#Arecanut | ಅಡಿಕೆ ಬೆಳೆ ವಿಸ್ತರಣೆಯ ಚರ್ಚೆಯ ನಡುವೆ ಸಿಹಿ ಸುದ್ದಿ | ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಪ್ರಗತಿ | ಶೇ.5 ರಷ್ಟು ಏರಿಕೆ ನಿರೀಕ್ಷೆಯಲ್ಲಿ ಪಾನ್‌ ಮಾರುಕಟ್ಟೆ |

September 18, 2023
1:55 PM
ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಪಾನ್‌ ಮಸಾಲಾ ಉದ್ಯಮವು ಶೇ.5 ರಷ್ಟು ಮಾತ್ರವೇ ವಿಸ್ತರಣೆಯಾಗಬಹುದು ಎನ್ನುವ ನಿರೀಕ್ಷೆ ಇದೆ. ಅಡಿಕೆ ಬೆಳೆ ವಿಸ್ತರಣೆಯ ಆತಂಕದ ನಡುವೆ ಇದೊಂದು ಸುದ್ದಿ ಆಶಾವಾದವನ್ನು ಅಡಿಕೆ ಬೆಳೆಗಾರರಿಗೆ ಹುಟ್ಟಿಸಿದೆ.

 ಅಡಿಕೆ ಬೆಳೆ ವಿಸ್ತರಣೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಕೇವಲ ತಿಂದು ಉಗುಳಲು ಬಳಕೆಯಾಗುವ ಅಡಿಕೆಯ ಪರ್ಯಾಯ ಬಳಕೆ ತೀರಾ ಕಡಿಮೆಯಾಗಿದೆ. ಅಡಿಕೆ ತಿನ್ನಲು ಗುಣಮಟ್ಟದ ಅಡಿಕೆಯನ್ನು ಹೆಚ್ಚಾಗಿ ಅಪೇಕ್ಷೆ ಪಡುತ್ತಾರೆ. ಆದರೆ ಇದೀಗ ಸರ್ವೆ ಪ್ರಕಾರ ಶೇ.5 ರಷ್ಟು ಬೇಡಿಕೆ ಹೆಚ್ಚಲಿದೆ. ಅದರಲ್ಲೂ ಪಾನ್‌ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಶೇ.5 ರಷ್ಟು ಏರಿಕೆ ಕಾಣಲಿದೆ.

Advertisement
Advertisement

ಗ್ಲೋಬಲ್ ಇಂಡಿಯಾ ಪಾನ್ ಮಸಾಲಾ ಮಾರುಕಟ್ಟೆಯನ್ನು 2022 ರಲ್ಲಿ USD 412,143 ಕೋಟಿ  ಎಂದು ಅಂದಾಜಿಸಲಾಗಿದೆ. ಈಗ ಅದು ಮತ್ತಷ್ಟು ಬೆಳೆಯುತ್ತಿದೆ. ಮುಂದಿನ 10 ವರ್ಷಗಳಲ್ಲಿ ಮತ್ತಷ್ಟು ಏರಿಕೆಯ ನಿರೀಕ್ಷೆಯಿದೆ. 2023 ಮತ್ತು 2032 ರ ನಡುವೆ ಸರಿಸುಮಾರು 5% ನಷ್ಟು ಬೇಡಿಕೆ ಹೆಚ್ಚಲಿದೆ.

Advertisement

ಪಾನ್ ಮಸಾಲವನ್ನು ಸಾಮಾನ್ಯವಾಗಿ ಊಟದ ನಂತರದ ಜೀರ್ಣಕಾರಿ ಕ್ರಿಯೆ ಹೆಚ್ಚಿಸಲು ಬಳಕೆ ಮಾಡುತ್ತಾರೆ. ಬಾಯಿಯ ಸುಗಂಧಕ್ಕಾಗಿ ಅಥವಾ  ರೀಫ್ರೆಶ್‌ ಗಾಗಿ ಬಳಕೆ ಮಾಡುತ್ತಾರೆ. ಇದರಲ್ಲಿ ಇತರ ವಸ್ತುಗಳು ಇದ್ದರೂ ಅಡಿಕೆ ಹುಡಿಯೇ ಪ್ರಧಾನ ವಸ್ತು.ಪಾನ್ ಮಸಾಲಾದಲ್ಲಿ ಸಾಮಾನ್ಯವಾಗಿ ಅಡಿಕೆ, ಏಲಕ್ಕಿ, ಸುಣ್ಣ,  ವಿವಿಧ ಸುವಾಸನೆಯ ಹುಡಿಗಳು ಒಳಗೊಂಡಿರುತ್ತವೆ.  ಕಂಡುಬರುತ್ತವೆ.

ತಂಬಾಕು ಬಳಕೆ ಮಾಡುವವರು ಈಚೆಗೆ ಹೆಚ್ಚಾಗಿ ತಂಬಾಕಿನ ಬದಲಾಗಿ ಹಾನಿಕಾರಕವಲ್ಲದ ಅಡಿಕೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅನೇಕರು ಪಾನ್‌ ಮಸಾಲಾ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದಲ್ಲಿನ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಪಾನ್‌ ಮಸಾಲಾ ಬಳಕೆ ಮಾಡುತ್ತಾರೆ.

Advertisement

ಮಾರುಕಟ್ಟೆ ಸರ್ವೆ ಪ್ರಕಾರ, ಪಾನ್ ಮಸಾಲಾ ಮಾರುಕಟ್ಟೆಯು ಮುಂದಿನ 10 ವರ್ಷಗಳಲ್ಲಿ ಸುಮಾರು 5% ರಷ್ಟು ಹೆಚ್ಚು ವಿಸ್ತರಣೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪಾನ್ ಮಸಾಲಾ ಮಾರುಕಟ್ಟೆಯ ಗಾತ್ರವು 2023 ರಲ್ಲಿ USD 4‌,12,143  ಕೋಟಿಗಳಷ್ಟು ಮೌಲ್ಯದ್ದಾಗಿದ್ದರೆ ಮತ್ತು 2032 ರ ವೇಳೆಗೆ USD 6,12,801 ಕೋಟಿಗೆ ತಲುಪುವ ನಿರೀಕ್ಷೆಯಿದೆ.

ಪಾನ್‌ಮಸಾಲಾ ಹೆಚ್ಚಾಗಿ  ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ದೆಹಲಿಯಂತಹ ರಾಜ್ಯಗಳು ಸೇರಿದಂತೆ ಭಾರತದ ಉತ್ತರ ಪ್ರದೇಶವು ಪಾನ್ ಮಸಾಲಾ ಮಾರುಕಟ್ಟೆಯಲ್ಲಿ ಹೆಚ್ಚಿನ  ಪಾಲನ್ನು ಹೊಂದಿದೆ.  ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳು  ಪಾನ್ ಮಸಾಲಾ ಮಾರುಕಟ್ಟೆಗೆ ಕೊಡುಗೆ ನೀಡುತ್ತವೆ.  ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ  ರಾಜ್ಯಗಳು  ಕಡಿಮೆ ಪಾನ್ ಮಸಾಲಾ ಬಳಕೆಯನ್ನು ಹೊಂದಿವೆ. ಇಲ್ಲಿ ಹಸಿ ಅಡಿಕೆ ಅಥವಾ ಒಣ ಅಡಿಕೆ ಬಳಕೆ ಹೆಚ್ಚಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಒಡಿಶಾದಂತಹ ಪೂರ್ವ ರಾಜ್ಯಗಳು ಪಾನ್ ಮಸಾಲಾವನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುತ್ತವೆ.ಅಸ್ಸಾಂ, ಮಣಿಪುರ ಮತ್ತು ಮೇಘಾಲಯದಂತಹ ರಾಜ್ಯಗಳನ್ನು ಒಳಗೊಂಡಿರುವ ಈಶಾನ್ಯ ಭಾರತದಲ್ಲಿ ಪಾನ್ ಮಸಾಲಾ ಮಾರುಕಟ್ಟೆ ಬೆಳೆದಿಲ್ಲ.ಹೆಚ್ಚಾಗಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆಯನ್ನು ಪಾನ್‌ ಜೊತೆ ಸೇರಿಸಿ ಸವಿಯುತ್ತಾರೆ.

Advertisement

ಹೀಗಾಗಿ ಮುಂದಿನ 10 ವರ್ಷಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಪಾನ್‌ ಮಸಾಲಾ ಉದ್ಯಮವು ಶೇ.5 ರಷ್ಟು ಮಾತ್ರವೇ ವಿಸ್ತರಣೆಯಾಗುತ್ತದೆ. ಆದರೆ, ಈ ನಡುವೆ ಅಡಿಕೆ ಬೆಳೆ ವಿಸ್ತರಣೆಯಾದದ್ದು ಹಾಗೂ ಅದರ ಇಳುವರಿ ಆರಂಭವಾಗುವ ವೇಳೆ ಈಗಿನ ಮಾರುಕಟ್ಟೆಗಿಂತ ಶೇ.25 ರಷ್ಟು ಹೆಚ್ಚುವರಿಯಾಗಿ ಮಾರುಕಟ್ಟೆಯಲ್ಲಿ ಕಾಣಿಸಬಹುದು. ಸದ್ಯ ಅಡಿಕೆಗೆ ಬೇಡಿಕೆ ಇದೆ. ಮುಂದಿನ 10 ವರ್ಷಗಳಲ್ಲಿ ತಿಂದು ಉಗಿಯುವ ಅಡಿಕೆಯ ಮಾರುಕಟ್ಟೆ ಸ್ಥಿತಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror