ರೈತರಿಗೆ ಸಿಹಿ ಸುದ್ದಿ: ಎಲ್ಲಾ ಗೊಬ್ಬರ, ಕೀಟನಾಶಕಗಳಿಗೆ ಸಬ್ಸಿಡಿ : ಆರಂಭವಾಗಿದೆ ರೈತರಿಗಾಗಿ ಹೊಸ ಯೋಜನೆ
ಸರ್ಕಾರ ರೈತರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಲೇ ಇರುತ್ತದೆ. ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಂತಹ ಯೋಜನೆಗಳಲ್ಲಿ ಪರಂಪರಾಗತ್ ಯೋಜನೆ ಕೂಡ ಒಂದು. ಕೇಂದ್ರ ಸರ್ಕಾರವು ದೇಶದ ಕೃಷಿ ಕ್ಷೇತ್ರ ಮತ್ತು ಎಲ್ಲಾ ರೈತರ ಸುಧಾರಣೆಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಾವಯವ ಕೃಷಿ ಮಾಡವ ರೈತರಿಗೆ ಸರ್ಕಾರ ಉತ್ತೇಜನ ನೀಡಲಿದೆ. ಕೇಂದ್ರ ಸರ್ಕಾರ ಪರಂಪರಾಗತ್ ಕೃಷಿ ವಿಕಾಸ್ ಯೋಜನೆ 2023ರ ಯೋಜನೆ ಅಡಿಯಲ್ಲಿ ಈ ಸೌಲಭ್ಯವನ್ನು ಎಲ್ಲಾ ರೈತ ಫಲಾನುಭವಿಗಳಿಗೆ ನೀಡಲಿದೆ. ಈ ಯೋಜನೆಯ ಮೂಲಕ ಎಲ್ಲಾ ರೈತರನ್ನು ಸಾವಯವ ಕೃಷಿ ಮಾಡಲು ಪ್ರೋತ್ಸಾಹಿಸಲಾಗುವುದು.
ಯೋಜನೆಯ ಪ್ರಯೋಜನಗಳನ್ನು ನೋಡೋದಾದ್ರೆ
- PKVY ಮೂಲಕ ಮಣ್ಣಿನ ಗುಣಮಟ್ಟ ಉತ್ತಮವಾಗಿರುತ್ತದೆ ಮತ್ತು ಫಲವತ್ತತೆ ಹೆಚ್ಚಾಗುತ್ತದೆ.
- ಕೃಷಿ ಕ್ಷೇತ್ರದಲ್ಲಿ ಈ ಯೋಜನೆಯಿಂದ ರೈತರ ಆದಾಯವೂ ಸುಧಾರಿಸುತ್ತದೆ.
- ಈ ಯೋಜನೆಯಡಿ ಪಡೆದ ಪ್ರೋತ್ಸಾಹಧನವು ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹೋಗುತ್ತದೆ.
- ದೇಶದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000ಪ್ರಕಾರ 3 ವರ್ಷಗಳ ಅವಧಿಗೆ ಈ ಯೋಜನೆಯಡಿ ಸಹಾಯವನ್ನು ನೀಡಲಾಗುತ್ತದೆ.
- ರೈತರಿಗೆ ಸಾವಯವ ಗೊಬ್ಬರ, ಬೀಜ ಮತ್ತು ಕೀಟನಾಶಕಗಳಿಗೆ 31 ಸಾವಿರ ರೂ.
- ಮೌಲ್ಯವರ್ಧನೆ ಮತ್ತು ವಿತರಣೆಗೆ ರೂ.8800 ನೀಡಲಾಗುವುದು.
PKVY ಅರ್ಹತೆಗಳು:
- ಯೋಜನೆಯಡಿ ಅರ್ಜಿದಾರರು ರೈತ ವರ್ಗದಿಂದ ಮಾತ್ರ ಇರಬೇಕು.
- ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
- ಈ ಯೋಜನೆಯಲ್ಲಿ ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚಿರಬೇಕು.
ಈ ಯೋಜನೆ ಪಡೆದುಕೊಳ್ಳಲು ನೀವು ಸಲ್ಲಿಸಬೇಕಾದ ದಾಖಲೆಗಳು :
- ಮೂಲ ವಿಳಾಸ ಪುರಾವೆ
- ಆಧಾರ್ ಕಾರ್ಡ್
- ಪಡಿತರ ಚೀಟಿ
- ಜನನ ಪ್ರಮಾಣಪತ್ರ
- ಮೊಬೈಲ್ ನಂಬರ
- ವಯಸ್ಸಿನ ಪ್ರಮಾಣಪತ್ರ / ಜನನ ಪ್ರಮಾಣಪತ್ರ
- ಪಾಸ್ಪೋರ್ಟ್ ಗಾತ್ರದ ಫೋಟೋ
- ಬ್ಯಾಂಕ್ ಖಾತೆ ಹೇಳಿಕೆ
ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹಾಗೆಯೆ ಅಧಿಕೃತ ವೆಬ್ಸೈಟ್ https://pgsindia-ncof.gov.in/PKVY/Index.aspx# ನಲ್ಲೂ ನೀವು ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.