ದುಪ್ಪಟ್ಟು ದರ ಕೊಟ್ಟು ಖರೀದಿಸುವ ರಾಸುಗಳಿಗೆ ರೈತರು ತಪ್ಪದೇ ಜೀವ ವಿಮೆ ಮಾಡಿಸಬೇಕೆಂದು ಹಾಲು ಒಕ್ಕೂಟದ ನಿರ್ದೇಶಕ ಎನ್.ಹನುಮೇಶ್ ತಿಳಿಸಿದರು.
Advertisement
ಕೋಲಾರ –ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಶ್ರೀನಿವಾಸಪುರ ಶಿಬಿರ ಕಚೇರಿ ಅವರಿಂದ ಏರ್ಪಡಿಸಿದ್ದ ಸಹಕಾರ ಸಂಘಗಳಲ್ಲಿನ ನಿವೃತ್ತರಿಗೆ ಪ್ರೋತ್ಸಾಹಧನ ಮತ್ತು ಮೃತ ರಾಸುಗಳ ಪಾಲಕರಿಗೆ ಜೀವ ವಿಮಾ ಚೆಕ್ ವಿತರಿಸಿ ಮಾತನಾಡಿದರು. ಮಳೆಯಾಶ್ರಿತ ಕೃಷಿ ಬೆಳೆಗಳನ್ನು ನಂಬಿದರೆ ಜೀವನ ಮಾಡುವುದು ಕಷ್ಟಕರ. ನೀರಾವರಿ ಇಲ್ಲದೇ ಕಷ್ಟವಾಗುತ್ತಿರುವುದರಿಂದ ಹೈನೋದ್ಯಮ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು. ಪ್ರಗತಿ ಹೊಂದಿರುವ ಸಹಕಾರ ಸಂಘಗಳ ಹಾಲು ಡೇರಿಗಳಿಗೆ ಗುಣಮಟ್ಟದ ಹಾಲು ಹಾಕುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು. ಪ್ರತಿ ಹಸುಗಳಿಗೆ ವಿಮಾ ಸೌಲಭ್ಯ ಮಾಡಿಸಬೇಕು. ಒಂದು ವೇಳೆ ಅನಾರೋಗ್ಯದಿಂದ ಹಸುಗಳು ಮೃತಪಟ್ಟರೆ ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement