Advertisement
ಕೃಷಿ

ಭೂತಾನ್‌ ನಿಂದ 17,000 ಟನ್ ಅಡಿಕೆ ಆಮದಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ |

Share

ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಉತ್ಪಾದನೆ ಹೆಚ್ಚಳದ ನಡುವೆಯೇ ಭೂತಾನ್‌ನಿಂದ ಪ್ರತಿವರ್ಷ  ಷರತ್ತು ಇಲ್ಲದೆಯೇ 17,000 ಟನ್ ಹಸಿರು ಅಡಿಕೆಯನ್ನು(Arecanut) ಆಮದು ಮಾಡಿಕೊಳ್ಳಬಹುದು ಎಂದು ಬುಧವಾರ ಕೇಂದ್ರ ಸರ್ಕಾರದ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT)  ಅನುಮತಿ ನೀಡಿದೆ.

ಇದೀಗ ಭೂತಾನ್‌ನಿಂದ ಕನಿಷ್ಟ ಆಮದು ಬೆಲೆಯ ಷರತ್ತು ಇಲ್ಲದೆಯೇ ಪ್ರತೀ ವರ್ಷ 17000 ಟನ್‌ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಅಂದರೆ ಕನಿಷ್ಟ ಆಮದು ಬೆಲೆ 251 ರೂಪಾಯಿ ವಿಧಿಸಲಾಗಿತ್ತು. ಇದನ್ನು ಏರಿಕೆ ಮಾಡಲು ಪ್ರಯತ್ನ ನಡೆಯುತ್ತಿದೆ. 2017 ರಲ್ಲಿ, ದೇಶೀಯ ರೈತರನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರವು ಪ್ರತಿ ಕೆಜಿಗೆ 251 ರೂ.ಗೆ ಕನಿಷ್ಟ ಆಮದು ದರವನ್ನು ವಿಧಿಸಿತು. ಈ ಮಿತಿಗಿಂತ ಕಡಿಮೆ ಇರುವ ಅಡಿಕೆಯನ್ನು ಆಮದು ಮಾಡಿವಂತಿಲ್ಲ, ಆಮದು ಬೆಲೆಗಿಂತ ಅಧಿಕ ದರದ ಅಡಿಕೆಯನ್ನು ಆಮದು ಮಾಡಬಹುದು ಎಂದು ತಿಳಿಸಲಾಗಿತ್ತು. ಈ ನಡುವೆಯೇ ಯಾವುದೇ ಷರತ್ತು ಇಲ್ಲದೆ ಅಡಿಕೆ ಆಮದು ಮಾಡಲು ಅವಕಾಶ ನೀಡಲಾಗಿದೆ. ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (DGFT) 2022-23ನೇ ಪ್ರಸಕ್ತ ಸಾಲಿನಲ್ಲಿ ಭೂತಾನ್‌ನಿಂದ ಕನಿಷ್ಟ ಆಮದು ಬೆಲೆ ಇಲ್ಲದೇ 8,500 ಮೆಟ್ರಿಕ್ ಟನ್‌ನಷ್ಟು ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಬಹುದು ಎಂದು ಹೇಳಿತ್ತು. ಮುಂದಿನ ವರ್ಷದಿಂದ  ಅಂದರೆ 2023-24 ರಿಂದ 17000 ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಬಹುದು ಈಗಾಗಲೇ ತಿಳಿಸಲಾಗಿದೆ.  ಇದಕ್ಕಾಗಿ ವಿವಿಧ ನೀತಿಗಳನ್ನು ರೂಪಿಸಲಾಗಿದೆ.

ಈಗ ಆಗಿರುವ ನೀತಿಯಿಂದ ಅಡಿಕೆ ಬೆಳೆಗಾರರಿಗರ ಆತಂಕ ಇದೆ. ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಕೆಲವು ದೇಶಗಳಿಂದ ಮುಕ್ತ ವ್ಯಾಪಾರ ವಹಿವಾಟು ನಡೆಸಬಹುದು. ಭಾರತ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಆಮದು ಸುಂಕ ಇತ್ಯಾದಿ ಕೆಲವು ನಿಯಮಗಳ ಮೂಲಕ ಆಮದು ಹಾಗೂ ರಫ್ತು ನಡೆಸಬಹುದಾಗಿದೆ. ಈಗ ಅಡಿಕೆ ಆಮದು ಕನಿಷ್ಟ ಬೆಲೆ ಇಲ್ಲದೆಯೇ ಅಡಿಕೆ ಆಮದು ಅವಕಾಶ ನೀಡಿದರೆ ಭವಿಷ್ಯದಲ್ಲಿ ಭಾರತದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಾಗಲಿದೆ ಎನ್ನುವುದು ಕೃಷಿ  ಮಾರುಕಟ್ಟೆ ವಲಯದ ಅಭಿಪ್ರಾಯ. ಸದ್ಯ ಈ ಆಮದು ನಿಯಮಗಳಿಂದ ಅಡಿಕೆ ಬೆಳೆಗಾರರಿಗೆ , ಮಾರುಕಟ್ಟೆಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಭವಿಷ್ಯದಲ್ಲಿ ಅಡಿಕೆ ಧಾರಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

23 hours ago

ಹವಾಮಾನ ವರದಿ | 14-10-2026 | ಕರ್ನಾಟಕಕ್ಕೆ ಹಿಂಗಾರು ಮಳೆ ಪ್ರವೇಶದ ಸೂಚನೆ – ಅ.16ರಿಂದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…

2 days ago

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ

ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…

2 days ago

ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ

ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…

3 days ago