್ಟು…

35 minutes ago

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್

ದೇಶದಲ್ಲಿ 90 ಸಾವಿರ ಸರ್ಕಾರಿ ಶಾಲೆಗಳು ಬಂದ್ ಆಗಿವೆ. ಬಿಹಾರ ಮತ್ತು ಉತ್ತರ…

55 minutes ago

ರಾಜ್ಯದಲ್ಲಿ ಶೀಘ್ರ 5 ಸಾವಿರ ಶಿಕ್ಷಕರ ನೇಮಕ

ಕಲ್ಯಾಣ ಕರ್ನಾಟಕ ಭಾಗದಲ್ಲಿ 1800 ಶಿಕ್ಷಕರು ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 5 ಸಾವಿರ…

1 hour ago

ಎಫ್‌ಪಿಒ ಗಳಿಗೆ ರಾಜ್ಯ ಸರ್ಕಾರದಿಂದ ನೆರವು

ರೈತರು ಸ್ಥಾಪಿಸಿರುವ ರೈತ ಉತ್ಪಾದಕ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯ ಸರಕಾರದಿಂದ ಸಕಲ ಸಹಕಾರ…

1 hour ago

ಜಾನುವಾರು ಗಣತಿ | ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಥಮ | 2.90 ಲಕ್ಷ ರೈತರು ಪಶುಸಂಗೋಪನೆಯಲ್ಲಿ |

21ನೇ ಜಾನುವಾರು ಗಣತಿ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಥಮ ಸ್ಥಾನ…

1 hour ago

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳ್ಳಿಗದ್ದೆಯ ಶಾಂತಿ ಎಸ್ಟೇಟ್‌ನಲ್ಲಿ ಪುಂಡಾನೆ ಸೆರೆ ಹಿಡಿಯುವಲ್ಲಿ …

1 hour ago