ರೈತ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಅನ್ನದಾತ ಹೈರಾಣಾಗಿದ್ದಾನೆ. ಇರುವ ಸರ್ಕಾರಗಳು ರೈತನ ಕಷ್ಟವನ್ನು ಅರ್ಥಮಾಡಿಕೊಂಡು ಸಂಕಷ್ಟಕ್ಕೆ ನೆರವಾದರೆ ರೈತರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಅದರೆಂತೆ ಈ ವರ್ಷದ ಮುಂಗಾರು ಬೆಳೆ ಅಥವಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.
Advertisement
ಮಾಹಿತಿ ಪ್ರಕಾರ ಬೆಳೆಗಳಿಗೆ ಇರುವ ಎಂಎಸ್ಪಿಯನ್ನು ಶೇ. 3ರಿಂದ 8ರಷ್ಟು ಏರಿಸುವ ಸಾಧ್ಯತೆ ಇದೆ. ಗೋಧಿ, ಭತ್ತ ಇತ್ಯಾದಿ ಬೆಳೆಗಳಿಗೆ ಸರ್ಕಾರ ಹೆಚ್ಚು ದರ ಕೊಟ್ಟು ಖರೀದಿಸಬಹುದು ಎನ್ನಲಾಗಿದೆ. 2040 ರೂ ಇರುವ ಭತ್ತದ ಎಂಎಸ್ಪಿ ದರವನ್ನು 2,200 ರೂವರೆಗೂ ಏರಿಸುವ ಸಾಧ್ಯತೆ ಇದೆ.
Advertisement
ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಈ ವರ್ಷ ಇದುವರೆಗೂ ಕೇಂದ್ರ ಸರ್ಕಾರ ರೈತರಿಂದ 262 ಲಕ್ಷ ಟನ್ಗಳಷ್ಟು ಗೋಧಿ ಖರೀದಿ ಮಾಡಿದೆ. ಒಟ್ಟು 47,000 ಕೋಟಿ ರೂ ಹಣವನ್ನು ಈ ಗೋಧಿ ಬೆಳೆದ ರೈತರಿಗೆ ತಲುಪಿಸಲಾಗಿದೆ. 21.27 ಲಕ್ಷ ರೈತರಿಗೆ ಅನುಕೂಲವಾಗಿದೆ. ಕಳೆದ ವರ್ಷ (2022) ಕೇಂದ್ರ ಸರ್ಕಾರ ಎಂಎಸ್ಪಿ ದರದಲ್ಲಿ ರೈತರಿಂದ 188 ಲಕ್ಷ ಟನ್ಗಳಷ್ಟು ಗೋಧಿ ಖರೀದಿ ಮಾಡಿತ್ತು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement