ಆಡಿನ ಹಾಲಿಗಿದೆ ಭಾರಿ ಬೇಡಿಕೆ | ತಾಯಿ ಹಾಲಿಗೆ ಸಮ ಈ ಹಾಲು | ಅದರಲ್ಲಿರುವ ಪೌಷ್ಟಿಕತೆ ಆರೋಗ್ಯಕ್ಕೆ ಉತ್ತಮ |

February 27, 2023
4:12 PM

ಆಡು ಬಡವರ ಹಸು. ಆಡು ಸಾಕಾಣಿಕೆ ಸಣ್ಣ ರೈತರ ಜೀವನೋಪಾಯಕ್ಕೆ ಸೂಕ್ತವಾದ ಉದ್ದಿಮೆ, ಹಸುವನ್ನು ಕೊಳ್ಳಲಾಗದ ಒಬ್ಬ ಬಡ ರೈತನ ಪಾಲಿಗೆ ಆಡು ಕಾಮಧೇನು. ಆಡಿನ ಹಾಲು ತಾಯಿಯ ಹಾಲಿನಷ್ಠೆ ಪೌಷ್ಠಿಕತೆ ಹೊಂದಿದೆ.

Advertisement
Advertisement
Advertisement

ದನ, ಎಮ್ಮೆ , ಆಡು ಇವುಗಳೆಲ್ಲ ನಮ್ಮ ಆರೋಗ್ಯಕ್ಕೆ ಅಪಾರವಾದ ಕೊಡುಗೆ ನೀಡುವ ಪ್ರಾಣಿಗಳು. ಆದರಲ್ಲೂ ಆಡಿನ ಹಾಲು ತುಂಬಾ ಪೌಷ್ಠಿಕತೆ ಉಳ್ಳದ್ದು. ಇದು ಒಂದು ಸಮತೋಲನ ಆಹಾರದ ಮೂಲ ಕೂಡ ಹೌದು. ತಾಯಿ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು  ಆಡಿನ ಹಾಲಿನಲ್ಲಿರುತ್ತೆ. ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.

Advertisement

ಮನುಷ್ಯರಲ್ಲಿ ತಾಯಿ ಹಾಲಿನಲ್ಲಿರುವ ಪೋಷಕಾಂಶಗಳೆಲ್ಲ ಆಡಿನ ಹಾಲಿನಲ್ಲಿರುತ್ತವೆ, ಅಲ್ಲದೆ ಆಡಿನ ಹಾಲು ಸರಳವಾಗಿ ಜೀರ್ಣವಾಗುತ್ತದೆ, ಹೀಗಾಗಿ ಚಿಕ್ಕ ಮಕ್ಕಳಿಗೆ ತಾಯಿ ಹಾಲಿಗೆ ಪರ್ಯಾಯವಾಗಿ ಆಡಿನ ಹಾಲು ಉತ್ತಮ.

ಪೌಷ್ಟಿಕತೆ:

Advertisement

ಆಡಿನ ಹಾಲು ಹೆಚ್ಚು ಪೌಷ್ಟಿಕತೆಯಿಂದ ಕೂಡಿದ್ದು ಎಲ್ಲ ಜೀವಸತ್ವಗಳು, ಅಮೈನೋ ಆಮ್ಲಗಳು ಮತ್ತು ಖನಿಜಗಳು ಸರಿ ಸುಮಾರು ಆಕಳ ಹಾಲಿನಲ್ಲಿರುವ ಪ್ರಮಾಣದಷ್ಟೇ ಇರುತ್ತದೆ.

ಆಡಿನ ಹಾಲಿನಲ್ಲಿರುವ ಪೋಶಕಾಂಶಗಳು (100 ಎಂ. ಎಲ್.)

Advertisement

ಪೋಶಕಾಂಶಗಳು                  ಪ್ರಮಾಣ

ಸಸಾರಜನಕ                    3.3 ಗ್ರಾಂ

Advertisement

ಕೊಬ್ಬು                           4.5 ಗ್ರಾಂ

ಖನಿಜಾಂಶ                      0.8 ಗ್ರಾಂ

Advertisement

ಕಾರ್ಬೋಹೈಡ್ರೇಟ್            4.6 ಗ್ರಾಂ

ಶಕ್ತಿ                               72 ಕಿ. ಕ್ಯಾಲೋರಿ

Advertisement

ಕ್ಯಾಲ್ಸಿಯಂ                      170 ಮಿ. ಗ್ರಾಂ

ಫಾಸ್ಪರಸ್                      120 ಮಿ. ಗ್ರಾಂ

Advertisement

ಕಬ್ಬಿಣ                            0.3 ಮಿ. ಗ್ರಾಂ

ಬೀಟಾ ಕೆರೋಟಿನ್            55 ಗ್ರಾಂ

Advertisement

ವಿಟಾಮಿನ್ ಸಿ                  1 ಮಿ. ಗ್ರಾಂ

ಸೋಡಿಯಂ                     11 ಮಿ. ಗ್ರಾಂ

Advertisement

ಪೋಟ್ಯಾಶಿಯಂ                110 ಮಿ. ಗ್ರಾಂ

ಹಾಲಿನಲ್ಲಿರುವ ಕೊಬ್ಬಿನ ಕಣಗಳು ಚಿಕ್ಕದಾಗಿದ್ದು ಹಾಲಿನಲ್ಲಿ ಸಮನಾಗಿ ಬೆರೆತ ಕಾರಣ ಇತರ ಹಾಲಿನ ಹಾಗೆ ಈ ಹಾಲು ಕೆನೆ ಕಟ್ಟುವುದಿಲ್ಲ, ಆದರೆ ಆಡಿನ ಹಾಲಿನಿಂದ ಖೋವಾ, ಪನೀರ್, ತುಪ್ಪ, ಚೀಸ್ ಇತ್ಯಾದಿ ಪದಾರ್ಥಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲದೇ ಅವುಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಚಿಕ್ಕ ಮಕ್ಕಳಿಗೆ ಆಡಿನ ಹಾಲನ್ನು ತಾಯಿ ಹಾಲಿಗೆ ಪರ್ಯಾಯವಾಗಿ ಬಳಸಬಹುದು.

Advertisement

ಈ ಹಾಲು ಜೀರ್ಣಶಕ್ತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ವಾಂತಿ ಭೇದಿ, ಉಸಿರಾಟದ ತೊಂದರೆಗಳಂತಹ ಆರೋಗ್ಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆ ಮಾಡುವುದರ ಜೊತೆಗೆ ಹೃದಯ ರೊಗ, ಮೂರ್ಛೆರೋಗ, ಪಿತ್ತಕೋಶದ ಹರಳು ಮತ್ತು ಇತರೆ ರೋಗಗಳ ಪ್ರಮಾಣ ಕಡಿಮೆ ಮಾಡುತ್ತದೆ. ಆಡಿನ ಹಾಲಿನ ದಿನನಿತ್ಯದ ಬಳಕೆಯಿಂದ ದೇಹದ ತೂಕ ಹೆಚ್ಚುತ್ತದೆ.

ಅಸ್ಥಿಪಂಜರದಲ್ಲಿ ಖನಿಜಾಂಶಗಳ ಶೇಖರಣೆ, ರಕ್ತದ ಹಿಮೋಗ್ಲೋಬಿನ್ ಅಂಶ ಕೂಡ ಹೆಚ್ಚಾಗುತ್ತದೆ. ಆಡಿನ ಹಾಲು ಪೌಷ್ಠಿಕಾಂಶಗಳಲ್ಲಿ ತಾಯಿಯ ಎದೆ ಹಾಲಿಗೆ ತುಂಬ ಹತ್ತಿರವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಂಗಳೂರಿನಲ್ಲಿ ನೀರಿಗಾಗಿ ಖರ್ಚು…! | ಜಲಮಂಡಳಿಗೆ ಆರ್ಥಿಕ ಸಂಕಷ್ಟ..!
March 29, 2024
3:03 PM
by: ದ ರೂರಲ್ ಮಿರರ್.ಕಾಂ
Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror