ಕೆಲವು ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್ ಬಳಕೆ ಮಾಡಲು ಸರ್ಕಾರವು 1 ವರ್ಷದ ಅವಧಿಗೆ ಅನುಮೋದನೆಯನ್ನು ವಿಸ್ತರಣೆ ಮಾಡಿದೆ. ಕೆಲವು ಕೃಷಿಯಲ್ಲಿ ಡ್ರೋನ್ ಬಳಕೆಯುವ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಹೀಗಾಗಿ ನಿಗದಿತ ಕೀಟನಾಶಕಗಳನ್ನು ಮಾತ್ರಾ ಸಿಂಪಡಿಸಲು ಡ್ರೋನ್‌ಗಳನ್ನು ಬಳಸಲು ಸಸ್ಯ ಸಂರಕ್ಷಣಾ ಕಂಪನಿಗಳಿಗೆ ನೀಡಲಾದ ಮಧ್ಯಂತರ ಅನುಮೋದನೆಯನ್ನು ಸರ್ಕಾರ ವಿಸ್ತರಿಸಿದೆ.
ಏಪ್ರಿಲ್ 2024 ರಿಂದ ಪ್ರಾರಂಭವಾಗುವಂತೆ ಈ ಅನುಮೋದನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಈಗಾಗಲೇ ಎಲ್A ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಿ ಅನುಮತಿ ನೀಡಲಾಗಿತ್ತು. ಅದೇ ನಿಯಮಗಳನ್ನು ಮುಂದುವರಿಸಲಾಗಿದೆ. ಕೆಲವು ಸಮಯದ ಹಿಂದೆ ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್‌ಗಳ ಬಳಕೆಯ ಮಾರ್ಗಸೂಚಿಯನ್ನು ತಿಳಿಸಲಾಗಿತ್ತು. ನಿಬಂಧನೆಗಳು, ಹಾರುವ ಅನುಮತಿಗಳು, ಪ್ರದೇಶದ ದೂರ ನಿರ್ಬಂಧಗಳು, ತೂಕದ ವರ್ಗೀಕರಣ, ಜನದಟ್ಟಣೆ ಪ್ರದೇಶಗಳ ನಿರ್ಬಂಧ, ಡ್ರೋನ್ ನೋಂದಣಿ, ಸುರಕ್ಷತಾ ವಿಮೆ, ಪೈಲಟಿಂಗ್ ಪ್ರಮಾಣೀಕರಣ, ಕಾರ್ಯಾಚರಣೆ ಯೋಜನೆ, ವಿಮಾನ ಹಾರಾಟದಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಇದಲ್ಲದೆ, ಕೀಟನಾಶಕ ಸಿಂಪಡಣೆಯ ನಿರ್ವಾಹಕರು ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಕೀಟನಾಶಕವನ್ನು ವೈಮಾನಿಕವಾಗಿ ಸಿಂಪಡಣೆಗೆ ಮುನ್ನ ಅಧಿಕಾರಿಗಳ ಮೂಲಕ 24 ಗಂಟೆಗಳ ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಇದಲ್ಲದೆ, ಪೈಲಟ್‌ಗಳು ಕೀಟನಾಶಕಗಳ ಕ್ಲಿನಿಕಲ್ ಪರಿಣಾಮಗಳನ್ನು ಒಳಗೊಂಡಂತೆ ವಿಶೇಷ ತರಬೇತಿಗೆ ಒಳಗಾಗಬೇಕು ಎಂದು ಸಚಿವಾಲಯ ಹೇಳಿದೆ.
ಡ್ರೋನ್ ತಂತ್ರಜ್ಞಾನವು ಕೆಲವು ಕೃಷಿಯಲ್ಲಿ ಬಹಳಷ್ಟು ಉಪಯೋಗವಾಗಿದೆ. ಹೀಗಾಗಿ ಕೃಷಿಕರು ಈ ತಂತ್ರಜ್ಞಾನದ ಬಳಕೆಗೆ ಆಸಕ್ತರಾಗಿದ್ದಾರೆ. ಹೀಗಾಗಿ ಸರ್ಕಾರವು ಕೆಲವು ನಿಬಂಧನೆಗಳೊಂದಿಗೆ ಬಳಕೆಗೆ ಸದ್ಯ ಅನುಮೋದನೆ ನೀಡಿದೆ.
Source:BS Digital media