ಸಿರಿಧಾನ್ಯಕ್ಕೆ ಉತ್ತೇಜನ | ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯದ ತಿಂಡಿ ತಿನಿಸು, ಪಾನೀಯ ಬಳಸಲು ಸುತ್ತೋಲೆ | ನಂದಿನಿ ಔಟ್ ಲೆಟ್, ಸ್ವಸಹಾಯ ಸಂಘ, ಸಾವಯವ ಸಂತೆಗಳಲ್ಲಿ ಲಭ್ಯ |

February 18, 2023
1:40 PM

ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಹಾರ ಬೇಕೇ ಬೇಕು. ಆಹಾರವಿಲ್ಲದೇ ನಮ್ಮ ಬದುಕಿಲ್ಲ. ಆದ್ದರಿಂದ ಆಹಾರ ಬದುಕಿನ ಪ್ರಾಥಮಿಕ ಅವಶ್ಯಕತೆಗಳಲ್ಲಿ ಒಂದಾಗಿದೆ. ಆಹಾರದಿಂದಲೇ ಆರೋಗ್ಯ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ಅರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ.ಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರಗಳು. ಹತ್ತಾರು ಸಾವಿರ ವರ್ಷಗಳ ಹಿಂದೆಯೇ ಧಾನ್ಯಗಳನ್ನು ಮಾನವರು ಬೆಳೆಯುತ್ತಿದ್ದರು. ಅದರಲ್ಲೂ ಇಂದು ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ಅಗ್ರಸ್ಥಾನದಲ್ಲಿದೆ.

Advertisement

ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈ ನಿಟ್ಟಿನಲ್ಲಿ  ಸಿರಿಧಾನ್ಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಎಲ್ಲ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದೆ.  ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದ ಎಲ್ಲಾ ಇಲಾಖೆಗಳು ಹಾಗೂ ಎಲ್ಲಾ ಅಧೀನ ಕಛೇರಿಗಳಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ ರಾಜ್ ಇಲಾಖಾ ವತಿಯಿಂದ ಎಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಆಯೋಜಿಸಲಾಗುವ ಎಲ್ಲಾ ಸಭೆ ಸಮಾರಂಭಗಳಲ್ಲಿ ಸಿರಿಧಾನ್ಯ ಆಧರಿತ ತಿಂಡಿ ತಿನಿಸು/ಪಾನಿಯಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಿರಿಧಾನ್ಯಗಳಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ಅಂತರಾಷ್ಟ್ರೀಯ ಸಿರಿ ಧಾನಗಳು ವರ್ಷ ಎಂದು ಘೋಷಿಸಲು ವಿಶ್ವ ಸಂಸ್ಥೆಗೆ ಭಾರತ ಸರ್ಕಾರ 2021ರಲ್ಲಿ ಪ್ರಸ್ತಾಪಿಸಿದ ಮೇರೆಗೆ ವಿಶ್ವಸಂಸ್ಥೆ `2023ನೇ ವರ್ಷವನ್ನು ಅಂತರಾಷ್ಟ್ರೀಯ  ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಯೋಗದಿಂದ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಗೆ ಹಲವಾರು ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ರೂಪಿಸುತ್ತಿದೆ. `ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ – 2023’ನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಚರಿಸುವ ಸಲುವಾಗಿ, ನಾಗರೀಕ ಚಳವಳಿ ಮೂಲಕ ಭಾರತೀಯ ಸಿರಿಧಾನ್ಯಗಳು ಹಾಗೂ ಇವುಗಳ ಆಧಾರಿತ ತಿಂಡಿ ತಿನಸು, ಖಾದ್ಯ, ಪಾನೀಯಗಳನ್ನು ದೇಶದಲ್ಲಿ ಮಾತ್ರಲ್ಲದೆ ವಿಶ್ವದಾದ್ಯಂತ ಪರಿಚಯಿಸಬೇಕಾದ ಅವಶ್ಯಕತೆ ಇದೆ.

Advertisement

ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಖಾದ್ಯ, ಪಾನೀಯಗಳು, ಕೆಎಂಎಫ್‍ ಸಂಸ್ಥೆಯ ನಂದಿನಿ ಔಟ್ ಲೆಟ್ (ಸಿರಿಧಾನ್ಯ ಮಾಲ್ಟ್, ಲಟ್ಟು, ಬರ್ಫಿ, ಬಿಸ್ಕತ್) ರಾಜ್ಯದ ಎಲ್ಲಾ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಫುಡ್ ಮತ್ತು ನ್ಯೂಟ್ರೀಷನ್ ವಿಭಾಗ, ಸ್ವಸಹಾಯ ಸಂಘಗಳು ಹಾಗೂ ರಾಜ್ಯದ ಸಾವಯವ ರೈತರ ಪ್ರಾಂತೀಯ ಒಕ್ಕೂಟಗಳು, ಪ್ರಮುಖ ಪಟ್ಟಣಗಳ ಸೂಪರ್‍ ಮಾರುಕಟ್ಟೆಗಳು ಹಾಗೂ ನಿಯಮಿತವಾಗಿ ಆಯೋಜಿಸಲಾಗುವ ಸಾವಯವ ಸಂತೆಗಳಲ್ಲಿ ಲಭ್ಯವಿರಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-07-2025 | ನಾಳೆಯಿಂದ ಮಳೆ ಕಡಿಮೆ ನಿರೀಕ್ಷೆ | ಹಲವು ದಿನಗಳ ಬಳಿಕ ರೈತರಿಗೆ ಆಶಾದಾಯಕ ಹವಾಮಾನ |
July 21, 2025
12:48 PM
by: ಸಾಯಿಶೇಖರ್ ಕರಿಕಳ
ಕಬ್ಬಿಗೆ ದರ ನಿಗದಿ ಮಾಡುವಂತೆ ಭಾಕಿಸಂ ಒತ್ತಾಯ
July 21, 2025
7:11 AM
by: The Rural Mirror ಸುದ್ದಿಜಾಲ
ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ರೈತರಿಗೆ ಸಲಹೆ
July 21, 2025
6:58 AM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group