ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಜರ್ಮನ್ ಸಚಿವ : ಭಾರತದ ಡಿಜಿಟಲ್‌ ಮೂಲ ಸೌಕರ್ಯದ ಬಗ್ಗೆ ಆಶ್ಚರ್ಯ

August 21, 2023
6:32 PM
ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಫೆಡೆರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್, ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಡಿಜಿಟಲ್ ಪೇಮೆಂಟ್ ಮಾಡಿ ತರಕಾರಿ ಖರೀದಿಸಿರುವ ಫೋಟೋ ಮತ್ತು ವಿಡಿಯೋವನ್ನು ಜರ್ಮನಿ ಅಂಬೆಸ್ಸಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

ಭಾರತ ಇತ್ತೀಚೆಗೆ ಅನೇಕ ವಿಚಾರದಲ್ಲಿ ಮುಂದುವರೆದಿದೆ. ಅದರಲ್ಲೂ ಡಿಜಿಟಲ್‌ ಪೇಮೆಂಟ್‌ ವಿಷಯದಲ್ಲಂತೂ ಸಾಕಷ್ಟು ಬೆಳವಣಿಗೆ ಕಂಡಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ ಜರ್ಮನ್ ಸಚಿವ ಭಾರತದ ಡಿಜಿಟಲ್ ಯುಗದ ಬಗ್ಗೆ ಹಾಡಿ ಹೊಗಳಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Advertisement
Advertisement

ಭಾರತದಲ್ಲಿ ಡಿಜಿಟಲ್ ಪಾವತಿ ಆರಂಭವಾಗಿ ವರ್ಷಗಳೇ ಕಳೆದಿವೆ. ಇಂದು ಒಂದು ಟೀ ಕುಡಿದರೂ ಡಿಜಿಟಲ್ ಮೂಲಕವೇ ಹಣ ಪಾವತಿಸುತ್ತಾರೆ. ಸಾರಿಗೆ ವಾಹನಗಳಲ್ಲಿಯೂ ಯುಪಿಐ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ಮಾರುಕಟ್ಟೆಗಳಲ್ಲಿ ಎಲ್ಲಾ ಅಂಗಡಿಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇದೆ. ಈ ವ್ಯವಸ್ಥೆಯಿಂದ ಚಿಲ್ಲರೆ ಕೊಡುವ ಸಮಸ್ಯೆಗೆ ಕಡಿವಾಣ ಬಿದ್ದಿದೆ.

Advertisement

ಕೇವಲ ತರಕಾರಿ ಅಂಗಡಿ ಅಲ್ಲದೇ ವ್ಯವಹಾರ ನಡೆಯುವ ಪ್ರತಿ ಕ್ಷೇತ್ರದ ಹಳ್ಳಿ ಹಳ್ಳಿಗೂ ಡಿಜಿಟಲ್ ಪಾವತಿ ಕಾಲಿಟ್ಟಿದೆ. ಒಬ್ಬರ ಖಾತೆಯಿಂದ ಮತ್ತೊಂದು ಖಾತೆಗೂ ಹಣವನ್ನು ಇಂದು ಸುಲಭವಾಗಿ ಕಳಿಸಬಹುದು. ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಫೆಡೆರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್, ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿನ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಡಿಜಿಟಲ್ ಪೇಮೆಂಟ್ ಮಾಡಿ ತರಕಾರಿ ಖರೀದಿಸಿರುವ ಫೋಟೋ ಮತ್ತು ವಿಡಿಯೋವನ್ನು ಜರ್ಮನಿ ಅಂಬೆಸ್ಸಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಭಾರತದ ಡಿಜಿಟಲ್ ಯುಗದ ಬಗ್ಗೆ ಹೇಳಿದ್ದೇನು? : ಭಾರತದಲ್ಲಿಯ ಡಿಜಿಟಲ್ ಮೂಲ ಸೌಕರ್ಯ ಇಲ್ಲಿಯ ಯಶಸ್ಸು. ಇಲ್ಲಿಯ ಪ್ರತಿಯೊಬ್ಬರು ಯುಪಿಐ ವ್ಯವಸ್ಥೆಯನ್ನು ಬಳಸುತ್ತಾರೆ. ಕೆಲವೇ ಸೆಕೆಂಡ್ ಗಳಲ್ಲಿ ಯುಪಿಐ ಮೂಲಕ ವ್ಯವಹಾರ ನಡೆಸಬಹುದಾಗಿದೆ. ವೋಲ್ಕರ್ ವಿಸ್ಸಿಂಗ್ ಅವರ ಸಹ ಈ ಸರಳ ವಿಧಾನದ ಮೂಲಕ ವ್ಯವಹರಿಸುವ ಅನುಭವವನ್ನು ಪಡೆದುಕೊಂಡರು ಎಂದು ಬರೆಯಲಾಗಿದೆ. ಆಗಸ್ಟ್ 19ರಂದು ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಮಂತ್ರಿಗಳ ಸಭೆಯಲ್ಲಿ ಸಾರಿಗೆ ಫೆಡೆರಲ್ ಮಂತ್ರಿ ವೋಲ್ಕರ್ ವಿಸ್ಸಿಂಗ್ ಭಾಗಿಯಾಗಿದ್ದರು. ಈ ಸಮಯದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಸುತ್ತಾಡಿದ್ದಾರೆ.

Source : Twitter

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror