ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸತತ 7ನೇ ಬಾರಿಗೆ ಬಜೆಟ್(Union Budget) ಮಂಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ ನರೇಂದ್ರ ಮೋದಿಯವರ(PM Narendra Modi) ನಾಯಕತ್ವದಲ್ಲಿ ಮೂರನೇ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವುದು ನನಗೆ ಹೆಮ್ಮೆ ತಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸ್ವತಃ ತಾವೇ ಮಹಿಳೆಯಾಗಿರುವ(Woman) ಹಿನ್ನೆಲೆ ಹಣಕಾಸು ಸಚಿವೆ ದೇಶದ ಮಹಿಳೆಯರಿಗೆ ವಿಶೇಷ ಕೊಡುಗೆಗಳನ್ನು ನೀಡುವ ಸಾಧ್ಯತೆ ಹೆಚ್ಚು ಎಂದು ಅನೇಕ ಮಹಿಳೆಯರು ನಿರೀಕ್ಷೆಯಿಂದ ಇದ್ದರು. ಮಹಿಳೆಯರ ಆಸೆಯಂತೆ ಇಂದು ದೇಶದ ನಾರಿಯರಿಗೆ ಸುಮಾರು ಗಿಫ್ಟ್‌ಗಳನ್ನು ನೀಡಿದ್ದಾರೆ.
ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಬಡವರಿಗೆ ಹೆಚ್ಚಿನ ಆದ್ಯತೆ ನೀಡಿ ಈ ಬಜೆಟ್ ಮಂಡಿಸುತ್ತಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಅಲ್ಲದೇ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಮಹಿಳೆಯರಿಗೆ ದೊಡ್ಡ ಸ್ಥಾನ ನೀಡಿದೆ. ನಿರ್ಮಲಾ ಸೀತಾರಾಮನ್ ಅವರು ಗ್ರಾಮೀಣಾಭಿವೃದ್ಧಿಗೆ 2.66 ಲಕ್ಷ ಕೋಟಿ ರೂಪಾಯಿ ಉದ್ಯೋಗ, ಶಿಕ್ಷಣಕ್ಕೆ 1.48 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮಹಿಳೆಯರ ಕೌಶಲ್ಯಾಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಮಹಿಳೆಯರಿಗೆ 3 ಲಕ್ಷ ಕೋಟಿ ರೂಪಾಯಿ, 20 ಲಕ್ಷ ಯುವಕ-ಯುವತಿಯರಿಗೆ ತರಬೇತಿ ನೀಡಲು ಉದ್ಯೋಗಿ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪಿಸಿ ಹೊಸ ಕಾರ್ಯಕ್ರಮ ನೀಡಲಾಗುವುದು ಎಂದು ಭರವಸೆ ನೀಡಿದರು.
ಉಳಿದಂತೆ ಬಜೆಟ್-2024 ರಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ (MSME) ವಲಯವನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಮುದ್ರಾ ಯೋಜನೆಯಡಿ ಸಾಲದ ಮಿತಿಯನ್ನು ಹೆಚ್ಚಿಸಿದೆ. ಪ್ರಸ್ತುತ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ರೂಪಾಯಿ ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಆದರೆ ಈಗ ಈ ಸಾಲದ ಮಿತಿಯನ್ನು 20 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಇದಂರಂತೆ ನೀವು 20 ಲಕ್ಷದವರೆಗೂ ಸಾಲ ಪಡೆಯಬಹುದು. ಯುವಕರನ್ನು ಉದ್ಯಮಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ 2015 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಇದು ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ನಿರುದ್ಯೋಗಿಗಳಿಗೆ ಮತ್ತು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಯುವಕರನ್ನು ಬೆಂಬಲಿಸುತ್ತದೆ. ಅವರಿಗೆ ಆರ್ಥಿಕ ಪ್ರೋತ್ಸಾಹವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಸದ್ಯ ಈ ಮೂಲಕ ಯಾವುದೇ ಭದ್ರತೆ ಇಲ್ಲದೆ 10 ಲಕ್ಷ ರೂಪಾಯಿ ವರೆಗೂ ಸಾಲ ಲಭ್ಯವಿದೆ. ಈಗ ಆ ಮಿತಿ 20 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…
ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…
ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…
ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…