ಅಧಿಕ ಎಣ್ಣೆ ಅಂಶವುಳ್ಳ ತಿಂಡಿಗಳು, ಶೇಖರಿಸಿಕೊಂಡಿರುವ ಆಹಾರಗಳ ಸೇವನೆಯು ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಆದರಲ್ಲೂ ಈ ಹೊಟ್ಟೆಯ ಬೊಜ್ಜು ದೇಹ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮಾತ್ರವಲ್ಲ ಈ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಆರೋಗ್ಯಕರ ಆಹಾರ ಪದ್ಧತಿಯ ಮೂಲಕ ಬೊಜ್ಜು ಕರಗಿಸಿಕೊಳ್ಳಬಹುದು ತಿಳಿದುಕೊಳ್ಳಬೇಕು.
ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ ಮುಖ್ಯವಾಗಿ ಸೋರೆಕಾಯಿ ಜ್ಯೂಸ್ ಸಹಕಾರಿಸುತ್ತದೆ. ಹೇಗೆಂದರೆ ಇದರಲ್ಲಿ ನೀರು, ನಾರು ಮತ್ತು ವಿಟಮಿನ್ ಸಿ, ಬಿ6, ಫೋಲೇಟ್, ಮೆಗ್ನಿಸಿಯಮ್ ಮತ್ತು ಪೊಟ್ಯಾಸಿಯಮ್ ನಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸೋರೆಕಾಯಿಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದಲ್ಲದೆ ಬೊಜ್ಜನ್ನು ಕರಗಿಸಲು, ತೂಕ ಇಳಿಕೆಗೂ ಕೂಡ ಇದು ಸಹಕಾರಿ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿನಿತ್ಯ ಸೋರೆಕಾಯಿ ಜ್ಯೂಸ್ ಸೇವನೆ ಮಾಡುವುದು ಉತ್ತಮ.
ಸೋರೆಕಾಯಿ ಜ್ಯೂಸ್ ಮಾಡುವ ವಿಧಾನ: ಸೋರೆಕಾಯಿಯನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಇದನ್ನು ಒಂದು ಬ್ಲೆಂಡರ್ ಗೆ ಹಾಕಿ ಅದಕ್ಕೆ ಪುದೀನ ಎಲೆ, ಜೀರಿಗೆ ಮತ್ತು ಬ್ಲ್ಯಾಕ್ ಸಾಲ್ಟ್ ಸೇರಿಸಿ ನುಣ್ಣಗೆ ರುಬ್ಬಿ ಬಳಿಕ ಸೋಸಿ ಕುಡಿಯಿರಿ.

