ಚಿನ್ನದ ಬೆಲೆ ಏರಿಕೆ ನಿರಂತರವಾಗುತ್ತಿದೆ. ಆದರೆ ಮಂಗಳವಾರ ಮಾತ್ರಾ ದಿಢೀರ್ ಬೆಲೆ ಏರಿಕೆಯಾಗಿದ್ದು ಒಂದೇ ದಿನದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3280 ರೂಪಾಯಿ ಏರಿಕೆ ಆಗಿದೆ.10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3280 ರೂಪಾಯಿ ಹೆಚ್ಚಳ ಆಗಿದೆ. ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಇಂದು ಅತಿ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಕೂಡಾ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹12,868 ಆಗಿದೆ. ಬೆಳ್ಳಿ ಬೆಲೆಯಲ್ಲೂ ಭಾರಿ ಹೆಚ್ಚಳವಾಗಿದೆ. ಪ್ರತಿ ಗ್ರಾಂಗೆ ಬೆಳ್ಳಿ ಬೆಲೆಯು 8.60 ರೂಪಾಯಿ ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 8,600 ರೂಪಾಯಿ ಏರಿಕೆಯಾಗಿದೆ.
ಸೆಪ್ಟಂಬರ್ ತಿಂಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿತ್ತು. 24 ಕ್ಯಾರೆಟ್ ಚಿನ್ನದ ಬೆಲೆ 320 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 300 ರೂಪಾಯಿ ಇಳಿಕೆಯಾಗಿತ್ತು. ಡಾಲರ್ ಮೌಲ್ಯ ಹೆಚ್ಚಳ ಮತ್ತು ಬೇಡಿಕೆ ಕುಸಿತದಿಂದ ಬೆಲೆ ಇಳಿಕೆಯಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದೆ. ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಅನಿಶ್ಚಿತತೆಗಳು ಮತ್ತು ಅಮೆರಿಕ ಹಾಗೂ ಚೀನಾ ನಡುವಿನ ಸುಂಕ ಸಮರದಂತಹ ಸಮಸ್ಯೆಗಳಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದ ಕಡೆಗೆ ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗಿ ಅದರ ಬೆಲೆಯು ಕೂಡಾ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.

