ಜೈವಿಕ ಆರ್ಥಿಕತೆ (Bioeconomy) ಎಂಬ ಹೊಸ ಆರ್ಥಿಕ ಮಾದರಿಯತ್ತ ವಿಶ್ವದ ಕೈಗಾರಿಕೆಗಳು ಕ್ರಮೇಣ ಸಾಗುತ್ತಿರುವ ಸಂದರ್ಭದಲ್ಲಿ ಗೋದಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ ಮಾದರಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದೆ.
ಸಿಂಗಾಪುರದಲ್ಲಿ ನಡೆದ Bio Innovations APAC 2026 ಸಮಾವೇಶದಲ್ಲಿ ಕಂಪನಿಯ ಪ್ರತಿನಿಧಿಗಳು ಕೃಷಿ ಸಂಪನ್ಮೂಲಗಳನ್ನು ಬಳಸಿ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ತಮ್ಮ ಸಮಗ್ರ ಮಾದರಿಯನ್ನು ವಿವರಿಸಿದರು.
ಸಮಾವೇಶದಲ್ಲಿ ಕಂಪನಿಯ ಅಧಿಕಾರಿಗಳು “Soil-to-Bio Products” ಎಂಬ ಕಲ್ಪನೆಯನ್ನು ಪರಿಚಯಿಸಿದರು. ಈ ಮಾದರಿಯಲ್ಲಿ, ಕೃಷಿ ಮೂಲದ ಕಚ್ಚಾ ವಸ್ತುಗಳು, ಜೈವಿಕ ತಂತ್ರಜ್ಞಾನ, ಕೈಗಾರಿಕಾ ಸಂಸ್ಕರಣಾ ವಿಧಾನಗಳು ಇವುಗಳನ್ನು ಒಟ್ಟುಗೂಡಿಸಿ ಬಯೋ ಆಧಾರಿತ ರಸಾಯನಗಳು, ಇಂಧನ ಮತ್ತು ಇತರೆ ಉತ್ಪನ್ನಗಳು ತಯಾರಿಸಲಾಗುತ್ತದೆ. ಈ ವಿಧಾನದಿಂದ ಪೆಟ್ರೋಲಿಯಂ ಆಧಾರಿತ ರಸಾಯನಗಳ ಬಳಕೆ ಕಡಿಮೆಯಾಗುತ್ತದೆ ಹಾಗೂ ಕಾರ್ಬನ್ ಉತ್ಸರ್ಜನೆ ಕಡಿಮೆ ಮಾಡುವ ಸಾಧ್ಯತೆ ಹೆಚ್ಚುತ್ತದೆ.
ಕೃಷಿ ಸಂಪನ್ಮೂಲಗಳಿಂದ ಕೈಗಾರಿಕಾ ಉತ್ಪನ್ನಗಳು : ಗೋದಾವರಿ ಬಯೋರೆಫೈನರೀಸ್ ಈಗಾಗಲೇ ಕೃಷಿ ಮೂಲದ ಜೈವಿಕ ಕಚ್ಚಾ ವಸ್ತುಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ. ಇವುಗಳಲ್ಲಿ, ಆಹಾರ ಪದಾರ್ಥಗಳಿಗೆ ಬಳಸುವ ಘಟಕಗಳು, ಜೈವಿಕ ಇಂಧನ, ವಿಶೇಷ ರಸಾಯನಗಳು. ಇವುಗಳು ಕಾಸ್ಮೆಟಿಕ್ಸ್, ಅಗ್ರೋಕೆಮಿಕಲ್ಸ್, ಅಂಟು ಪದಾರ್ಥಗಳು, ಕೋಟಿಂಗ್‌ಗಳು ಸೇರಿದಂತೆ ಹಲವು ಕೈಗಾರಿಕೆಗಳಿಗೆ ಪೂರೈಕೆ ಆಗುತ್ತಿವೆ.
ಹವಾಮಾನ ಬದಲಾವಣೆಗೆ ಪರಿಹಾರ ಹುಡುಕುವ ಪ್ರಯತ್ನ: ಕಂಪನಿಯ ಪ್ರಕಾರ, ರಸಾಯನ ಕೈಗಾರಿಕೆಯನ್ನು ಕಾರ್ಬನ್ ಕಡಿತದತ್ತ ಕರೆದೊಯ್ಯಲು ಒಂದೇ ತಂತ್ರಜ್ಞಾನ ಸಾಕಾಗುವುದಿಲ್ಲ. ಹೊಸ ತಂತ್ರಜ್ಞಾನಗಳು, ಉತ್ಪಾದನಾ ದಕ್ಷತೆ, ಕೃಷಿ ಮೂಲದ ಕಚ್ಚಾ ವಸ್ತುಗಳ ಸುಧಾರಣೆ, ಸರಕಾರದ ನೀತಿಯ ಬೆಂಬಲ. ಇವುಗಳ ಸಮನ್ವಯದಿಂದ ಮಾತ್ರ ಸಸ್ಟೇನಬಲ್ ಕೈಗಾರಿಕಾ ವ್ಯವಸ್ಥೆ ನಿರ್ಮಾಣ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Godavari Biorefineries showcased its integrated “soil-to-bio-products” model at the Bio Innovations APAC 2026 conference in Singapore. The company highlighted how agricultural feedstocks can be converted into bio-based chemicals, fuels, and industrial products through biotechnology and industrial processing. This approach supports the transition from fossil-based resources to a sustainable bioeconomy.

