ಎಸಿ ಬಳಕೆಯಿಂದ ಜಾಗತಿಕ ತಾಪಮಾನ ಏರಿಕೆ..! | ತಾಪಮಾನ ನಿಯಂತ್ರಣಕ್ಕೆ ಏನು ಮಾಡಬಹುದು ಈಗ ?

June 3, 2023
5:12 PM

ಜಾಗತಿಕ ತಾಪಮಾನ ಏರಿಕೆ ಈಗ ಇಡೀ ಪ್ರಪಂಚದಲ್ಲಿ  ಬಹುದೊಡ್ಡ ತಲೆನೋವಿನ ಸಂಗತಿ. ತಾಪಮಾನ ಏರಿಕೆ ನಿಯಂತ್ರಣಕ್ಕೆ ಹಲವು ಪ್ರಯತ್ನ ಮಾಡಲಾಗುತ್ತಿದೆ. ಈಚೆಗೆ ನಡೆದ ಜಾಗತಿಕ ಸಮಾವೇಶದಲ್ಲೂ ತಾಪಮಾನ ನಿಯಂತ್ರಣದ ಬಗ್ಗೆ ಗಂಭೀರ ಚರ್ಚೆಯಾಗಿದೆ. ಮುಂದಿನ 25 ವರ್ಷಗಳಲ್ಲಿ ಕನಿಷ್ಟ 2 ಡಿಗ್ರಿ ಜಾಗತಿಕ ತಾಪಮಾನ ಇಳಿಕೆಯ ಪ್ರಯತ್ನಗಳು ನಡೆಯುತ್ತಿದೆ. ತಾಪಮಾನ ಏರಿಕೆಯಿಂದ ವಿವಿಧ ಸಮಸ್ಯೆಗಳು ಕಂಡುಬರುತ್ತಿದೆ ಎಂದು ವರದಿ ಇದೆ. ಇದೀಗ ಎಲ್ಲಾ ಪ್ರಯತ್ನಗಳ ನಡುವೆ, ಎಸಿ ಬಳಕೆಯೂ ತಾಪಮಾನ ಏರಿಕೆಗೆ ಕಾರಣವಾಗಿದೆ ಎಂಬುದು ಇನ್ನೊಂದು ವರದಿ.

Advertisement
Advertisement
Advertisement

ಜಾಗತಿಕ ತಾಪಮಾನ  ಏರಿಕೆಯು ಮಾನವನ ಸಂಕಟ ಮತ್ತು ಪರಿಸರ ವಿಪತ್ತುಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಬೇಸಿಗೆಯ ಬಿಸಿಲು  ತಾರಕಕ್ಕೆ ಏರುತ್ತಿದ್ದು, ಏರ್‌ಕೂಲರ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಈ ನಡುವೆ ಹಲವಾರು ಮಂದಿ ತಮ್ಮ ಮನೆ ಅಥವಾ ಕೋಣೆಗೆ ಹೊಂದಿಕೆಯಾಗುವ ಏರ್‌ಕೂಲರ್‌ಗಳನ್ನು  ಖರೀದಿ ಮಾಡಲು ಮುಂದಾಗುತ್ತಿದ್ದಾರೆ.ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನವು ಭಾರತದ ಹೆಚ್ಚಿನ ನಗರಗಳಲ್ಲಿ ಸಾಮಾನ್ಯವಾಗುತ್ತದೆ. ಈ ತಾಪದಿಂದ ಪಾರಾಗಲು ಜನರು ಎಸಿ ಅಥವಾ ಏರ್ ಕೂಲರ್‌ಗಳಂತಹ ಕೂಲಿಂಗ್ ಡಿವೈಸ್‌ಗಳನ್ನು ಖರೀದಿ ಮಾಡುವುದು ಅನಿವಾರ್ಯವಾಗಿದೆ.

Advertisement

ಜಗತ್ತಿನಲ್ಲಿ ಅಧಿಕವಾಗಿ ಏರುತ್ತಿರುವ ತಾಪಮಾನ, ಬಿಸಿಲಿನ ಗಾಳಿ ಸೂಸುವ ವೇವ್ಸ್‌ಗಳು, ಬರ ಮತ್ತು ಕಾಡ್ಗಿಚ್ಚು ಬೇಸಿಗೆಯಲ್ಲಿ ಸರ್ವೆ ಸಾಮಾನ್ಯವಾದ ಸಂಗತಿಗಳು ಆಗಿದ್ದರೂ, ಈ ಸಲ ಹೆಚ್ಚೇ ಎಂಬಂತೆ ಬಿಸಿಲಿನ ಧಗೆ ಹೆಚ್ಚಿದೆ. ಈ ಹವಾಮಾನ ಬದಲಾವಣೆಯು ಭೂಮಿಯ ತಾಪಮಾನದ ಮೇಲೆ ಅಗಾಧವಾಗಿ ಪರಿಣಾಮ ಬೀರಲಿದೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬರು ತಂಪಾಗಿರಬೇಕಾದ ಅಗತ್ಯತೆ ಹೆಚ್ಚಾಗಿದೆ.

ಹವಾಮಾನದ ವರದಿಗಳು ಏನು ಹೇಳುತ್ತವೆ ? : ಇತ್ತೀಚಿನ  ಹವಾಮಾನ ವರದಿಗಳ ಪ್ರಕಾರ, ಬಿಸಿಲಿನ ಧಗೆಯನ್ನು ಕಡಿಮೆ ಮಾಡಿಕೊಳ್ಳಲು,  ಜನರು ಅಗ್ಗವಾಗಿರುವ ಮತ್ತು ಪಾಕೆಟ್ ಸ್ನೇಹಿ ಏರ್‌ ಕಂಡಿಷನರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅಗ್ಗದ ಏರ್‌ ಕಂಡಿಷನ್‌ರ್‌ಗಳನ್ನು ಬಳಕೆ ಮಾಡುವುದರಿಂದ ಅವುಗಳು ಭೂಮಿಯ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಹೇಳುತ್ತಿವೆ.ಇದು ಸಮಸ್ಯೆಯನ್ನು ತಂದೊಡ್ಡುತ್ತಿವೆ.

Advertisement

ಬಿಸಿಲಿನ ಧಗೆಯನ್ನು ಹೇಗೆ ಎದುರಿಸುತ್ತಿದ್ದಾರೆ ಜನರು.. ? : ತಾಪಮಾನವನ್ನು ಎದುರಿಸಲು,  ಗ್ರಾಮೀಣ ಮತ್ತು ನಗರದ ಬಡ ಜನರು  ಕೈಗೆಟಕುವ ದರದಲ್ಲಿ ಏರ್‌ ಕೂಲರ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.  ಅವುಗಳ ಕಾರ್ಯ ದಕ್ಷತೆ ಬಗ್ಗೆ ಗಮನವೇ ಹರಿಸುತ್ತಿಲ್ಲ. ಅಗ್ಗದ ಏರ್‌ ಕಂಡಿಷನ್‌ರ್‌ಗಳು ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತವೆ. ಆದ್ದರಿಂದ ಅಗ್ಗದ ಏರ್‌ ಕಂಡಿಷನ್‌ರ್‌ಗಳು ಉತ್ತಮ ಆಯ್ಕೆಯಲ್ಲ ಎಂದು ವರದಿ ಹೇಳುತ್ತದೆ.

2050 ರ ಹೊತ್ತಿಗೆ, ಏರ್‌ ಕಂಡಿಷನ್‌ರ್‌ಗಳ ಬಳಕೆಯು ಪ್ರಪಂಚದಾದ್ಯಂತದ ಎಲ್ಲ ಮನೆಗಳಲ್ಲಿ ವಿದ್ಯುತ್‌ನ ಅತಿದೊಡ್ಡ ಗ್ರಾಹಕನಾಗಿ ಇತರ ಉಪಕರಣಗಳನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಈ ಬೇಡಿಕೆಯನ್ನು ಪೂರೈಸಲು, 2,500 ಗಿಗಾವ್ಯಾಟ್‌ಗಳ ಹೆಚ್ಚುವರಿ ಸಾಮರ್ಥ್ಯದ ಅಗತ್ಯವಿದೆ.  ಕೂಲಿಂಗ್‌ ಉಪಕರಣಗಳ ಬೇಡಿಕೆಯಲ್ಲಿ ನಿರೀಕ್ಷಿತ ಗಮನಾರ್ಹ ಬೆಳವಣಿಗೆಯನ್ನು ಹೊಂದಿರುವ ದೇಶಗಳು, ವಿಶೇಷವಾಗಿ ಭಾರತ, ಚೀನಾ ಮತ್ತು ಇಂಡೋನೇಷ್ಯಾ ಆಗಿವೆ. ಇವುಗಳು ಯೋಜಿತ ಕೂಲಿಂಗ್ ಅಗತ್ಯಗಳನ್ನು ಪೂರೈಸಲು ಗಣನೀಯ ಮತ್ತು ದುಬಾರಿ ಗರಿಷ್ಠ ಶಕ್ತಿ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ವರದಿಯು ತಿಳಿಸಿದೆ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕುಕ್ಕೆಸುಬ್ರಹ್ಮಣ್ಯ | ಗಣೇಶೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ವೈಭವ…! |
September 24, 2023
7:59 PM
by: ದ ರೂರಲ್ ಮಿರರ್.ಕಾಂ
ಸ್ನೇಹದಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ | ಪಕ್ಷಿಗಳ ಸ್ವರ ಸಾಮ್ರಾಜ್ಯಕ್ಕೆ ಸಸ್ಯರಾಶಿ ಅವಶ್ಯ
September 24, 2023
7:40 PM
by: ದ ರೂರಲ್ ಮಿರರ್.ಕಾಂ
ಪೆರಾಜೆ ಕಲ್ಲಿನ ಗಣಿಗಾರಿಕೆ | ಸ್ಪೋಟಕ ಬಳಸದೇ ಗಣಿಗಾರಿಕೆಗೆ ಸೂಚನೆ | ಪೆರಾಜೆ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ಪೂಜೆ |
September 24, 2023
7:33 PM
by: ದ ರೂರಲ್ ಮಿರರ್.ಕಾಂ
ಗಣೇಶ ಉತ್ಸವ ಸಂಭ್ರಮಗಳಲ್ಲಿ ಭಾಗಿಯಾದ ಅರುಣ್‌ ಪುತ್ತಿಲ | 40 ಕ್ಕೂ ಅಧಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರ ನೆಚ್ಚಿನ “ಅರುಣಣ್ಣ” |
September 24, 2023
6:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror