#CauveryWater | ಪ್ರಾಧಿಕಾರದ ಸೂಚನೆಗೆ ತಲೆ ಬಾಗಿದ ಸರ್ಕಾರ | ಮತ್ತೆ ತಮಿಳುನಾಡಿಗೆ ನೀರು ಬಿಡುಗಡೆ

September 19, 2023
9:24 AM
ಕಾವೇರಿ ನೀರು ಪ್ರಾಧಿಕಾರದ ಸೂಚನೆಗೆ ತಲೆ ಬಾಗಿದ ಕರ್ನಾಟಕ ಸರ್ಕಾರ ರಾತ್ರಿಯಿಂದಲೇ ಕೆಆರ್​ಎಸ್​ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪ್ರತಿದಿನ 5 ಸಾವಿರ ಕ್ಯೂಸೆಕ್​ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ಪ್ರಾಧಿಕಾರ ಸೂಚನೆ ನೀಡಿತ್ತು. ಪ್ರಾಧಿಕಾರದ ಸೂಚನೆ ಹಿನ್ನೆಲೆ ರಾಜ್ಯದ ಜನತೆಯ ವಿರೋಧದ ನಡುವೆಯೂ ಅಧಿಕಾರಿಗಳು ಕಾವೇರಿ ನದಿಗೆ ನೀರು ಹರಿಬಿಟ್ಟಿದ್ದಾರೆ. 

ಕಾವೇರಿ ನೀರು ಬಿಡುಗಡೆ ವಿಚಾರದಲ್ಲಿ ರಾಜ್ಯ ಹಾಗೂ ತಮಿಳುನಾಡಿಗೆ ಒಮ್ಮತ ಒದಗಿ ಬರುತ್ತಲೇ ಇಲ್ಲ. ಅದರಲ್ಲೂ ರಾಜ್ಯ ಸರ್ಕಾರ, ತಮಿಳುನಾಡಿನ ಎದುರು ಹಿನ್ನಡೆಯನ್ನೇ ಅನುಭವಿಸ್ತಿದೆ. ಕೆಆರ್‌ಎಸ್‌ ಡ್ಯಾಂನಲ್ಲಿ ನೀರು ಇಲ್ಲದಿದ್ರೂ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ತಾಕೀತು ಮಾಡಿದೆ. ಕಾವೇರಿ ನೀರು ಪ್ರಾಧಿಕಾರದ ಸೂಚನೆಗೆ ತಲೆ ಬಾಗಿದ ಕರ್ನಾಟಕ ಸರ್ಕಾರ ರಾತ್ರಿಯಿಂದಲೇ ಕೆಆರ್​ಎಸ್​ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿದೆ. ಪ್ರತಿದಿನ 5 ಸಾವಿರ ಕ್ಯೂಸೆಕ್​ನಂತೆ 15 ದಿನ ನೀರು ಹರಿಸುವಂತೆ ಕಾವೇರಿ ನೀರು ಪ್ರಾಧಿಕಾರ ಸೂಚನೆ ನೀಡಿತ್ತು. ಪ್ರಾಧಿಕಾರದ ಸೂಚನೆ ಹಿನ್ನೆಲೆ ರಾಜ್ಯದ ಜನತೆಯ ವಿರೋಧದ ನಡುವೆಯೂ ಅಧಿಕಾರಿಗಳು ಕಾವೇರಿ ನದಿಗೆ ನೀರು ಹರಿಬಿಟ್ಟಿದ್ದಾರೆ.

Advertisement
Advertisement
Advertisement
Advertisement

ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹಿನ್ನೆಲೆ ರೈತ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. CWMA ಆದೇಶವನ್ನ ಯಾವುದೇ ಕಾರಣಕ್ಕೂ ಪಾಲಿಸಲು ಸಾಧ್ಯವಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಆದರೆ ಸರ್ಕಾರ ಆದೇಶದಂತೆ ನೀರು ಹರಿಸುತ್ತಿದೆ. CWMA ಆದೇಶ ಕುರಿತಂತೆ ಮಂಡ್ಯ ಸಂಸದೆ ಸುಮಲತಾ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಸೇಖಾವತ್‌ ಅವರನ್ನು ಭೇಟಿಯಾಗಿದ್ದಾರೆ. ಮಂಡ್ಯ ಮತ್ತು ಕರ್ನಾಟಕದ ರೈತರು ಬರ ಕಾರಣದಿಂದಾಗಿ ತತ್ತರಿಸಿದ್ದು, ಮಂಡ್ಯ ರೈತರ ಜೀವನಾಡಿ ಆಗಿರುವ ಕಾವೇರಿಯಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡಲಾಗ್ತಿದೆ. ಇದೀಗ ಮತ್ತೆ 15 ದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದೆ ಅಂತ ವಿವರಿಸಿದ್ದಾರೆ.

Advertisement

ಸಂಸದರ ಮನವಿಗೆ ಸ್ಪಂದಿಸಿರೋ ಕೇಂದ್ರ ಜಲಶಕ್ತಿ ಸಚಿವ, ಆಯಾ ರಾಜ್ಯಗಳ ಜಂಟಿ ಸಮಿತಿ ರಚಿಸಲಾಗುವುದು ಮತ್ತು ಮುಂದಿನ ವಾರದಲ್ಲೇ ಸಮೀಕ್ಷೆ ನಡೆಸುವುದಾಗಿ, ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಕಾವೇರಿ ಪ್ರಾಧಿಕಾರ ಆದೇಶ ಹಿನ್ನೆಲೆ, ಮಂಡ್ಯದಲ್ಲಿ ಮತ್ತೆ ರೈತರ ಕಿಚ್ಚು ಭುಗಿಲೆದ್ದಿದೆ. ಪ್ರಾಧಿಕಾರದ ಆದೇಶ ಖಂಡಿಸಿ ರೈತರು ನೀರಿಗಿಳಿದು, ಘೋಷಣೆ ಕೂಗಿ ಕಪ್ಪು ಭಾವುಟ ಪ್ರದರ್ಶನ ಮಾಡಿದ್ದಾರೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror