ಬೆಂಗಳೂರಿನ 205 ಕೆರೆಗಳ ನಿರ್ವಹಣೆ, ಸಂರಕ್ಷಣೆ ನಿರ್ಧರಿಸಿದ ಸರ್ಕಾರ | ಖಾಸಗಿ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲು ನಿರ್ಧಾರ : ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

July 10, 2024
11:59 AM

ಉದ್ಯಾನ ನಗರಿ ಬೆಂಗಳೂರಿಗೆ(Garden city Bengaluru) ಅಲ್ಲಿರುವ ಕೆರೆಗಳೇ(Lake) ಜೀವಾಳ. ಬೆಂಗಳೂರಿನ ವಾತಾವರಣಕ್ಕೆ ಮಾರು ಹೋಗಿ ಬ್ರಿಟಿಷರು(British) ಈ ಕೂಲ್‌ ಸಿಟಿಗೆ(Cool city) ಪ್ರವಾಸ(Tour) ಬರುತ್ತಿದ್ದ ಕಾಲವೊಂದಿತ್ತು. ಅದಕ್ಕೆ ಕಾರಣ ಬೆಂಗಳೂರಿನಲ್ಲಿದ್ದ ಕೆರೆಗಳ ಸಂಖ್ಯೆ. ಆದರೆ ಆಧುನಿಕರಣದ(Modernization) ಹೊಡೆತಕ್ಕೆ ಸಿಕ್ಕ ಬೆಂಗಳೂರು ದಿನದಿಂದ ದಿನಕ್ಕೆ ಕೆರೆಗಳನ್ನು ಕಳೆದುಕೊಳ್ಳುತ್ತಾ ಬಂತು. ಈಗ ಕೆರೆಗಳ ಉಳಿಸುವುಕೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿರುವ 205 ಕೆರೆಗಳ ಪುನಶ್ಚೇತನ(Rejuvenation of lakes) ಮಾಡುವುದು ಮತ್ತು ಅವುಗಳ ಸಂರಕ್ಷಣೆ ಮಾಡುವುದಕ್ಕಾಗಿ ಖಾಸಗಿ ಸಂಘ – ಸಂಸ್ಥೆಗಳಿಗೆ (ಸ್ಥಳೀಯ ನಿವಾಸಿಗಳ ಸಂಘಗಳು, ಸಹಕಾರ ಸಂಘಗಳು, ಎನ್​ಜಿಓ, ಕಾರ್ಪೋರೆಟ್ ಕಂಪನಿಗಳಿಗೆ ) ವಹಿಸುವ ಸಂಬಂಧ ನೀತಿ ರೂಪಿಸಲಾಗಿದೆ ಎಂದು ಹೈಕೋರ್ಟ್​ಗೆ(High Court) ಸರ್ಕಾರ ಮಾಹಿತಿ ನೀಡಿದೆ.

Advertisement
Advertisement
Advertisement

ನಗರದ ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿಗೊಳಿಸಲು ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಮತ್ತಿತರ ಸಂಘ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ. ಕೆ.ವಿ.ಅರವಿಂದ್ ಅವರಿದ್ದ ನ್ಯಾಯ ಪೀಠಕ್ಕೆ ಮಂಗಳವಾರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಬಿಬಿಎಂಪಿ ವ್ತಾಪ್ತಿಯ ಕೆರೆಗಳ ಸಂರಕ್ಷಣೆಗಾಗಿ ರೂಪಿಸಿರುವ ನೀತಿಯಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಸಂಘ ಸಂಸ್ಥೆಗಳನ್ನು ಸೇರ್ಪಡೆ ಮಾಡುವ ಸಂಬಂಧದ ಅಂಶವನ್ನು ಸೇರ್ಪಡೆಗೊಳಿಸಲಾಗಿದೆ. ನಗರದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ ಅವುಗಳ ನಿರ್ವಹಣೆ ಮತ್ತು ರಕ್ಷಣೆಗಾಗಿ ವಾರ್ಷಿಕ 30 ಕೋಟಿ ರೂ.ಗಳ ವೆಚ್ಚವಾಗುತ್ತಿದೆ. ಈ ನೀತಿ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿರಲಿದೆ. ಆದರೆ, ಕೆರೆಗಳ ಮಾಲೀಕತ್ವವೂ ಬಿಬಿಎಂಪಿ ಮತ್ತು ಸರ್ಕಾರದ ಬಳಿಯಲ್ಲಿರಲಿದೆ ಎಂದು ಪೀಠಕ್ಕೆ ವಿವರಿಸಿದರು.

Advertisement

ಸಿಟಿಜನ್ ಆಕ್ಷನ್ ಗ್ರೂಪ್ ಪರ ವಾದ ಮಂಡಿಸಿದ ಹಿರಿಯ ವಕೀಲ ಜೈನಾ ಕೋಥಾರಿ, ಕೆಲವು ಕೆರೆಗಳ ಸಂರಕ್ಷಣೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಗುಂಪುಗಳನ್ನು ರಚನೆ ಮಾಡಿಕೊಂಡಿದ್ದಾರೆ. ಈ ಗುಂಪುಗಳಿಗೆ ಆಯಾ ಭಾಗದ ಕೆರೆಗಳ ಕುರಿತಂತೆ ಸಂಪೂರ್ಣ ಅರಿವಿರಲಿದೆ. ಆದರೆ, 205 ಕೆರೆಗಳಗಳನ್ನು ಖಾಸಗಿಯವರಿಗೆ ನೀಡಲು ನೀತಿ ರೂಪಿಸಿದರೆ ಅದರಲ್ಲಿ ಬಿಬಿಎಂಪಿ ಪಾತ್ರ ಏನು ಎಂಬುದು ಗೊತ್ತಾಗಬೇಕಿದೆ ಎಂದು ಪೀಠಕ್ಕೆ ತಿಳಿಸಿದರು. ಅಲ್ಲದೇ, ಸರ್ಕಾರ ರಚನೆ ಮಾಡಿರುವ ನೀತಿಯ ಕುರಿತಂತೆ ಪರಿಶೀಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡುವುದಕ್ಕೆ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದರು.

ಖಾಸಗೀಕರಣಕ್ಕೆ ಮಾರ್ಗವಾಗಬಾರದು: ಈ ವೇಳೆ ಪೀಠ, ಕೆರೆಗಳ ಸಂರಕ್ಷಣೆ ಹೆಸರಿನಲ್ಲಿ ಸರ್ಕಾರ ಮಾಡುತ್ತಿರುವ ಪಾಲಿಸಿ ಖಾಸಗೀಕರಣಕ್ಕೆ ಅವಕಾಶ ನೀಡುವುದಕ್ಕೆ ಮಾರ್ಗವಾಗಬಾರದು ಎಂದು ನ್ಯಾಯಪೀಠ ಇದೇ ವೇಳೆ ಮೌಖಿಕವಾಗಿ ಅಭಿಪ್ರಾಯ ಪಟ್ಟಿತು. ಜತೆಗೆ, ಯಾವ ಕೆರೆ ಸ್ವಚ್ಚಗೊಳಿಸುವ ಅಗತ್ಯವಿದೆಯೋ ಆ ಕೆರೆಗಳ ಸ್ವಚ್ಚಗೊಳಿಸುವ ಕಾರ್ಯ ಮುಂದುವರೆಯಬೇಕು. ಕೆರೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಅಲ್ಲದೇ, ಸರ್ಕಾರದ ಪಾಲಿಸಿಗೆ ಸಂಬಂಧಿಸಿದಂತೆ ಅರ್ಜಿದಾರರು ಪರಿಶೀಲಿಸಿ ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 31ಕ್ಕೆ ನಿಗದಿ ಪಡಿಸಿತು.

Advertisement

ಪ್ರಕರಣದ ಹಿನ್ನೆಲೆ: ಕೆರೆ ಮತ್ತು ಕೆರೆಗೆ ನೀರು ಹರಿದುವಬರುವ ರಾಜಕಾಲುವೆಗಳ ಒತ್ತುವರಿ ಮಾಡಲಾಗಿದೆ. ಜತೆಗೆ, ಕೊಳಚೆ ನೀರನ್ನು ನೇರವಾಗಿ ಕೆರೆಗಳಿಗೆ ಹರಿಸುವ ಮೂಲಕ ಕೆರೆಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಅದಕ್ಕೆ ತಡೆಯೊಡ್ಡಬೇಕು ಎಂದು ಕೋರಿ ಹಲವು ಮಂದಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror