ಹೋಮಕ್ಕೆ ಹಾಕಲು ಕಡಿಮೆ ದರದ ತುಪ್ಪ…! | ಇದೆಂತಾ ತುಪ್ಪ…!?

December 12, 2023
12:10 PM

ಕೆಲವು ಸಮಯದ ಹಿಂದೆ ಹೋಮಕ್ಕೆ ಬಳಸಿದ ತುಪ್ಪವನ್ನು ಪ್ರಸಾದದ ರೂಪದಲ್ಲಿ ಇರಿಸಿಕೊಂಡಿದ್ದ ಒಬ್ಬರು, ಕೆಲವು ದಿನಗಳ ನಂತರ ಅಚ್ಚರಿಪಟ್ಟರು. ಹೋಮಕ್ಕೆ ಬಳಸಿದ ತುಪ್ಪ ತೀರಾ ಗಟ್ಟಿಯಾಗಿತ್ತು, ಅದನ್ನು ಬಿಸಿ ಮಾಡಿ ಕರಗಿಸುವ ವೇಳೆ ಮೇಣವನ್ನು ಕರಗಿಸಿದ ಅನುಭವವಾಯ್ತು. ಅದರ ಹಿಂದೆ ಬಿದ್ದ ಅವರಿಗೆ ಸಿಕ್ಕಿದ್ದು, ತುಪ್ಪದ ಜೊತೆಗೆ ಬೆರೆಸುವ ವ್ಯಾಕ್ಸ್…!‌. ಅಂದರೆ ಕಡಿಮೆ ಬೆಲೆಯ , ಹೋಮಕ್ಕೆ ಬಳಸುವ ತುಪ್ಪಕ್ಕೂ ಬೆರಕೆಯಾಗಿರುವುದು  ತಿಳಿಯಿತು..!.

ತುಪ್ಪದ ದರ ಹೊರಗೆ ಐನೂರು ರೂಪಾಯಿ ತನಕ ಇದೆ. ಆದರೆ ದೇವರಿಗೆ ಅರ್ಪಿಸುವ ತುಪ್ಪ 125 ರಿಂದ 200 ರೂಪಾಯಿ ಕೇಜಿ. ಸ್ವಾಮಿ ಅಯ್ಯಪ್ಪ ಇರುಮುಡಿ ಸಲುವಾಗಿ ಲಕ್ಷಾಂತರ ಕೇಜಿ ತುಪ್ಪ ನವೆಂಬರನಿಂದ ಜನವರಿ ತನಕ ಬರುತ್ತದೆ. ಇದರಲ್ಲಿ ಇರುವುದು ದನದ ಕೊಬ್ಬು, ವ್ಯಾಕ್ಸ್‌, ಸುವಾಸನೆ ಬರಲು ಎಸೆನ್ಸ್. ಹತ್ತೀಕಾಳು ತಿನ್ನಿಸಿ ಬೆಳೆಸಿದ ಎತ್ತಿನ ಕೊಬ್ಬಿಗೂ ತುಪ್ಪಕ್ಕೂ ವ್ಯತ್ಯಾಸ ಕಂಡುಹಿಡಿಯುವುದು ಪ್ರಯೋಗ ಶಾಲೆಯಲ್ಲಿ ಮಾತ್ರ ಸಾಧ್ಯ. ಎರಡರ ಮೆಲ್ಟಿಂಗ್ ಪಾಯಿಂಟ್ ಕೂಡ ಹೆಚ್ಚು ಕಡಿಮೆ ಒಂದೇ. ಕಸಾಯಿಖಾನೆಗಳಿಂದ ನೇರ ಸರಬರಾಜು ತುಪ್ಪ ತಯಾರಿಕಾ ಘಟಕಕ್ಕೆ. ನೂರಾರು ನಕಲಿ ತುಪ್ಪ ತಯಾರಿಕಾ ಘಟಕಗಳಿವೆ. ಆದರೆ ಇವೂ ತಯಾರಿಸುವುದು ಮಾನವ ಬಳಕೆಗೆಂದೇ.

ಮಾರ್ಕೆಟ್ ನಲ್ಲಿ ಸಿಗುವ ಶೇಕಡ 50 ತುಪ್ಪ ನಕಲಿ ಅಂತ ವರದಿಯಿದೆ. ಈ ತುಪ್ಪ ಅಸಲಿ ತುಪ್ಪಕ್ಕಿಂತ ಹೆಚ್ಚು ರುಚಿ ಮತ್ತು ಪರಿಮಳ. ಬೆಣ್ಣೆ ದೋಸೆ ಹೋಟೆಲ್ ನಲ್ಲಿ ಕೊಡುವುದು ನಕಲಿ ಬೆಣ್ಣೆ. ಆದರೆ ಇದನ್ನು ತಿನ್ನುವುದರಿಂದ ಪಾರ್ಶ್ವವಾಯು , ಗ್ಯಾಂಗ್ರೀನ್ , ಕಿಡ್ನಿ ವೈಫಲ್ಯ ಉಂಟಾಗುತ್ತದೆ ಅಂತ ಸರಕಾರಕ್ಕೆ ವರದಿ ಆಗಿದೆ. ನಕಲಿ ತುಪ್ಪದಲ್ಲಿ ವನಸ್ಪತಿ ಬೆರೆಸುವುದನ್ನು ತಡೆಯಲು ವನಸ್ಪತಿಗೆ ಬಣ್ಣ ಹಾಕಬೇಕು ಅಂತ ವೆಜಿಟೇಬಲ್ಲ್ ಆಯಿಲ್ ಕಂಟ್ರೋಲ್ ಆರ್ಡರ್ ಪಾಸ್ ಮಾಡಿದೆ. ಇದರ ಅನುಸಾರ ವನಸ್ಪತಿಯಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಎಳ್ಳೆಣ್ಢೆ ಇರಲೇಬೇಕು. ಇದು ಅದಕ್ಕೆ ಅಗತ್ಯ ಬಣ್ಣ ಕೊಡುತ್ತದೆ.

ಇನ್ನು ದೇವರಿಗೆ ಕೊಡುವ ನಕಲಿ ತುಪ್ಪದ ಕತೆ ಇನ್ನೊಂದು. ಇದಕ್ಕೆ ಇನ್ನೇನೆನೋ ಬೆರೆಕೆ ಮಾಡುತ್ತಾರೆ. ಅಯ್ಯಪ್ಪ ಭಕ್ತರು ಲಕ್ಷಾಂತರ ಕ್ವಿಂಟಾಲ್ ದನದ ಕೊಬ್ಬನ್ನು ಶಬರಿಮಲೆ ಯಲ್ಲಿ ಪ್ರತೀ ವರ್ಷ ಹೋಗಿ ಹಾಕಿ ಬರುತ್ತಾರೆ…!

ಹೀಗಾಗಿ ಈ ನಕಲಿ ತುಪ್ಪದ ಬಗ್ಗೆ ತೀರಾ ಎಚ್ಚರಿಕೆ ಇರಬೇಕಾದ ಅಗತ್ಯ ಇದೆ.

Is this ghee going to God? Yes, whatever is devoted to God He accepts. He had accepted Kannappa’s meat. In many places there is also the ritual of offering Liquor, meat and cigarettes. But if you give beef ghee like that? If we give unknowingly, we think that there is no problem and we calm our mind. But deep down we don’t know.

ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ
March 12, 2026
11:48 AM
by: ಸಾಯಿಶೇಖರ್ ಕರಿಕಳ
ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ
March 12, 2026
11:36 AM
by: ಮಿರರ್‌ ಡೆಸ್ಕ್
ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ
March 12, 2026
7:20 AM
by: ಮಿರರ್‌ ಡೆಸ್ಕ್
ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ
March 12, 2026
7:16 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror