Advertisement
ಸುದ್ದಿಗಳು

ಪೆಟ್ರೋಲಿಯಂಗೆ ಪರ್ಯಾಯದತ್ತ : ಕೃಷಿ ಸಂಪನ್ಮೂಲಗಳಿಂದ ಬಯೋ ಉತ್ಪನ್ನಗಳತ್ತ ಆದ್ಯತೆ

Share

ಜೈವಿಕ ಆರ್ಥಿಕತೆ (Bioeconomy) ಎಂಬ ಹೊಸ ಆರ್ಥಿಕ ಮಾದರಿಯತ್ತ ವಿಶ್ವದ ಕೈಗಾರಿಕೆಗಳು ಕ್ರಮೇಣ ಸಾಗುತ್ತಿರುವ ಸಂದರ್ಭದಲ್ಲಿ ಗೋದಾವರಿ ಬಯೋರೆಫೈನರೀಸ್ ತನ್ನ ಜೈವಿಕ ಉತ್ಪಾದನಾ ಮಾದರಿಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದೆ.

ಸಿಂಗಾಪುರದಲ್ಲಿ ನಡೆದ Bio Innovations APAC 2026 ಸಮಾವೇಶದಲ್ಲಿ ಕಂಪನಿಯ ಪ್ರತಿನಿಧಿಗಳು ಕೃಷಿ ಸಂಪನ್ಮೂಲಗಳನ್ನು ಬಳಸಿ ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸುವ ತಮ್ಮ ಸಮಗ್ರ ಮಾದರಿಯನ್ನು ವಿವರಿಸಿದರು.

ಸಮಾವೇಶದಲ್ಲಿ ಕಂಪನಿಯ ಅಧಿಕಾರಿಗಳು “Soil-to-Bio Products” ಎಂಬ ಕಲ್ಪನೆಯನ್ನು ಪರಿಚಯಿಸಿದರು. ಈ ಮಾದರಿಯಲ್ಲಿ, ಕೃಷಿ ಮೂಲದ ಕಚ್ಚಾ ವಸ್ತುಗಳು, ಜೈವಿಕ ತಂತ್ರಜ್ಞಾನ,  ಕೈಗಾರಿಕಾ ಸಂಸ್ಕರಣಾ ವಿಧಾನಗಳು ಇವುಗಳನ್ನು ಒಟ್ಟುಗೂಡಿಸಿ ಬಯೋ ಆಧಾರಿತ ರಸಾಯನಗಳು, ಇಂಧನ ಮತ್ತು ಇತರೆ ಉತ್ಪನ್ನಗಳು ತಯಾರಿಸಲಾಗುತ್ತದೆ.  ಈ ವಿಧಾನದಿಂದ ಪೆಟ್ರೋಲಿಯಂ ಆಧಾರಿತ ರಸಾಯನಗಳ ಬಳಕೆ ಕಡಿಮೆಯಾಗುತ್ತದೆ ಹಾಗೂ ಕಾರ್ಬನ್ ಉತ್ಸರ್ಜನೆ ಕಡಿಮೆ ಮಾಡುವ ಸಾಧ್ಯತೆ ಹೆಚ್ಚುತ್ತದೆ.

ಕೃಷಿ ಸಂಪನ್ಮೂಲಗಳಿಂದ ಕೈಗಾರಿಕಾ ಉತ್ಪನ್ನಗಳು : ಗೋದಾವರಿ ಬಯೋರೆಫೈನರೀಸ್ ಈಗಾಗಲೇ ಕೃಷಿ ಮೂಲದ ಜೈವಿಕ ಕಚ್ಚಾ ವಸ್ತುಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದೆ.  ಇವುಗಳಲ್ಲಿ, ಆಹಾರ ಪದಾರ್ಥಗಳಿಗೆ ಬಳಸುವ ಘಟಕಗಳು, ಜೈವಿಕ ಇಂಧನ, ವಿಶೇಷ ರಸಾಯನಗಳು.  ಇವುಗಳು ಕಾಸ್ಮೆಟಿಕ್ಸ್‌, ಅಗ್ರೋಕೆಮಿಕಲ್ಸ್‌, ಅಂಟು ಪದಾರ್ಥಗಳು, ಕೋಟಿಂಗ್‌ಗಳು ಸೇರಿದಂತೆ ಹಲವು ಕೈಗಾರಿಕೆಗಳಿಗೆ ಪೂರೈಕೆ ಆಗುತ್ತಿವೆ.

ಹವಾಮಾನ ಬದಲಾವಣೆಗೆ ಪರಿಹಾರ ಹುಡುಕುವ ಪ್ರಯತ್ನ: ಕಂಪನಿಯ ಪ್ರಕಾರ, ರಸಾಯನ ಕೈಗಾರಿಕೆಯನ್ನು ಕಾರ್ಬನ್ ಕಡಿತದತ್ತ ಕರೆದೊಯ್ಯಲು ಒಂದೇ ತಂತ್ರಜ್ಞಾನ ಸಾಕಾಗುವುದಿಲ್ಲ. ಹೊಸ ತಂತ್ರಜ್ಞಾನಗಳು, ಉತ್ಪಾದನಾ ದಕ್ಷತೆ, ಕೃಷಿ ಮೂಲದ ಕಚ್ಚಾ ವಸ್ತುಗಳ ಸುಧಾರಣೆ, ಸರಕಾರದ ನೀತಿಯ ಬೆಂಬಲ. ಇವುಗಳ ಸಮನ್ವಯದಿಂದ ಮಾತ್ರ ಸಸ್ಟೇನಬಲ್ ಕೈಗಾರಿಕಾ ವ್ಯವಸ್ಥೆ ನಿರ್ಮಾಣ ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Godavari Biorefineries showcased its integrated “soil-to-bio-products” model at the Bio Innovations APAC 2026 conference in Singapore. The company highlighted how agricultural feedstocks can be converted into bio-based chemicals, fuels, and industrial products through biotechnology and industrial processing. This approach supports the transition from fossil-based resources to a sustainable bioeconomy.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ದೇಶೀಯ ಗ್ರಾಹಕರಿಗೆ ಇಂಧನ ಕೊರತೆ ಇಲ್ಲ: CNG – PNG ಪೂರೈಕೆ ನಿರಂತರ – ಸಚಿವ ಹರ್ದೀಪ್ ಸಿಂಗ್ ಪುರಿ

ದೇಶೀಯ ಗ್ರಾಹಕರಿಗೆ ಸಿಎನ್ಜಿ, ಪಿಎನ್ಜಿ ಹಾಗೂ ಎಲ್‌ಪಿಜಿ ಇಂಧನ ಪೂರೈಕೆಯಲ್ಲಿ ಯಾವುದೇ ಕೊರತೆ…

9 minutes ago

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತ ಇಲ್ಲ | ಉತ್ತಮ ದರಕ್ಕಾಗಿ ಓಪನ್‌ ಮಾರ್ಕೆಟ್‌ಗೆ ರೈತರ ಒಲವು

ಗೋವಾದಲ್ಲಿ ಹಲಸು ಉತ್ಪಾದನೆ ಕುಸಿತವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಉತ್ತಮ ದರದ ಕಾರಣ…

18 minutes ago

ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ಇಲ್ಲ | ಪ್ರತಿ 25 ದಿನಕ್ಕೊಂದು ಸಿಲಿಂಡರ್‌ ಪೂರೈಕೆ – ಸಚಿವ ಮುನಿಯಪ್ಪ ಭರವಸೆ

ರಾಜ್ಯದಲ್ಲಿ ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸಚಿವ…

21 minutes ago

ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ | ರೋಗ ನಿರ್ವಹಣೆ ತಪ್ಪಿದರೆ ಇಳುವರಿ ಕುಸಿತ..! – ಅಡಿಕೆ ಸಮೀಕ್ಷೆ ವರದಿ

ಅಡಿಕೆ ಇಳುವರಿ ಕುಸಿತಕ್ಕೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹವಾಮಾನ ವೈಪರೀತ್ಯ ಪ್ರಮುಖ…

25 minutes ago

ಬಿಸಿ ಆಹಾರ ಪಾರ್ಸೆಲ್‌ಗೆ ಪ್ಲಾಸ್ಟಿಕ್‌, ಪತ್ರಿಕೆ ನಿಷೇಧ…! : ಸಾರ್ವಜನಿಕ ಧೂಮಪಾನಕ್ಕೆ ₹1000 ದಂಡ ಎಚ್ಚರಿಕೆ

ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಹಾಗೂ ಪತ್ರಿಕೆಗಳಲ್ಲಿ ಬಿಸಿ ಆಹಾರ ಪಾರ್ಸೆಲ್‌ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ…

10 hours ago

ಅಡಿಕೆ ಬೆಳೆಗಾರರೇ ಗಾಬರಿ ಬೇಡ | ಮಾರುಕಟ್ಟೆಯ ‘ತಾತ್ಕಾಲಿಕ ತಿದ್ದುಪಡಿ’ಯ ಹಿಂದಿದೆ ಆರ್ಥಿಕ ಲೆಕ್ಕಾಚಾರ

ಅಡಿಕೆ ಮಾರುಕಟ್ಟೆಯ ಇತ್ತೀಚಿನ ಕುಸಿತ ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಹಣದ ಹರಿವು…

12 hours ago