ಪುತ್ತೂರು ‘ಗೋಪಣ್ಣ’ ಸ್ಮೃತಿ  ಗೌರವ | ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು ಮತ್ತು ನಿವೃತ್ತ ಅಧ್ಯಾಪಿಕೆ ಬಿ.ಸುಲೋಚನಾ ಆಯ್ಕೆ

June 13, 2023
4:51 PM
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮ ಜೂ.16 ರಂದು  ಅಪರಾಹ್ಣ ಗಂಟೆ 2ಕ್ಕೆ ಜರುಗಲಿದೆ. ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ, ಯಕ್ಷಗುರು ಗೋವಿಂದ ನಾಯಕ್ ಪಾಲೆಚ್ಚಾರು ಹಾಗೂ ನಿವೃತ್ತ ಅಧ್ಯಾಪಿಕೆ  ಬಿ.ಸುಲೋಚನಾ ಅವರಿಗೆ ‘ಗೋಪಣ್ಣ ಸ್ಮೃತಿ ಗೌರವ’ವನ್ನು ಪ್ರದಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಸುಲೋಚನ
ಗೋವಿಂದ ನಾಯಕ್
ಗೋವಿಂದ ನಾಯಕ್ ಪಾಲೆಚ್ಚಾರು ಅವರು ಯಕ್ಷಗಾನದ ಹವ್ಯಾಸಿ ಕ್ಷೇತ್ರಕ್ಕೆ ದೊಡ್ಡ ಸಂಪನ್ಮೂಲ. ಸಮಗ್ರ ಹಿಮ್ಮೇಳದ ಗುರು. ಶ್ರೀ ಕೊಲ್ಲೂರು ಮೇಳ, ಶ್ರೀ ಸುಂಕದಕಟ್ಟೆ ಮೇಳ ಹಾಗೂ ಶ್ರೀ ಉಪ್ಪಿನಂಗಡಿ ಮೇಳಗಳಲ್ಲಿ ಅಲ್ಪಕಾಲಿಕ ವ್ಯವಸಾಯ.
ಕೀರ್ತಿಶೇಷ ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯ ಪ್ರಭಾವ. ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆಯ ಮಟ್ಟುಗಳಿಗೆ ಕಾಯಕಲ್ಪ. ತಿಮ್ಮಯ್ಯ ಆಚಾರ್ ಅವರಿಂದ ಮದ್ದಳೆಯ ನಡೆಗಳು, ಅಡೂರು ಕೃಷ್ಣ ರಾವ್ ಅವರಿಂದ ಚೆಂಡೆಯ ನುಡಿತಗಳ ಅಭ್ಯಾಸ. ಒಂದು ಕಾಲಘಟ್ಟದ ಆಟ, ಕೂಟಗಳಲ್ಲಿ ಗೋವಿಂದ ನಾಯಕರ ಪೂರ್ಣಪ್ರಮಾಣದ ಭಾಗವಹಿಸುವಿಕೆಯು ಹವ್ಯಾಸಿ ರಂಗದ ಉಸಿರಾಗಿತ್ತು. ಯಕ್ಷಗುರುವಾಗಿ ನೂರಾರು ಶಿಷ್ಯರನ್ನು ರೂಪೀಕರಿಸಿದ ಹಿರಿಮೆ. ಪ್ರಕೃತ ಪುತ್ತೂರು ಬೊಳ್ವಾರು ಶ್ರೀ ಉಳ್ಳಾಲ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನದ ಮೂಲಕ ಯಕ್ಷಗಾನದ ತರಬೇತಿಯ ಗುರುಗಳಾಗಿ ಗೋವಿಂದ ನಾಯಕರು ಸಕ್ರಿಯರು.
ಸುಲೋಚನಾ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಹುಕಾಲ ಅಧ್ಯಾಪಿಕೆಯಾಗಿ ಸೇವೆ. ವಿದ್ಯಾರ್ಥಿಗಳ ನೆಚ್ಚಿನ ಟೀಚರ್ ಆಗಿದ್ದರು.  ಮಡಿಕೇರಿ, ಉಪ್ಪಿನಂಗಡಿ, ವಿಟ್ಲ ಶಾಲೆಯಲ್ಲೂ ಸೇವೆ ಸಲ್ಲಿಸಿದ್ದರು. ‘ಮನದ ಮಾತು’, ‘ಕಲ್ಪನೆಗಳ ಹಾರ’ ಎಂಬ ಕವನ ಸಂಕಲನ ಮತ್ತು ಬಾಬಾ ಶಿರಡಿ ಸಾಯಿಬಾಬಾ ಭಜನೆಗಳು.. ಹೀಗೆ ಮೂರು ಕೃತಿಗಳ ಪ್ರಕಟಣೆ. ಪ್ರಕೃತ ಮಂಗಳೂರಿನಲ್ಲಿ ವಾಸ.
ಭಾಗವತ  ಗೋವಿಂದ ನಾಯಕರಿಗೆ ಹಾಗೂ  ಬಿ. ಸುಲೋಚನಾ ಅವರಿಗೆ ಪುತ್ತೂರು ಬಪ್ಪಳಿಗೆ ಸನಿಹದ ‘ಅಗ್ರಹಾರ’ದಲ್ಲಿ 2023 ಜೂನ್ 16ರಂದು ಗೌರವ ಪ್ರದಾನ. ಕಳೆದ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್, ಯಕ್ಷಗುರು ಮೋಹನ ಬೈಪಾಡಿತ್ತಾಯರು ಹಾಗೂ ಮದ್ಲೆಗಾರ ಪದ್ಯಾಣ ಜಯರಾಮ ಭಟ್ಟರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ ನಾಯಕ : ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ
April 29, 2024
12:14 PM
by: The Rural Mirror ಸುದ್ದಿಜಾಲ
ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror