ಎಚ್.ಕೆ. ಡಿಸೈನ್ಸ್ ಮತ್ತು ಹರಿಕೃಷ್ಣ ಎಕ್ಸ್ಪೋಟ್ ಮುಂಬೈನ ಅಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದೆ.
ಈ ಉಂಗುರದಲ್ಲಿ ಸರಾಸರಿ 5೦,೦೦೦ಕ್ಕೂ ಹೆಚ್ಚು ವಜ್ರಗಳನ್ನು ಇಡುವುದರೊಂದಿಗೆ ಮಾರ್ಚ್ 11 ರಂದು ಈ ಸಾಧನೆಯು ಬೆಳಕಿಗೆ ಬಂದಿದೆ. ಮಾತ್ರವಲ್ಲ ಈ ಉಂಗುರಕ್ಕೆ ಯುಟಿಯೆರಿಯಾ ಎಂದು ಹೆಸರಿಸಲಾಗಿದೆ. ಇದರರ್ಥ ಪ್ರಕೃತಿಯೊಂದಿಗೆ ಒಂದಾಗುವುದು. ಇದರ ವಿಶೇಷತೆ ಏನೆಂದರೆ ಸೂರ್ಯಕಾಂತಿಯ ಮೇಲೆ ಚಿಟ್ಟೆ ಕೂರುವಂತೆ ಉಂಗುರದ ಡಿಸೈನ್ ಮಾಡಲಾಗಿದೆ, ಇದು ಸಂಪೂರ್ಣವಾಗಿ ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ.
ಆಭರಣದ ತುಣುಕನ್ನು ರಚಿಸಲು ಗ್ರಾಹಕರಿಂದ ಪಡೆದ ಮರುಬಳಕೆಯ ವಜ್ರಗಳೊಂದಿಗೆ ಬೆರೆಸಲಾಯಿತು. ಸಿದ್ಧಪಡಿಸಿದ ಉಂಗುರವು 460.55ಗ್ರಾಂ ತೂಕ ಮತ್ತು ರೂ. 6.4 ಕೋಟಿ ಮೌಲ್ಯವನ್ನು ಹೊಂದಿದೆ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel