ರಷ್ಯಾ – ಉಕ್ರೇನ್ ಯುದ್ಧ ಪರಿಣಾಮ ಭಾರತದಲ್ಲಿ ಬಂಗಾರ ಹಾಗೂ ಬೆಳ್ಳಿ ಮೌಲ್ಯ ದಿನೇ ದಿನೇ ವ್ಯತ್ಯಾಸವಾಗುತ್ತಿದೆ. ಯುದ್ಧದ ಆರಂಭದ ದಿನಗಳಲ್ಲಿ ಬಂಗಾರದ ಮೌಲ್ಯ ಏರಿಕೆಯಾಗಿತ್ತು. ಬಳಿಕ ಕುಸಿತ ಕಂಡಿದ್ದರೂ, ಇಂದು ಮತ್ತೆ ಚಿನ್ನದ ದರದಲ್ಲಿ ಏರಿಕೆಯಾಗಿದೆ.
ದೇಶದಲ್ಲಿಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,340 ರೂ. ಇತ್ತು. ಇಂದು 660 ರೂ. ಏರಿಕೆಯಾಗಿ 47,000 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 50,560 ರೂ. ಇತ್ತು, ಇಂದು 720 ರೂ. ಹೆಚ್ಚಾಗಿ 51,280 ರೂ. ಆಗಿದೆ.
ಕರ್ನಾಟಕದಲ್ಲಿ ನಿನ್ನೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,560 ರೂ. ಇತ್ತು. ಇಂದು 720 ರೂ. ಹೆಚ್ಚಾಗಿ 51,280 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 46,340 ರೂ. ಇತ್ತು. ಇಂದು 660 ರೂ. ಹೆಚ್ಚಾಗಿ 47,000 ರೂ. ಆಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel