Advertisement
MIRROR FOCUS

ಕಪ್ಪುನುಸಿ ರೋಗಕ್ಕೆ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಸಿಹಿಸುದ್ದಿ | ರೋಗಬಾಧೆ ನಿವಾರಣೆಗೆ ಔಷಧಿ ಸಂಶೋಧಿಸಿದ ವಿಜ್ಞಾನಿಗಳು |

Share

ಕಳೆದ ವರ್ಷ ಕೆಂಪು ಒಣ ಮೆಣಸಿನಕಾಯಿ(Red Chilly) ದರ(Price) ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಮೆಣಸಿನ ದರ ಗಗನಕ್ಕೇರದೆ. ಈ ಬಾರಿಯೂ ಇಳಿಯುವ ಲಕ್ಷಣ ಇಲ್ಲ. ಅತಿವೃಷ್ಟಿ, ಅನಾವೃಷ್ಟಿ,(Drought) ರೋಗಬಾಧೆ(disease) ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ರೈತರಿಗೆ(Farmer) ಸರಿಯಾದ ಇಳುವರಿ ಪಡೆಯಲು ತೊಂದರೆಯಾಗುತ್ತಿದೆ. ಇದು ಗ್ರಾಹಕರ(Customer) ಮೇಲೆ ನೇರ ಪರಿಣಾಮ ಬೀರುತ್ತದೆ. ಇದೀಗ ರೋಗಬಾಧೆಯಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಈ ಹೊಸ ಸಂಶೋಧನೆ(Research) ಹೊಸ ಭರವಸೆ ಮೂಡಿಸಿದೆ.

ಮೆಣಸಿನಕಾಯಿಯ ಕಪ್ಪುನುಸಿ ರೋಗಕ್ಕೆ ರಾಮಬಾಣವೊಂದು ಆವಿಷ್ಕಾರಗೊಂಡಿದೆ. ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ(Agricultural university) ವಿಜ್ಞಾನಿಗಳು ಈ ಆವಿಷ್ಕಾರ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ರಾಜ್ಯಕ್ಕೆ ಕಾಲಿಟ್ಟಿದ್ದ ಕಪ್ಪುನುಸಿ ರೋಗ ಮೆಣಸಿನಕಾಯಿ ಬೆಳೆಗಾರರನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮೆಣಸಿನಕಾಯಿ ಬೆಳೆಗೆ ಕಾಡುತ್ತಿದ್ದ ಕಪ್ಪುನುಸಿ ಕೀಟಬಾದೆ ತಪ್ಪಿಸಲು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಔಷಧಿ(Medicine) ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಶೋಧಕ ಮತ್ತು ಪ್ರಾಧ್ಯಾಪಕರಾಗಿರುವ ರಾಮಾನಗೌಡ ಎರಡು ವರ್ಷಗಳ ಕಾಲ ಸಂಶೋಧನೆ ನಡೆಸಿ ಕೃಷ್ಣಪ್ರಭಾ ಬೆವೇರಿಯಾ ಎನ್ನುವ ಔಷಧಿ ಕಂಡುಹಿಡಿದಿದ್ದಾರೆ. ಈಗಾಗಲೇ ಎರಡು ಖಾಸಗಿ ಕಂಪನಿಗಳು ವಿವಿ ಜೊತೆ ಒಡಂಬಡಿಕೆಯಾಗಿದ್ದು ಸದ್ಯದಲ್ಲೇ ರೈತರಿಗೆ ಈ ಔಷಧಿ ಸಿಗಲಿದೆ. ರೋಗಬಾಧೆಯಿಂದ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಕಂಗಾಲಾಗಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಈ ಹೊಸ ಸಂಶೋಧನೆ ಸಂತಸ ತಂದಿದೆ.

– ಅಂತರ್ಜಾಲ ಮಾಹಿತಿ

A panacea has been discovered for black nose disease of chilies. The scientists of Bagalkot Agricultural University have made this discovery. The black nose disease that had entered the state for the last three to four years was troubling the Chilly growers. The scientists of Bagalkot Horticulture University have succeeded in finding a medicine to avoid the black-nosed pest that was bothering the chilly crop.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

8 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

10 hours ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

10 hours ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

13 hours ago

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

24 hours ago