#School | ಶಾಲಾ ಮಕ್ಕಳ ಮೇಲೂ ಗ್ಯಾರಂಟಿ ಎಫೆಕ್ಟ್‌…! | ಶೂ, ಸಾಕ್ಸ್‌ ಖರೀದಿ ಹಣಕ್ಕೆ ಸರ್ಕಾರ ಕತ್ತರಿ..?

June 27, 2023
1:26 PM

ದೇಶದ ಬೆಳವಣಿಗೆ ಆಗಬೇಕಾದ್ದು ಶಿಕ್ಷಣ ಹಾಗೂ ಆರೋಗ್ಯ ಸೇವೆಯ ಮೂಲಕ. ಶಾಲೆಗಳಿಗೆ, ಅದರಲ್ಲೂ ಗ್ರಾಮೀಣ ಶಾಲೆಗಳಿಗೆ ಶಿಕ್ಷಣಕ್ಕೆ ಆದ್ಯತೆ ಇರಬೇಕು. ಇನ್ನೊಂದು ಪ್ರಮುಖವಾದ್ದು ಆರೋಗ್ಯ ವ್ಯವಸ್ಥೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಆರೋಗ್ಯ ವ್ಯವಸ್ಥೆಗಳು ಸುಧಾರಣೆಗೆ ಇವೆ. ಇಂತಹದ್ದರಲ್ಲಿ ಸರ್ಕಾರಗಳು ನೀಡುವ ಉಚಿತ ಇರುವ ಶಿಕ್ಷಣ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತಿದೆ. ಇದೀಗ ಗ್ಯಾರಂಟಿ #Guarantee ಹೊಡೆತದ ಕಾರಣ ಸರ್ಕಾರ #KarnatakaGovt ಶಾಲಾ ಮಕ್ಕಳ ಹಣಕ್ಕೂ ಕತ್ತರಿ ಹಾಕಬೇಕಾಗಿ ಬಂದಿದೆ. ಈಗ ಶೂ, ಸಾಕ್ಸ್‌ ಖರೀದಿ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿ ಆದೇಶ ಹೊರಡಿಸಿದೆ.

Advertisement

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಘೋಷಣೆಯಾದಾಗ ಹುಬ್ಬೇರಿಸಿದವರೆಷ್ಟೋ.. ಗ್ಯಾರಂಟಿ ನೀಡಿದ ಸರ್ಕಾರದ ಬಣ್ಣ ದಿನ ಕಳೆದಂತೆ ಕಳಚಿಕೊಳ್ಳುತ್ತಿದೆ. ಇದೀಗ ಗ್ಯಾರಂಟಿ ಹೊಡೆತದ ಕಾರಣ ಕಾಂಗ್ರೆಸ್‌ ಸರ್ಕಾರ ಶಾಲಾ ಮಕ್ಕಳ ಹಣಕ್ಕೂ ಕತ್ತರಿ ಹಾಕಿದೆ. ಶೂ, ಸಾಕ್ಸ್‌ ಖರೀದಿ ಹಣವನ್ನು ರಾಜ್ಯ ಸರ್ಕಾರ ಕಡಿತ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರ ನೀಡಬೇಕಿದ್ದ ಒಟ್ಟು ಅನುದಾನದಲ್ಲಿ ಬರೋಬ್ಬರಿ 7 ಕೋಟಿ ಹಣ ಕಡಿತ ಮಾಡಿ ಶೂ, ಸಾಕ್ಸ್ ಖರೀದಿಗೆ ಆದೇಶ ಹೊರಡಿಸಿದೆ. 2022-23ನೇ ಸಾಲಿನಲ್ಲಿ ಬಿಜೆಪಿ ಸರ್ಕಾರ 1 ರಿಂದ 10 ನೇ ತರಗತಿ ಮಕ್ಕಳಿಗೆ 1 ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿಗೆ 132 ಕೋಟಿ ಹಣ ಬಿಡುಗಡೆ ಮಾಡಿತ್ತು. 2023-24 ನೇ ಸಾಲಿಗೆ 125 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಅಂದರೆ 7 ಕೋಟಿ ಹಣ ಕಡಿತ ಮಾಡಿ ಶಾಲೆಗಳಿಗೆ ಶೂ, ಸಾಕ್ಸ್ ಖರೀದಿ ಮಾಡುವಂತೆ ಸುತ್ತೋಲೆ ಹೊರಡಿಸಿದೆ.

ಬಿಜೆಪಿ ಅವಧಿಯಲ್ಲಿ ಶೂಗೆ ನಿಗದಿ ಮಾಡಿದ್ದ ದರವನ್ನೇ ಈ ವರ್ಷವೂ ಸರ್ಕಾರ ಫಿಕ್ಸ್ ಮಾಡಿದೆ. ಕಳೆದ ವರ್ಷದ ರೇಟ್‌ನಲ್ಲಿಯೇ ಶೂ, ಸಾಕ್ಸ್ ಖರೀದಿ ಮಾಡುವಂತೆ ಶಾಲೆಗಳಿಗೆ ಸೂಚನೆ ನೀಡಿದೆ. 2019-20ನೇ ಸಾಲಿನಲ್ಲಿ ಇದ್ದ ದರದಲ್ಲೇ 2023-24ನೇ ಸಾಲಿಗೂ ಶೂ ಖರೀದಿಗೆ ಸರ್ಕಾರದ ಆದೇಶಿಸಿದೆ.

ಯಾವ ತರಗತಿಗೆ ಎಷ್ಟು ದರದ ಶೂ? : 1-5ನೇ ತರಗತಿ – 265 ರೂ. ,  6-8 ನೇ ತರಗತಿ- 295 ರೂ. ಹಾಗೂ 9-10 ನೇ ತರಗತಿ- 325 ರೂ.ನಲ್ಲಿ ಖರೀದಿ ಮಾಡಬೇಕು. ಕಡಿಮೆ ಹಣದಲ್ಲಿ ಗುಣಮಟ್ಟದ ಶೂ ಕೊಡಬೇಕು ಎಂದು ಎಲ್ಲಾ ಶಾಲೆಗಳಿಗೂ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ನಿಗದಿ ಮಾಡಿರುವ ಹಣದಲ್ಲಿ ಹೆಸರಾಂತ ಕಂಪನಿಗಳ ಶೂ ಕೊಡಬೇಕು ಎಂದು ಅನುದಾನ ಕಡಿತ ಮಾಡಿ ತಿಳಿಸಿದೆ. ಶೂ ಖರೀದಿಗೆ ಹಣ ಸಾಕಾಗದೇ ಹೋದರೆ ಏನು ಮಾಡಬೇಕು ಎಂಬ ಬಗ್ಗೆಯೂ ಸರ್ಕಾರ ಸಲಹೆ ನೀಡಿದೆ.

ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ಅನಿವಾರ್ಯವಾಗಿ ಸಂಘ ಸಂಸ್ಥೆಗಳು, ದಾನಿಗಳ ಮೊರೆ ಹೋಗಬೇಕಾಗಿದೆ. ಸರ್ಕಾರದ ಆದೇಶದಿಂದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಕಂಗಾಲಾಗಿದ್ದಾರೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 28-03-2025 | ಕೆಲವು ಕಡೆ ಇಂದೂ ಮಳೆ | ಎ.2 ರಿಂದ ಮುಂಗಾರು ಪೂರ್ವ ಮಳೆಯ ಲಕ್ಷಣ |
March 28, 2025
3:02 PM
by: ಸಾಯಿಶೇಖರ್ ಕರಿಕಳ
ಪಪ್ಪಾಯಿ ಬೆಳೆ ಕಲಿಸಿದ ಕೃಷಿ ಪಾಠ | ಕೃಷಿ ಬದುಕಿಗೊಂದು ಸ್ಫೂರ್ತಿಯ ಮಾತು |
March 28, 2025
8:12 AM
by: ಮಹೇಶ್ ಪುಚ್ಚಪ್ಪಾಡಿ
7.5 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಚಾರ್ ಧಾಮ್ ಹೇಮಕುಂಡ್ ಯಾತ್ರೆಗೆ ನೋಂದಾವಣೆ
March 28, 2025
8:00 AM
by: The Rural Mirror ಸುದ್ದಿಜಾಲ
ಹೇಮಾವತಿ ನದಿ ನೀರಿಗೆ ವಿಷ ಸೇರ್ಪಡೆ : ಮೀನುಗಳ ಸಾವು
March 28, 2025
7:35 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group