ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ನಮಗೆ ಬೇಕಾದನ್ನು ರಕ್ಷಿಸಿಕೊಳ್ಳಲು ಪ್ರಕೃತಿಯಲ್ಲಿಯೇ(Nature) ಅನೇಕ ಸಾರಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಇದಕ್ಕೆ ಕೃತಕ ವಸ್ತುಗಳು(Artificial) ಬೇಕಾಗಿಯೇ ಇಲ್ಲ. ಪ್ರಕೃತಿಯೊಂದಿಗೆ ಬದುಕಿ ಬಾಳಿದರೆ ಅಲ್ಲಿಯೇ ಬದುಕಬಹುದು. ಆದರೆ ಮನುಜ ಪರಿಸರ ಬಿಟ್ಟು ಕೃತಕದ ಮೊರೆ ಹೋದ ಪರಿಣಾಮ ಅನೇಕ ಅಸಹಜ ಪ್ರಕೃತಿ ಕ್ರಿಯೆಗಳನ್ನು ನೋಡುತ್ತಿದ್ದೇವೆ. ಬೇರೇನಿಲ್ಲ.. ಗಿಡಗಳಿಗೆ ಕೀಟನಾಶದಿಂದ(Pesticides) ದೂರವಿಡಲು ಈಗ ಮಾರುಕಟ್ಟೆಯಲ್ಲಿ (Market) ಸಿಗದ ರಾಸಾಯನಿಕ(Chemical) ವಸ್ತುಗಳಿಲ್ಲ. ಆದರೆ ನಾವು ಸಾವಯವನ(Organic) ಬಿಟ್ಟು ಅದರ ಹಿಂದೆ ಹೋಗಿದ್ದೇವೆ. ಅದರ ಪರಿಣಾಮ ಅನುಭವಿಸುತ್ತಲೂ ಇದ್ದೇವೆ. ಅದರಿಂದ ಹೊರ ಬನ್ನಿ.. ಇಲ್ಲಿದೆ ಕೆಲ ಮಾಹಿತಿ..
ಹಾಲುವಾಣ, ಬಾಳೆಯಲ್ಲಿ ಕ್ಯಾಲ್ಸಿಯಂ ಹಾಗೂ ಪೊಟ್ಯಾಷ್, ಹರಳು, ಹುಣಸೆಯಲ್ಲಿ ಸಾರಜನಕ. ಹುಣಸೆ ಎಲೆಯಿಂದ ಝಿಂಕ್ ಸಿಗುತ್ತದೆ. ತಂಗಡಿಯ ಎಲೆಯಲ್ಲಿ ತಾಮ್ರವಿದೆ. ಕರಿಬೇವು, ನುಗ್ಗೆಗಳಲ್ಲಿ ಕಬ್ಬಿಣ. ಎಕ್ಕ, ಉಮ್ಮತ್ತಿ ಎಲೆಗಳಲ್ಲಿ ಬೋರಾನ್ ಇದೆ. ಮತ್ತಿ ಎಲೆಯಲ್ಲಿ ಸುಣ್ಣದ ಅಂಶ ಸಿಕ್ಕರೆ, ಕಾಸರಕದ ಎಲೆಯಿಂದ ರಂಜಕ ಸಿಗುತ್ತದೆ. ಹುಣಾಲು, ಕುಮಸನ ಎಲೆಗಳಿಂದ ಸಾರಜನಕ, ಮೈಸೂರು ಬದನೆ, ಮುಳ್ಳುಬದನೆಗಳಿಂದ ಮ್ಯಾಂಗನೀಸ್ ಹಾಗೂ ಮೆಗ್ನೀಷಿಯಂ ಸಿಗುತ್ತದೆ. ಕಳ್ಳಿಗಿಡದಲ್ಲಿ ಪಾದರಸ, ಬೆಂಡೆ ಗಿಡದಲ್ಲಿ ಅಯೋಡಿನ್ ಇದೆ. ಲಾಂಟಾನ, ಸರ್ವೆ, ಬಿದಿರುಗಳಲ್ಲಿ ಸಿಲಿಕಾ ಇದೆ.
ಮುಳ್ಳುಗಿಡಗಳಲ್ಲಿ, ಕೆಸ, ಕಾಡುಸೂರಣ, ಕಾಗದದ ಹೂಗಳಲ್ಲಿ ಫಂಗಸ್ ನಿವಾರಕ ರಾಸಾಯನಿಕಗಳಿವೆ. ಕಾಂಗ್ರೆಸ್‌ಗಿಡ ನೊಣ ನಿವಾರಕ. ಚದುರಂಗ ಇರುವೆ ನಿವಾರಕ. ಸೊಪ್ಪಿನೊಂದಿಗೆ ತರುವ ಕೊನಕೆಗಳಲ್ಲಿ, ಜಿಗ್ಗಿನಲ್ಲಿ ಅತ್ಯಧಿಕ ಪೊಟ್ಯಾಷ್ ಇದೆ. ದ್ವಿದಳಗಳಲ್ಲಿ ಸಸ್ಯಪೋಷಕ ಪ್ರೇರಕಗಳಿವೆ. ಎಳ್ಳು, ಸಾಸಿವೆ ಗಿಡಗಳಲ್ಲಿ ಸಲ್ಫರ್ (ಗಂಧಕ). ತರಗೆಲೆ, ದರಕಿನಲ್ಲಿ, ನಾರುಬೇರುಗಳಲ್ಲಿ ಪೊಟ್ಯಾಷ್ ಇದೆ. ಎಲ್ಲಾ ರೀತಿಯ ಹೂವುಗಳಲ್ಲಿ ಮಾಲಿಬ್ಡಿನಂ ಇದೆ.
ಅಡುಸೋಗೆ, ಕುಸುಬೆ, ಅಗಸೆ, ಶೇಂಗಾಸೊಪ್ಪು, ಹರಳು, ಹತ್ತಿ, ಅಜೋಲಾ, ಇವುಗಳಲ್ಲಿ ಅತ್ಯಧಿಕ ಪ್ರಮಾಣದ ಸಾರಜನಕವಿದೆ. ಎಳ್ಳು, ಬೇವು, ಸಾಸಿವೆ, ಹೊಂಗೆ ಮುಂತಾದವುಗಳಲ್ಲಿ ರಂಜಕದ ಪ್ರಮಾಣ ಅತ್ಯಧಿಕವಾಗಿದೆ. ಹೊಗೆಸೊಪ್ಪಿನ ಕಾಂಡದಲ್ಲಿ ಪೊಟ್ಯಾಷ್ ಸಮೃದ್ಧ. ಅಜೋಲಾ, ಆಡುಸೋಗೆ, ಹೊಂಗೆ, ಸಸ್ಬೇನಿಯಾಗಳಲ್ಲೂ ಪೊಟ್ಯಾಷ್ ಚೆನ್ನಾಗಿಯೇ ಸಿಗುತ್ತದೆ.
1kg ಸೋಯಾಬಿನ್ 24 ಘಂಟೆ ನೆನೆಸಿ ರುಬ್ಬಿ 5 ltr ನೀರಿಗೆ ಬೆರೆಸಿ 500gram ಕಡಲೆಹಿಟ್ಟು 5ltr ನೀರಿಗೆ ಸೇರಿಸಿ 250gram ಬೆಲ್ಲ ಬೇರೆಸಬೇಕು.ಈ ದ್ರಾವಣ 8 ದಿನ ಕಳೆಯಲು ಬಿಟ್ಟು 15ltr ನೀರಿಗೆ 500ml ದ್ರಾವಣ ಬೆರೆಸಿ ಬೆಳೆಗೆ ಸಿಂಪರಣೆ ಮಾಡುವದರಿಂದ ಯೂರಿಯಾ ಗೊಬ್ಬರ ಉಪಯೋಗಿಸುವದನ್ನು ಬಿಡಬಹುದು.
ಕೀಟನಾಶಕ ತಯಾರಿಸುವ ವಿಧಾನ
1. 60 ಗ್ರಾಮ ತಂಬಾಕು
2. 20 ಗ್ರಾಮ ಉಪ್ಪು
3 20 ಗ್ರಾಮ ಸುಣ್ಣ
ಈ ಮೂರನ್ನು ಬೇರೆ ಬೇರೆ ಬೌಲ್ನಲ್ಲಿ 4 ಘಂಟೆಗಳ ಕಾಲ ನೆನೆಯಿಟ್ಟು ನಂತರ ಮೂರು ದ್ರಾವಣ ಒಂದು ಪಂಪನಲ್ಲಿ ಬೆರೆಸಿ ನೀರು ಹಾಕಿ ಸಿಂಪರಣೆ ಮಾಡಬೇಕು.
ಮೂಲ ಮಾಹಿತಿ : ಶಿವಾನಂದ ಹುಲಿಕೊಪ್ಪ 8197630141.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…