ಬಿಸಿಲಿತ ತಾಪಕ್ಕೆ ನಲುಗುತ್ತಿರುವ ಕರಾವಳಿಗರಿಗೆ ಗುಡ್ ನ್ಯೂಸ್ | ಹವಾಮಾನ ಇಲಾಖೆಯಿಂದ ಮಹತ್ವದ ಘೋಷಣೆ |

March 5, 2023
4:03 PM

ಬಿಸಿಲಿನ ಬೇಗೆಗೆ ಕರಾವಳಿ ಜನತೆ ಹೈರಾಣಾಗಿ ಹೋಗಿದ್ದಾರೆ. ಈಗ ಮಾರ್ಚ್ ತಿಂಗಳು…. ಹಾಗಾದ್ರೆ ಎಪ್ರಿಲ್, ಮೇ ಯ ಪರಿಸ್ಥಿತಿ ಹೇಗಿರಬಹುದು ಎಂದು ಊಹಿಸಿದ್ರೆನೇ ಉರಿ ಕಿತ್ತುಕೊಂಡು ಬರುತ್ತದೆ. ಇದೀಗ  ಈ ಬಗ್ಗೆ ಹವಾಮಾನ ಇಲಾಖೆಯಿಂದ ಮಹತ್ವದ ಘೋಷಣೆಯೊಂದು ಹೊರಬಿದ್ದಿದೆ. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ಝಳದಿಂದ ಬೆಂಡಾಗುತ್ತಿದ್ದೀರಾ? ನಿಮಗೊಂದು ಒಳ್ಳೆಯ ಸುದ್ದಿ ಇಲ್ಲಿದೆ.

Advertisement
Advertisement
Advertisement

ಬೆಳಗ್ಗೆ ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾರದಷ್ಟು ಬಿಸಿಲು…! ಇದು ಸದ್ಯ ರಾಜ್ಯದ ನಾಗರಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರೋ ಹವಾಮಾನ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದ ಹೀಟ್ ವೇವ್ ಉಂಟಾಗಲಿದೆಯೇ ಎಂಬ ಆತಂಕ ಮನೆ ಮಾಡಿತ್ತು. ಆದರೆ ಇದು ತಾಪಮಾನದಲ್ಲಿ ಏಕಾಏಕಿ ಉಂಟಾದ ಏರಿಕೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

Advertisement

ಶನಿವಾರ ಹಾಗೂ ಭಾನುವಾರ ಕರಾವಳಿ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಹೀಟ್‌ ವೇವ್‌ ಕಂಡುಬರುವ  ಸಾಧ್ಯತೆಯಿದೆ ಇದೆ ಎಂದು ಎಚ್ಚರಿಕೆ ನೀಡಿತ್ತು. ಅದಾದ ಬಳಿಕ ವಾತಾವರಣದಲ್ಲಿ ಸ್ವಲ್ಪ ಬದಲಾವಣೆ ಕಂಡುಬರುತ್ತಿದೆ.

ಇದೀಗ ಹೆಚ್ಚುತ್ತಿರುವ ಬಿಸಿಲಿನ ಕುರಿತು ಹವಾಮಾನ ಇಲಾಖೆ ಇನ್ನೊಂದು ಮಹತ್ವದ ಮಾಹಿತಿ ನೀಡಿದೆ. ಕರಾವಳಿ ಭಾಗದಲ್ಲಿ ಉಷ್ಣಾಂಶ ಇಳಿಕೆಯಾಗಲಿದೆ ಎಂದು ಸಮಾಧಾನಕರ ಸುದ್ದಿಯನ್ನು ಇಲಾಖೆ ಪ್ರಕಟಿಸಿದೆ. ಅಲ್ಲದೇ, ಕರಾವಳಿ ಭಾಗದಲ್ಲಿ ಹೀಟ್ ವೇವ್ ಉಂಟಾಗುವ ಎಚ್ಚರಿಕೆಯನ್ನು ಸಹ ಹವಾಮಾನ ಇಲಾಖೆ ಹಿಂಪಡೆದಿದೆ.

Advertisement

ಬೆಳಗ್ಗೆ ಚಳಿ, ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾರದಷ್ಟು ಬಿಸಿಲು. ಇದು ಸದ್ಯ ರಾಜ್ಯದ ನಾಗರಿಕರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿರೋ ಹವಾಮಾನ. ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚುತ್ತಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಉತ್ತರ ಭಾರತದಲ್ಲಿ ಫ್ಲೂ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಕಳೆದ ಕೆಲವು ದಿನಗಳ ವಾತಾವರಣ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಊರುಗಳ ನಾಗರಿಕರನ್ನೂ ಅನಾರೋಗ್ಯಕ್ಕೀಡುಮಾಡಿದೆ.

Advertisement

ಒಟ್ಟಾರೆ ಕರಾವಳಿ ಸೇರಿದಂತೆ, ಕರ್ನಾಟಕದಲ್ಲಿ ಹೆಚ್ಚುತ್ತಿದ್ದ ಬಿಸಿಲಿನ ಝಳದಿಂದ ಬಸವಳಿದಿದ್ದ  ಸಾರ್ವಜನಿಕರಿಗೆ ಈ ಸುದ್ದಿಯಿಂದ ಕೊಂಚ ಸಮಾಧಾನ ಸಿಗಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror