ಹೊಸ ನಿಯಮವನ್ನು ಜಾರಿಗೊಳಿಸಿದ ಗೂಗಲ್

ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಅದನ್ನು ಜಾರಿಗೆ ತರಲು ನಿರ್ಧರಿಸಿದೆ. ಮೇ.11 ರ ಬಳಿಕ ಅಂದರೆ ಇಂದಿನಿಂದ ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಆಪ್‌ ಬಳಸಿ ಕರೆ ರೆಕಾರ್ಡ್‌ (Call recording) ಮಾಡುವುದು ಸಾಧ್ಯವಾಗುವುದಿಲ್ಲ.

Advertisement
Advertisement

Advertisement

ಆಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೋಪ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೂಗಲ್ ಹಲವು ಕ್ರಮಗಳಿಗೆ ಮುಂದಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಅವಕಾಶ ನೀಡುವ ಅಪ್ಲಿಕೇಷನ್‌ಗಳನ್ನು ನಿರ್ಬಂಧಿಸಲಿದೆ. ಈ ಹೊಸ ನೀತಿಯನ್ನು ಹೇಗೆ ಕಾರ್ಯಗತಗೊಳಿಸಲು ಗೂಗಲ್‌ (Google) ಪ್ಲಾನ್‌ ಮಾಡಿದೆ ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ. ಅಂದರೆ, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಎಲ್ಲಾ ಥರ್ಡ್‌ ಪಾರ್ಟಿ ಕಾಲ್‌ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಿದೆಯಾ ಅಥವಾ ಪ್ಲಾಟ್‌ಫಾರ್ಮ್‌ನಿಂದ ತಮ್ಮ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲು ಡೆವಲಪರ್‌ಗಳನ್ನು ಕೇಳುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಹೊಸ ನಿಯಮವನ್ನು ಜಾರಿಗೊಳಿಸಿದ ಗೂಗಲ್"

Leave a comment

Your email address will not be published.


*