ನೆಲ್ಲಿಕಾಯಿ ಕಹಿಯಾದರೂ ಆರೋಗ್ಯಕ್ಕೆ ಇದುವೇ ಸಿಹಿ

December 23, 2025
7:10 AM

ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಅದೇಷ್ಟೇ ಕಾಳಜಿ ವಹಿಸಿಕೊಂಡರು ಸಾಲದು. ಯಾಕೆಂದರೆ ಈ ವರ್ಷ ಚಳಿ ಹೆಚ್ಚಾಗಿದೆ. ಈ ಚಳಿಯಲ್ಲೇ ರಕ್ತ ಹೆಪ್ಪುಗಟ್ಟುವುದು, ಎದೆನೋವು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆ ಕಾರಣದಿಂದ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡರೆ ಒಳ್ಳೆದು. ಈ ವಾತಾವರಣಕ್ಕೆ ತಕ್ಕಂತೆ ನಾವು ನಮ್ಮ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಉದಾಹರಣೆ ನೆಲ್ಲಿಕಾಯಿ ತಿನ್ನುವುದು ಉತ್ತಮ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ. ಇದನ್ನು ಸುಲಭವಾಗಿ ಡಯೆಟ್ ನಲ್ಲಿ ಸೇರಿಸಬಹುದು. ಇದನ್ನು ತಿನ್ನುವುದರಿಂದ ದೇಹದಲ್ಲಿರುವ ಮಾಲಿನ್ಯ ಮತ್ತು ಸೋಂಕು- ಸಂಬಂಧಿತ ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡಲು ಮತ್ತು ಚರ್ಮ ಹಾಗೂ ಕೀಲುಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಕಾಲಜನ್ ಅನ್ನು ಉತ್ಪಾದಿಸಲು ಸಹಾಕಾರಿ.

Advertisement
Advertisement

ನೆಲ್ಲಿಕಾಯಿ ಸಂಭಾವ್ಯ ಚಯಾಪಚಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಕ್ತದಲ್ಲಿನ ಗ್ಲೋಕೋಸ್ ಮಟ್ಟಗಳಿಗೆ ಕಾರಣವಾಗುತ್ತದೆ, ಇನ್ಸುಲಿನ್ ಪ್ರತಿರೋಧ, ಉರಿಯೂತದ ಗುರುತುಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಮಾತ್ರವಲ್ಲ, ನಿಯಮಿತವಾಗಿ ನೆಲ್ಲಿಕಾಯಿ ಸೇವನೆ ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಗಳು ಕಡಿಮೆಯಾಗಿಸುತ್ತದೆ ಹಾಗೂ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಲಾಗುತ್ತದೆ.
ಇದರಲ್ಲಿ ಪೈಬರ್ ಅಂಶ, ನಿರ್ದಿಷ್ಟ ಫೈಟೋಕೆಮಿಕಲ್ ಗಳ ಮೂಲಕ ಕರುಳಿನ ಚಲನಶೀಲತೆಗೆ ಸಹಾಯಕ. ಇದು ಚಳಿಗಾಲದ ಮಲಬದ್ಧತೆ,  ಉಬ್ಬುವಿಕೆಯ ಲಕ್ಷಣಗಳನ್ನು ಅನುಭವಿಸುವವರಿಗೆ ನೆರವಾಗುವ ಸೌಮ್ಯ ವರೇಚಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ರಕ್ತ ಪರಿಚಲನೆಯನ್ನು ಬಲಪಡಿಸುತ್ತದೆ. ಇದು ತ್ವಚೆ, ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದೆ ಎನ್ನಲಾಗುತ್ತದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror