ಕೇಂದ್ರ ಸರ್ಕಾರವು ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಕುರಿತು ಸಾರ್ವಜನಿಕರು ಮತ್ತು ಎಲ್ಲಾ ಹಿತಾಸಕ್ತಿದಾರರಿಂದ ಅಭಿಪ್ರಾಯ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ. ಈ ಹೊಸ ಮಸೂದೆ ಜಾರಿಗೆ ಬಂದಲ್ಲಿ, ಇನ್ಸೆಕ್ಟಿಸೈಡ್ಸ್ ಕಾಯ್ದೆ–1968 ಹಾಗೂ ಇನ್ಸೆಕ್ಟಿಸೈಡ್ಸ್ ನಿಯಮಗಳು–1971 ರದ್ದುಪಡಿಸಲ್ಪಡಲಿವೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (MoA&FW) ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ಈ ಹೊಸ ಕರಡು ಮಸೂದೆಯನ್ನು ತಯಾರಿಸಿದೆ.
ರೈತಕೇಂದ್ರಿತ ಮಸೂದೆ : ಈ ಕರಡು ಮಸೂದೆ ರೈತಕೇಂದ್ರಿತ ಕಾನೂನು ಆಗಿದ್ದು, ರೈತರಿಗೆ ಗುಣಮಟ್ಟದ ಕೀಟನಾಶಕಗಳ ಲಭ್ಯತೆ ಖಚಿತಪಡಿಸುವುದರ ಜೊತೆಗೆ Ease of Living ಮತ್ತು Ease of Doing Business ಅನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಕರಡು ಮಸೂದೆಯ ಪ್ರಮುಖ ಅಂಶಗಳು :
- ರೈತರಿಗೆ ಉತ್ತಮ ಸೇವೆ ನೀಡಲು ಪಾರದರ್ಶಕತೆ ಮತ್ತು ಟ್ರೇಸಬಿಲಿಟಿ ವ್ಯವಸ್ಥೆ
- ಕೀಟನಾಶಕ ನಿರ್ವಹಣೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆ
- ನಕಲಿ ಮತ್ತು ಕಳಪೆ ಕೀಟನಾಶಕಗಳ ವಿರುದ್ಧ ಕಠಿಣ ದಂಡಾತ್ಮಕ ಕ್ರಮಗಳು
- ಸಣ್ಣ ತಪ್ಪುಗಳಿಗೆ ಅಪರಾಧರಹಿತಗೊಳಿಸುವ (Decriminalisation) ವ್ಯವಸ್ಥೆ
- ರಾಜ್ಯ ಮಟ್ಟದ ಅಧಿಕಾರಿಗಳಿಗೆ ದಂಡ ನಿಗದಿಪಡಿಸುವ ಅಧಿಕಾರ
- ಕೀಟನಾಶಕಗಳ ನಿಯಂತ್ರಣ ಮತ್ತು ಆಡಳಿತ ವ್ಯವಸ್ಥೆ ಬಲಪಡಿಸುವ ತಿದ್ದುಪಡಿಗಳು
- ಪರೀಕ್ಷಾ ಪ್ರಯೋಗಾಲಯಗಳಿಗೆ ಕಡ್ಡಾಯ ಮಾನ್ಯತೆ, ಇದರಿಂದ ಗುಣಮಟ್ಟದ ಕೀಟನಾಶಕಗಳು ಮಾತ್ರ ರೈತರಿಗೆ ಲಭ್ಯವಾಗಲಿವೆ
ಈ ಮಸೂದೆ ರೈತರ ಹಿತ ಹಾಗೂ ವ್ಯಾಪಾರ ಸುಲಭತೆ ನಡುವೆ ಸಮತೋಲನ ಸಾಧಿಸುವುದನ್ನು ಗುರಿಯಾಗಿಸಿಕೊಂಡಿದೆ.
ಸಾರ್ವಜನಿಕ ಸಲಹೆ ಸಲ್ಲಿಸಲು ಅವಕಾಶ: ಪೂರ್ವ-ಶಾಸನಾತ್ಮಕ ಸಮಾಲೋಚನೆ ಪ್ರಕ್ರಿಯೆಯ ಭಾಗವಾಗಿ, ಕರಡು ಪೆಸ್ಟಿಸೈಡ್ಸ್ ಮ್ಯಾನೇಜ್ಮೆಂಟ್ ಬಿಲ್–2025 ಮತ್ತು ಸಲಹೆ ಸಲ್ಲಿಸುವ ನಿಗದಿತ ನಮೂನೆಯನ್ನು ಕೃಷಿ ಸಚಿವಾಲಯದ ಅಧಿಕೃತ ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಹಾಗೂ ಹಿತಾಸಕ್ತಿದಾರರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು MS Word ಅಥವಾ PDF ರೂಪದಲ್ಲಿ ಇಮೇಲ್ ಮೂಲಕ ಸಲ್ಲಿಸಬಹುದು. ಅಂತಿಮ ದಿನಾಂಕ: ಫೆಬ್ರವರಿ 4, 2026


