ಪಿಎಂ ಕಿಸಾನ್ ಪಟ್ಟಿಯಿಂದ ಕೆಲ ರೈತರು ಔಟ್ | ಕಾರಣ ಏನು ಗೊತ್ತಾ? | ನಿಮ್ಮ ಆಧಾರ್‌ ಸೀಡಿಂಗ್‌ ಆಗಿದೆಯೇ ?

February 15, 2023
1:14 PM

ಪಿಎಂ ಕಿಸಾನ್ ಪಟ್ಟಿಯಲ್ಲಿ ಅನರ್ಹರಾಗಿದ್ದ ಕೆಲ ರೈತರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ. ಕೈ ಬಿಟ್ಟ ರೈತರನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಹ ಫಲಾನುಭವಿಗಳು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಲೋಕಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Advertisement
Advertisement
Advertisement
ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ಹಲವು ನಕಲಿ ನಮೂದುಗಳಿರುವುದರಿಂದ ಅಂತವರ ಹೆಸರನ್ನು ಪತ್ತೆ ಹಚ್ಚಿ ತೆಗೆದುಹಾಕಲಾಗಿದೆ. ಫಲಾನುಭವಿಯ ಡೇಟಾದ ಸರಿಯಾದ ಪರಿಶೀಲನೆ ಮತ್ತು ಮೌಲ್ಯಾಂಕನದ ನಂತರ ಸತ್ತವರು ಸೇರಿದಂತೆ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಹೇಳಿದೆ. ಪ್ರಮುಖ ಯೋಜನೆ ಕಡಿತದ ಬಗ್ಗೆ ರೈತರು ಮತ್ತು ವಿರೋಧ ಪಕ್ಷದ ನಾಯಕರಿಂದ ತೀವ್ರ ವಿರೋಧದ ನಂತರ ಅಚಿವರು ಈ ಹೇಳಿಕೆಯನ್ನು ನೀಡಿದ್ದಾರೆ.

Advertisement
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಲಭಿಸುತ್ತದೆ. ಕೇಂದ್ರ ಬಜೆಟ್ 2023 ರ ಅಂದಾಜಿನ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ಹಂಚಿಕೆಯು ರೂ 8,000 ಕೋಟಿಗಳಷ್ಟು ಕಡಿಮೆಯಾಗಿದೆ. ಆದರೆ ಬಜೆಟ್ ಕಡಿತದಿಂದ ಯೋಜನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದರು.

ಯೋಜನೆಯಲ್ಲಿ ಸಾಕಷ್ಟು ಡೇಟಾ ನವೀಕರಣಗಳು ನಡೆಯುತ್ತಿವೆ ಮತ್ತು ಫಲಾನುಭವಿಗಳ ಡಿಪ್ಲಿಕೇಶನ್ ಪರೀಕ್ಷೆಯನ್ನು ಕೃಷಿ ಸಚಿವಾಲಯ ಮಾಡುತ್ತಿದೆ ಎಂದು ಸೀತಾರಾಮನ್ ಪ್ರತಿಪಕ್ಷಗಳಿಗೆ ತಿಳಿಸಿದರು. ಯೋಜನೆಯ ಮೊತ್ತವನ್ನು ಹೆಚ್ಚಿಸುವ ಬಗ್ಗೆ, ಕೃಷಿ ಸಚಿವ ನರೇಂದ್ರ ತೋಮರ್ , ಪಿಎಂ-ಕಿಸಾನ್ ಅಡಿಯಲ್ಲಿ ವರ್ಷಕ್ಕೆ 6,000 ಮೊತ್ತವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ.

Advertisement

ಪಿಎಂ ಕಿಸಾನ್‌ ಸಹಿತ ಸರ್ಕಾರದ ಎಲ್ಲಾ ಯೋಜನೆಗಳ ಸಹಾಯಧನವು ಇನ್ನು ಮುಂದ ಆಧಾರ್‌ ಕಾರ್ಡ್‌ ನೋಂದಣಿಯಾದ ಬ್ಯಾಂಕ್‌ಗೆ ಮಾತ್ರಾ ಪಾವತಿಯಾಗುತ್ತದೆ. ಅದಕ್ಕಾಗಿ ಆಧಾರ್‌ ಸೀಡಿಂಗ್‌ ಕಾರ್ಯ ನಡೆಯುತ್ತದೆ. ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಸಂಖ್ಯೆಯು ಲಿಂಕ್‌ ಆಗಿರಬೇಕು, ಕೇವಲ ಲಿಂಕ್‌ ಆಗಿದ್ದರೆ ಸಾಲದು ಸೀಡಿಂಗ್‌ ಆಗಿರಬೇಕು. ಸೀಡಿಂಗ್‌ ಆಗಿರದ ಆಧಾರ್‌ ಕಾರ್ಡ್‌ಗಳಿಗೆ ಸಹಾಯಧನವು ಮುಂದಿನ ದಿನಗಳಲ್ಲಿ ಪಾವತಿಯಾಗುವುದಿಲ್ಲ.ಈಗ ಪಿಎಂ ಕಿಸಾನ್‌ ಯೋಜನೆಯಲ್ಲೂ ಇದೇ ಸಮಸ್ಯೆಯಾಗುತ್ತಿದೆ.

ನಕಲಿ ವಿಳಾಸಗಳು, ಮೃತರ ಖಾತೆಗೆ ಹಣ ಪಾವತಿ ತಡೆಯಲು ಮುಂದಿನ ದಿನಗಳಲ್ಲಿ ಬ್ಯಾಂಕ್‌ ಖಾತೆಗಳ ಬದಲಾಗಿ ಆಧಾರ್‌ ಸಂಖ್ಯೆಗಳಿಗೆ ಹಣ ಪಾವತಿಯಾಗುತ್ತದೆ. ಈ ಸಂದರ್ಭದಲ್ಲಿ ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆಗಳು ಸೀಡಿಂಗ್‌ ಆಗಿರಬೇಕಾಗಿರುತ್ತದೆ. ಒಂದು ಆಧಾರ್‌ ಗೆ ಒಂದು ಖಾತೆ ಮಾತ್ರಾ ಸೀಡಿಂಗ್‌ ಆಗಿರುತ್ತದೆ. ಆಧಾರ್‌ ಗೆ ನಿಮ್ಮ ಬ್ಯಾಕ್‌ ಖಾತೆ ಸೀಡಿಂಗ್‌ ಆಗಿದೆಯೇ ಎಂದು ಪರಿಶೀಲನೆ ಮಾಡಲು ಈ  ಲಿಂಕ್‌ ಮೂಲಕ ಗಮನಿಸಬಹುದಾಗಿದೆ. https://resident.uidai.gov.in/bank-mapper   

Advertisement

ಒಂದು ವೇಳೆ ಆಧಾರ್‌ ಸಂಖ್ಯೆ ಜೊತೆ ನಿಮ್ಮ ಬ್ಯಾಂಕ್‌ ಖಾತೆ ಲಿಂಕ್‌ ಆಗದೇ ಇದ್ದರೆ ಅಥವಾ ಸೀಡಿಂಗ್‌ ಆಗದೇ ಇದ್ದರೆ ಬ್ಯಾಂಕ್‌ ನಲ್ಲಿ ಈ ಬಗ್ಗೆ ಪ್ರತ್ಯೇಕವಾಗಿ ತಿಳಿಸಿ ಸೀಡಿಂಗ್‌ ಮಾಡಿಸಿದರೆ ಪಿಎಂ ಕಿಸಾನ್‌ ಯೋಜನೆಯ ಹಣ ಹಾಗೂ ಸರ್ಕಾರದ ಇತರ ಎಲ್ಲಾ ಯೋಜನೆಯ ಹಣವು ಪಾವತಿಯಾಗುತ್ತದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror