ಶ್ರೀ ಮದ್ವಾಲ್ಮೀಕಿ ರಾಮಾಯಣದ 108 ಪಾರಾಯಣ ಮಾಡಿ ವಿಶೇಷವಾಗಿ ಸಾಧನೆ ಮಾಡಿದ ಕಾಟುಕುಕ್ಕೆಯ ಬಿ ವಿ ನಾರಾಯಣ ಭಟ್ಟರಿಗೆ ಗೌರವಾರ್ಪಣಾ ಕಾರ್ಯಕ್ರಮವು ಶ್ರೀ ರಾಘವೇಶ್ವರಭಾರತೀ ಸ್ವಾಮಿಗಳವರ ನಿರ್ದೇಶನದಂತೆ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಶ್ರೀ ಗೋವರ್ಧನ ಧರ್ಮಮಂದಿರದಲ್ಲಿ ಸಂಪನ್ನವಾಯಿತು.
ಈ ಸಂದರ್ಭ ಬಿ ವಿ ನಾರಾಯಣ ಭಟ್ಟರು ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣದ ಶ್ರೀ ರಾಮ ಪಟ್ಟಾಭಿಷೇಕ ಸರ್ಗವನ್ನು ಪಾರಾಯಣ ಮಾಡಿದರು. ಬಳಿಕ ಜರಗಿದ ಸನ್ಮಾನ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಮಂಡಲಾಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆಯವರು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.
ಮಹಾಮಂಡಲ ಧರ್ಮಕರ್ಮ ವಿಭಾಗದ ಸಹಕಾರ್ಯದರ್ಶಿ ವೇ ಮೂ ಕೇಶವಪ್ರಸಾದ ಭಟ್ಟ ಕೂಟೇಲು ಇವರು ದಿಕ್ಸೂಚಿ ಮಾತುಗಳನ್ನಾಡಿ ಶ್ರೀ ಮದ್ವಾಲ್ಮೀಕಿ ರಾಮಾಯಣದ ವಿಶೇಷತೆ, ಔಚಿತ್ಯ, ಉದ್ದೇಶ, ಪರಿಣಾಮ, ಫಲ ಇವುಗಳ ಬಗ್ಗೆ ವೇದದ ಶಾಸ್ತ್ರೀಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.
ಬಿ ವಿ ನಾರಾಯಣ ಭಟ್ಟ ಮತ್ತು ಶೈಲಾ ಯನ್ ಭಟ್ ಇವರನ್ನು ಶಾಲುಹೊದೆಸಿ ಶ್ರೀಗಂಧ ಹಾರಾರ್ಪಣೆ ಮಾಡಿ ಫಲ, ಅಭಿನಂದನಾ ಪತ್ರ ಇವುಗಳನ್ನಿತ್ತು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನೀ ಸಂಘಟನಾ ನೇತೃತ್ವದಲ್ಲಿ ಕುಮಾರಿ ದಿವ್ಯಾ ಭಾರತಿ, ಒಡಿಯೂರು ಮನೆ, ಕನ್ಯಾನ ವಲಯ, ಮಂಗಳೂರು ಮಂಡಲ ಇವರು ರಚಿಸಿದ ಬಿ ವಿ ನಾರಾಯಣ ಭಟ್ಟರ ಭಾವ ಚಿತ್ರವನ್ನು ಗೌರವ ಪೂರ್ಣವಾಗಿ ಅವರಿಗೆ ಸಮರ್ಪಣೆ ಮಾಡಿದರು.
ಈ ಕುರಿತಾದ ಮಾಹಿತಿಯನ್ನು ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಅವರು ವಿವರಿಸಿದರು. ದಿವ್ಯಾ ಭಾರತಿ ಇವರಿಗೆ ಮಹಾ ಮಂಡಲ ಮಾತೃತ್ವಂ ಸಂಚಾಲಕಿ ಈಶ್ವರಿ ಬೇರ್ಕಡವು, ಮಂಡಲ ಮಾತೃ ವಿಭಾಗ ಪ್ರಧಾನೆ ಕುಸುಮಾ ಪೆರ್ಮುಖ ಇವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿದರು.
ಮಹಾ ಮಂಡಲ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಮಹಾಮಂಡಲ ಶಾಸನತಂತ್ರದ ಗುರುಸಂಪರ್ಕ ಶ್ರೀಸಂಯೋಜಕರು ಹಾಗೂ ಮುಳ್ಳೇರಿಯಾ ಮಂಡಲ ಗುರಿಕ್ಕಾರ ಸತ್ಯನಾರಾಯಣ ಭಟ್ ಮೊಗ್ರ, ಶಿವಪ್ರಸಾದ ವರ್ಮುಡಿ, ಜಯದೇವ ಖಂಡಿಗೆ ಇವರು ಅಭಿನಂದನಾ ಭಾಷಣ ಮಾಡಿದರು.
ಸನ್ಮಾನಿತರಾದ ಬಿ ವಿ ನಾರಾಯಣ ಭಟ್ಟರು ರಾಮಾಯಣ ಪಾರಾಯಣದ ಸಂದರ್ಭದ ಅನುಭವ ಮತ್ತು ಸನ್ಮಾನಿಸಿದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಗೋಶಾಲಾ ಆಡಳಿತ ಮಂಡಳೀಯ ಕಾರ್ಯದರ್ಶಿ ಕೃಷ್ಣ ಪ್ರಸಾದ ಬನಾರಿ ಇವರು ಗೋಶಾಲೆಯ ಬಗ್ಗೆ ಮಾಹಿತಿಗಳನ್ನಿತ್ತರು. ಕುಂಬಳೆ ವಲಯಾಧ್ಯಕ್ಷರಾದ ಬಾಲಕೃಷ್ಣ ಶರ್ಮ ಇವರು ಧನ್ಯವಾದವನ್ನಿತ್ತರು. ಎಣ್ಮಕಜೆ ವಲಯ ಕಾರ್ಯದರ್ಶಿ ಶಂಕರಪ್ರಸಾದ ಕುಂಚಿನಡ್ಕ ಇವರು ಸಭಾ ನಿರೂಪಣೆ ಮಾಡಿ ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ಸಂಯೋಜನೆ ಮಾಡಿದರು.
ವಿದ್ಯಾರ್ಥಿ ವಾಹಿನಿ ಪ್ರಧಾನ ಗುರುಮೂರ್ತಿ ಮೇಣ, ಮಂಡಲ, ವಲಯ ಹಾಗೂ ಗೋಶಾಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …