ಸೆಗಣಿಯಿಂದ ಆರ್ಥಿಕ ಸಮೃದ್ಧಿ ಹೆಚ್ಚಿಸಿದ ಛತ್ತಿಸ್‌ಗಢ | ಗೋದನ್ ನ್ಯಾಯ್ ಯೋಜನೆ ಜಾರಿ |

January 16, 2022
9:10 PM

ದೇಶ ಎದುರಿಸುತ್ತಿರುವ  ನಿರುದ್ಯೋಗವನ್ನು ಕಡಿಮೆ ಮಾಡಲು ಛತ್ತೀಸ್‌ಗಢ ಸರ್ಕಾರವು ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿಕೊಂಡಿದೆ. ಇಲ್ಲಿ ಸೆಗಣಿ ಬಳಕೆ ವರ್ಮಿ- ಕಾಂಪೋಸ್ಟ್, ಮಣ್ಣಿನ ಪಾತ್ರೆಗಳು, ಅಗರಬತ್ತಿಗಳ ತಯಾರಿಸಲು ಸೆಗಣಿ ಪ್ರತಿ ಕೆಜಿಗೆ 2 ರೂಗೆ ಖರೀದಿಸಲಾಗುತ್ತದೆ. ಈ ಯೋಜನೆಯಿಂದಾಗಿ ಒಂದೆಡೆ ದನಕರುಗಳು ಮತ್ತು ಸೆಗಣಿ ಸಂಗ್ರಹಿಸುವವರು ಹಣ ಗಳಿಸಿದರೆ ಮತ್ತೊಂದೆಡೆ ಉದ್ಯೋಗ ಸೃಷ್ಟಿಯಾಗಿದೆ.

ಗೋಧನ್ ನ್ಯಾಯ್ ಯೋಜನೆಯನ್ನು ಅಳವಡಿಸಿ, ಇದರ ಅಡಿಯಲ್ಲಿ ಗೋಥಾನ್ ಗಳನ್ನು ಹಗಲಿನಲ್ಲಿ ಜಾನುವಾರುಗಳನ್ನು ತಂದು ಆಹಾರ, ನೀರು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ನಿರ್ಮಿಸಲಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2,80,000 ಜಾನುವಾರು ಹೊಂದಿರುವ ರೈತರು ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಎರಡು ಲಕ್ಷದಷ್ಟು ರೈತರು  ಸೆಗಣಿ ಮಾರಾಟ ಮಾಡಿದ್ದು, 59 ಲಕ್ಷ ಕ್ವಿಂಟಲ್ ಸೆಗಣಿ ಖರೀದಿಗೆ ಕಾರಣವಾಗಿದೆ.

ಸಮಿತಿಗಳು ಖರೀದಿಸಿದ ಸೆಗಣಿಯಿಂದ 10,10,555 ಕ್ವಿಂಟಾಲ್ ವರ್ಮಿ ಕಾಂಪೋಸ್ಟ್ ತಯಾರಿಸಲಾಗಿದ್ದು, 4,31,701 ಕ್ವಿಂಟಾಲ್ ಸೂಪರ್ ಕಾಂಪೋಸ್ಟ್ ತಯಾರಿಸಲಾಗಿದೆ. ಈ ವ್ಯವಹಾರದಿಂದ 48 ಕೋಟಿ ರೂಪಾಯಿ ಆದಾಯವಾಗಿದ್ದರೆ, ವರ್ಮಿ ಕಾಂಪೋಸ್ಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ 29 ಕೋಟಿ ರೂ.ಗಿಂತ ಹೆಚ್ಚು ಲಾಭಾಂಶ ನೀಡಲಾಗಿದೆ. ಇತರ ಸಂಬಂಧಿತ ವ್ಯವಹಾರಗಳು ಸಹ ಲಾಭವನ್ನು ಗಳಿಸಿದೆ. ಮತ್ತು ಅದರೊಂದಿಗೆ ಸಂಬಂಧಿಸಿದ ಜನರಿಗೆ  ಲಾಭಾಂಶವನ್ನು ಒದಗಿಸಲಾಗಿದ್ದು, ಇದರಿಂದ ಬಿಡಾಡಿ ದನಗಳಿಂದ ಬೆಳೆ ಹಾನಿಯಾಗದಂತೆ ತಡೆಯುವ ಜತೆಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹಲವು ರಾಜ್ಯಗಳಲ್ಲಿ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ – ಆರೆಂಜ್ ಅಲರ್ಟ್
October 17, 2026
7:30 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror