ಚಿನ್ನದ ದರದಲ್ಲಿ ಭಾರಿ ಇಳಿಕೆ | ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ಬೆಲೆಯಲ್ಲೂ ಇಳಿಕೆ..!

May 1, 2024
4:10 PM

ಚುನಾವಣೆ(Election) ಬರುತ್ತಿದ್ದಂತೆ ಅನೇಕ ದಿನನಿತ್ಯ ವಸ್ತುಗಳ ಬೆಳೆ ಇಳಿಯೋದು(price low) ಮಾಮೂಲು. ಆದರೆ, ಈ ಬಾರಿ ಚುನಾವಣೆ ಬಂದರೂ ಯಾವುದೇ ವಸ್ತುಗಳ ಬೆಲೆ ಇಳಿಕೆಗೆ ಸರ್ಕಾರಗಳು(Govt) ಮನಸ್ಸು ಮಾಡಲಿಲ್ಲ. ಎರಡು ಹಂತದ ಚುನಾವಣೆ ಮುಗಿದ ನಂತರ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌(LPG Gas Cylinder) ಹಾಗೂ ಚಿನ್ನದ ಬೆಲೆಯಲ್ಲಿ(Gold Price) ಇಳಿಕೆ ಕಂಡಿದೆ. ದೇಶದಲ್ಲಿ ಚಿನ್ನದ ಬೆಲೆ ಭಾರಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ(Silver Price) ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ 950 ರೂ. ಇಳಿಕೆಯಾಗಿದ್ದು, ಪ್ರಸ್ತುತ ರೂ.73,390 ಆಗಿದೆ. ಬೆಳ್ಳಿ ಬೆಲೆ ಕೆಜಿಗೆ 400 ರೂ. ಏರಿಕೆಯಾಗಿ 83,480 ರೂ.ಗೆ ತಲುಪಿದೆ.

Advertisement
Advertisement
Advertisement
Advertisement

ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 71,510 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 83,400 ರೂ. ಇದೆ. ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 73,390 ರೂ. ಪ್ರತಿ ಕೆಜಿ ಬೆಳ್ಳಿ ಬೆಲೆ 83,480 ರೂ. ಇದೆ.

Advertisement

ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿವೆ. ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,330 ಡಾಲರ್. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 26.96 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ದರಗಳು ಹೇಗಿವೆ?: ಕ್ರಿಪ್ಟೋ ಕರೆನ್ಸಿ ವಹಿವಾಟು ಭಾರಿ ಲಾಭದೊಂದಿಗೆ ಮುಂದುವರಿದಿದೆ.
ಬಿಟ್ ಕಾಯಿನ್- 55,30,000 ರೂ., ಎಥೆರಿಯಂ- 2,56,968 ರೂ.

Advertisement

ಪೆಟ್ರೋಲ್, ಡೀಸೆಲ್ ಬೆಲೆ..!: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಹಾಗೂ ಡೀಸೆಲ್ ಬೆಲೆ 95.63 ರೂ. ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಇದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಮತ್ತು ಡೀಸೆಲ್ ಬೆಲೆ 96.16 ರೂ. ಇದೆ.

ಎಲ್​ಪಿಜಿ ಗ್ಯಾಸ್ ಸಿಲಿಂಡರ್​ ದರ ಇಳಿಕೆ: ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಸರಿಯಾಗಿ ಒಂದು ವಾರ ಇರುವಾಗಲೇ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಇಳಿಕೆ ಮಾಡಿವೆ. ಈ ನಿರ್ಧಾರದಿಂದ ಜನರಿಗೆ ಕೊಂಚ ನೆಮ್ಮದಿ ಲಭಿಸಿದೆ. ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 19 ರೂಪಾಯಿ ಇಳಿಕೆಯಾಗಿದೆ. ಮೇ 1 (ಇಂದಿನಿಂದ) ವಾಣಿಜ್ಯ ಸಿಲಿಂಡರ್ ಬೆಲೆಯನ್ನು 19 ರೂ. ಕಡಿತಗೊಳಿಸುತ್ತಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Advertisement

ಪ್ರಮುಖ ನಗರಗಳಲ್ಲಿ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ?: ಮೇ 1 ರಿಂದ ದೆಹಲಿಯಲ್ಲಿ 19 ಕೆಜಿ ಕಮರ್ಷಿಯಲ್ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 1,764.50 ರೂ.ಗಳಷ್ಟಿತ್ತು. ಆದರೆ, ಇತ್ತೀಚಿನ 19 ರೂ. ಕಡಿತವು 1,745.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,879 ರೂ. ಆಗಿದ್ದರೆ, ಇತ್ತೀಚಿನ ಇಳಿಕೆಯೊಂದಿಗೆ 1859 ರೂ.ಗೆ ಇಳಿದಿದೆ. ಹೈದರಾಬಾದ್‌ನಲ್ಲಿ 19 ಕೆಜಿಯ ಇಂಡೇನ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 2013.50 ರೂ. ಇದ್ದ ದರ, ಇದೀಗ 1994.50 ರೂ.ಗೆ ಇಳಿಕೆ ಕಂಡಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror