ಈವರೆಗೆ ಪಿಯುಸಿ ವಿದ್ಯಾರ್ಥಿ #PUCStudents ಗಳಿಗೆ ಕೇವಲ ಪ್ರಾಕ್ಟಿಕಲ್ ಪರೀಕ್ಷೆಗೆ ಮಾತ್ರ ಇಂಟರ್ ನಲ್ ಮಾರ್ಕ್ಸ್ ಇತ್ತು. ಆದರೆ ಇನ್ನು ಹಾಗಿಲ್ಲ. ರಾಜ್ಯ ಸರ್ಕಾರವು ಗುಡ್ನ್ಯೂಸ್ #GoodNews ಕೊಟ್ಟಿದೆ. ಇದು ಪ್ರಥಮ & ದ್ವಿತೀಯ ವಿದ್ಯಾರ್ಥಿಗಳಿಬ್ಬರಿಗೂ ತಮ್ಮ ಅಂಕ ಹೆಚ್ಚಿಸುವಲ್ಲಿ ಸಹಾಯವಾಗಲಿದೆ.
ರಾಜ್ಯ ಸರ್ಕಾರವು ಪಿಯುಸಿ ತರಗತಿಗಳಿಗೆ ಹೊಸ ಅಂಕ ಮಾದರಿ ಜಾರಿ ಮಾಡಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೂ ಇನ್ನು ಮುಂದೆ ಆಂತರಿಕ ಅಂಕ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಥಿಯರಿ ವಿಷಯಗಳಿಗೂ 20 ಅಂಕ ಆಂತರಿಕ ಅಂಕ ನೀಡುವ ಆದೇಶ ಹೊರಡಿಸಿದೆ. ಪ್ರಥಮ ಮತ್ತು ದ್ವೀತಿಯ ಪಿಯುಸಿ ಎರಡು ತರಗತಿಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ. ಸದ್ಯ ಪಿಯುಸಿ ಬೋರ್ಡ್ ವಿಜ್ಞಾನ ವಿಷಯಗಳಲ್ಲಿ ಪ್ರಾಯೋಗಿಕ ವಿಷಯಕ್ಕೆ 30 ಅಂಕ ನೀಡುತ್ತಿದೆ. 70 ಅಂಕ ಥಿಯರಿ 30 ಆಂತರಿಕ ಅಂಕ ಇತ್ತು.
ಪ್ರಾಯೋಗಿಕ ಪರೀಕ್ಷೆ ಹೊಂದಿರದ ವಿಷಯಗಳಿಗೆ ಇನ್ನು ಮುಂದೆ 20 ಅಂಕ ಆಂತರಿಕ ಅಂಕ ನೀಡಲು ನಿರ್ಧಾರ ಮಾಡಲಾಗಿದೆ. ಮೊದಲು ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 100 ಅಂಕಕ್ಕೆ ಪರೀಕ್ಷೆ ಬರೆಯಬೇಕಿತ್ತು. ಈಗ ಈ ನಿಯಮ ಬದಲಾವಣೆ ಮಾಡಿ 20 ಅಂಕ ಆಂತರಿಕ ಅಂಕ & 80 ಅಂಕ ಥಿಯರಿ ಪರೀಕ್ಷೆಗೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…