ಸರಣಿ ಗೋಪೂಜೆ ಮೂಲಕ ದೇಸೀ ಗೋವಿನ ಬಗ್ಗೆ ಜಾಗೃತಿ | ವಿಶೇಷ ಅಭಿಯಾನಕ್ಕೆ ಎಂಟು ವರ್ಷ.. ! |

November 17, 2021
8:17 PM

ದೀಪಾವಳಿಯ ಸಂದರ್ಭ ಸರಣಿ ಸಾಮೂಹಿಕ ಗೋಪೂಜೆ ಮೂಲಕ ಸಮಾಜದಲ್ಲಿ  ದೇಸೀ ಗೋ ತಳಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕಳೆದ ಎಂಟು ವರ್ಷಗಳಿಂದ ಗುತ್ತಿಗಾರಿನಲ್ಲಿ  ನಡೆಯುತ್ತಿದೆ.

ರಾಮಚಂದ್ರಾಪುರ ಮಠದ ಮುಳ್ಳೇರಿಯ ಮಂಡಲದ  ಗುತ್ತಿಗಾರು ವಲಯದ ವೈದಿಕ ವಿಭಾಗದ ಆಶ್ರಯದಲ್ಲಿ ದೇಸೀ ಗೋವಿಗೆ ಸರಣಿ ಗೋಪೂಜೆಯ ಕಾರ್ಯಕ್ರಮ ಪ್ರತೀ ವರ್ಷ ನಡೆಯುತ್ತಿದೆ. ಈ ಬಾರಿ ಕೂಡಾ ಸರಣಿ ಗೋಪೂಜೆ ನಡೆಯಿತು.  ಸುಬ್ರಹ್ಮಣ್ಯ ಘಟಕದಲ್ಲಿ  ಆರಂಭಗೊಂಡ ಗೋಪೂಜಾ ಕಾರ್ಯಕ್ರಮವು  ಬಳಿಕ ವಳಲಂಬೆ, ಕೊಲ್ಲಮೊಗ್ರ, ಕಮಿಲ, ಮೇಲ್ತೋಟ ,ಮರ್ಕಂಜ, ನೆಲ್ಲೂರುಕೆಮ್ರಾಜೆ ಘಟಕಗಳಲ್ಲಿ ನಡೆದು ಮೊಗ್ರ ಸತ್ಯನಾರಾಯಣ ಅವರ ಮನೆಯಲ್ಲಿ ಸಮಾರೋಪಗೊಂಡಿತು.

Advertisement

 

 

ಸಾಮೂಹಿಕ ಗೋಪೂಜೆಯ ಮೂಲಕ ದೇಸೀ ಗೋವಿನ ಬಗ್ಗೆ ಜಾಗೃತಿ ಮೂಡಿಸುವುದು  ಹಾಗೂ ದೇಸೀ ಗೋತಳಿ ಅಭಿವೃದ್ಧಿಯತ್ತ ಕೃಷಿಕರು ಮನಸ್ಸು ಮಾಡಬೇಕು ಎಂಬುದು  ಈ ಕಾರ್ಯಕ್ರಮದ ಉದ್ದೇಶವಾಗಿದೆ.  ಕಾರ್ಯಕ್ರಮದಲ್ಲಿ  ಮುರಳಿಕೃಷ್ಣ ಭಟ್‌ ವಳಲಂಬೆ ಅವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಕಳೆದ ಎಂಟು ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.

 

ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯನಾರಾಯಣ ಮೊಗ್ರ, ದೇವಕಿ. ಜಿ. ಭಟ್ ಪನ್ನೆ, ಶ್ರೀಕೃಷ್ಣ ಶರ್ಮ.ಪಿ.,  ಶ್ರೀಕೃಷ್ಣ ಭಟ್ ಗುಂಡಿಮಜಲು, ಮೊದಲಾದವರು ಇದ್ದರು.

Advertisement

 

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗುಡ್ಡಗಾಡು ಪ್ರದೇಶಗಳ ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಸವಾಲು | ಮಧ್ಯವರ್ತಿಗಳ ಅವಲಂಬನೆ ಕಡಿಮೆ ಮಾಡಲು ರೈತರ ಹೊಸ ಮಾರ್ಗ
January 11, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror