ಚಿನ್ನದ ಧಾರಣೆಯಲ್ಲಿ ಏರಿಳಿತ ಕಂಡುಬಂದಿದೆ. ಮಂಗಳವಾರ ಚಿನ್ನದ ಧಾರಣೆ ಸ್ಥಿರತೆ ಕಾಯ್ದುಕೊಂಡಿದೆ. ಆದರೆ ಬೆಳ್ಳಿಯ ಧಾರಣೆಯಲ್ಲಿ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ 47,800 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಪ್ರಸ್ತುತ ಬೆಲೆಯು 52,140 ರೂ ಆಗಿದೆ. ಬೆಳ್ಳಿ ದರವು ಕೆಜಿಗೆ ಪ್ರಸ್ತುತ 300 ರೂ ಇಳಿದಿದ್ದು 66,300 ರೂಪಾಯಿ ಧಾರಣೆಯಲ್ಲಿದೆ.ಚಿನ್ನದ ಧಾರಣೆ ಏರಿಳಿತದ ಸಂದರ್ಭ ಆಯಾ ರಾಜ್ಯ ಸರ್ಕಾರಗಳು ವಿಧಿಸುವ ವಿಭಿನ್ನ ತೆರಿಗೆಗಳು, ಅಬಕಾರಿ ಸುಂಕ ಮತ್ತು ಇತರ ಸುಂಕಗಳಿಂದಾಗಿ ಭಾರತದಲ್ಲಿ ಚಿನ್ನದ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ನಗರದಿಂದ ನಗರಕ್ಕೆ ಬದಲಾಗುತ್ತವೆ.
ಸದ್ಯ ಚಿನ್ನದ ಸ್ಥಿರ ಬೇಡಿಕೆಯು ಮುಂದಿನ ಹಣಕಾಸು ವರ್ಷದಲ್ಲಿ ಚಿನ್ನದ ಆಭರಣ ಚಿಲ್ಲರೆ ವ್ಯಾಪಾರಿಗಳ ಆದಾಯವನ್ನು 12-15 ಪ್ರತಿಶತದಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ಪ್ರತಿಪಾದಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಕೋವಿಡ್ ಕಾರಣದಿಂದ ಧಾರಣೆ ಹಾಗೂ ಬೇಡಿಕೆಯಲ್ಲಿ ಏರಿಳಿತ ಕಂಡುಬಂದಿತ್ತು. ಆದರೆ ಈ ವಿತ್ತೀಯ ವರ್ಷದಲ್ಲಿ ವಿಭಾಗದ ಆದಾಯವು 20-22 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ.