ಜಾಗತಿಕ ಕೋಕೋ ಬೆಲೆ ಕುಸಿತ | ಘಾನಾದಲ್ಲಿ ಕೋಕೋ ದರ ಭಾರೀ ಇಳಿಕೆ

February 15, 2026
5:50 AM

ಜಾಗತಿಕ ಕೋಕೋ ಬೆಲೆಗಳು ಒಂದು ವರ್ಷದ ಅವಧಿಯಲ್ಲಿ ಅರ್ಧದಷ್ಟು ಕುಸಿದಿರುವ ಹಿನ್ನೆಲೆಯಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಘಾನಾ ತನ್ನ ರೈತರಿಗೆ ನೀಡುವ ಮೂಲ ಧಾರಣೆಯಲ್ಲಿ ಕೋಕೋ ದರವನ್ನು ಕಡಿತಗೊಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ ಸುಮಾರು $4,000 ಮಟ್ಟಕ್ಕೆ ಬೆಲೆ ಇಳಿದಿರುವುದರಿಂದ, ಹೆಚ್ಚಿನ ಬೇಡಿಕೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಘಾನಾ ವಿಶ್ವದ ಎರಡನೇ ಅತಿದೊಡ್ಡ ಕೋಕೋ ಉತ್ಪಾದಕ ರಾಷ್ಟ್ರವಾಗಿದೆ.

ಘಾನಾ ಕೊಕೋ ಬೋರ್ಡ್‌ ಈ ಹಿಂದೆ ನಿಗದಿಪಡಿಸಿದ್ದ ರೈತರ ಮೂಲ ಧಾರಣೆ ದರ ಪ್ರತಿ ಟನ್‌ಗೆ ಸುಮಾರು $5,300 ಆಗಿತ್ತು. ಈ ಬಾರಿ ಈ ದರವನ್ನು $3,580 ಪ್ರತಿ ಮೆಟ್ರಿಕ್ ಟನ್‌ಗೆ ಇಳಿಸಲಾಗಿದೆ. ಕೋಕೋ ಬೇಡಿಕೆ ಕುಸಿದಿರುವುದರಿಂದ ರೈತರಿಗೆ ಹಣ ಪಾವತಿಸುವುದು ಅನೇಕರಿಗೆ ಕಷ್ಟವಾಗಿದೆ. ಪಾವತಿ ವಿಳಂಬದ ಪರಿಣಾಮವಾಗಿ ಸಾವಿರಾರು ರೈತರು ಕೃಷಿ ನಿರ್ವಹಣೆ ಸೇರಿದಂತೆ ಇತರ ಸಮಸ್ಯೆಗಳಿಂದ ಪರದಾಡಿದ್ದಾರೆ. ಮಾರಾಟವಾಗದ ಕೋಕೋ ಬೀನ್ಸ್‌ಗಳು ತೋಟಗಳಲ್ಲಿ ರಾಶಿಯಾಗಿ ಬಿದ್ದಿರುವುದಾಗಿ ವರದಿಯಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಧಿಕಾರಿಗಳ ಪ್ರಕಾರ, ಪರಿಣಾಮಕ್ಕೊಳಗಾದ ಎಲ್ಲಾ ಕೋಕೋ ರೈತರಿಗೆ ತಕ್ಷಣ ಮರುಪಾವತಿಯನ್ನು ಪ್ರಾರಂಭಿಸಲು ಸರ್ಕಾರವು ಕೊಕೋ ಬೋರ್ಡ್‌ ಗೆ ನಿರ್ದೇಶನ ನೀಡಿದೆ. ಜಾಗತಿಕ ಕೋಕೋ ಮಾರುಕಟ್ಟೆಯ ಚಲನೆ ಘಾನಾ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ನೀತಿ ನಿರ್ಣಯಗಳು ಸಾಧ್ಯತೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ
March 27, 2026
6:50 AM
by: ದ ರೂರಲ್ ಮಿರರ್.ಕಾಂ
ವೈಜ್ಞಾನಿಕ ಬೆಂಬಲ ಬೆಲೆ ಮತ್ತು ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
March 27, 2026
6:45 AM
by: ದ ರೂರಲ್ ಮಿರರ್.ಕಾಂ
ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ
March 27, 2026
6:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror