ಗೋವುಗಳ ಕಳ್ಳತನ ಇದೀಗ ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗೋವು ಕಳ್ಳತನಕ್ಕೆ ಯತ್ನ ನಡೆಸಿದ ಘಟನೆಯ ವಿಡಿಯೋ ವೈರಲ್ ಆಗುತ್ತಿದೆ. ಆರೋಪಿಗಳ ಪತ್ತೆಗೆ ಈಗ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋವುಗಳ ಕಳ್ಳರ ಹಾವಳಿ ಮಾತ್ರ ನಿಂತಿಲ್ಲ. ಇದೀಗ ಕುಕ್ಕೆ ಸುಭ್ರಹ್ಮಣ್ಯ ದೇವಾಲಯದ ವಠಾರದ ದೇವಾಲಯದ ಪಾರ್ಕಿಂಗ್ ಜಾಗದಿಂದ ಆಂಜನೇಯ ಗುಡಿಯ ಹಿಂಭಾಗದಿಂದ ದನ ಕದಿಯಲು ಕಳ್ಳರು ಮಲಗಿದ್ದ ಗೋವನ್ನು ಕದ್ದು ಇನ್ನೋವ ಕಾರಿನಲ್ಲಿ ತುಂಬಿಸಿ ಕದ್ದೊಯ್ಯಲು ಯತ್ನಿಸಿದ ಘಟನೆ ಮಾ.24 .ರಾತ್ರಿ ನಡೆದಿದೆ. ಮರುದಿನ ಸಿಸಿ ಕ್ಯಾಮರಾ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಇಲ್ಲಿ ಗೋವು ತಪ್ಪಿಸಿಕೊಂಡು ಓಡಿರುವ ದೃಶ್ಯವೂ ಕಂಡುಬಂದಿದೆ. ಗ್ರಾಮೀಣ ಭಾಗದಲ್ಲಿ ಅದೂ ದೇವಾಲಯದ ಪ್ರದೇಶದಿಂದಲೇ ಗೋವುಗಳ ಕಳ್ಳತನವಾಗುತ್ತಿರುವ ಹಾಗೂ ಕಳ್ಳತನಕ್ಕೆ ಪ್ರಯತ್ನವಾಗಿರುವುದು ಸಾರ್ವಜನಿಕರಿಗೆ ಚಿಂತೆಗೀಡು ಮಾಡಿದೆ.
ಗೋವು ಕಳ್ಳತನಕ್ಕೆ ಯತ್ನ. ಸಿಸಿಟಿವಿಯಲ್ಲಿ ಸೆರೆ. pic.twitter.com/66ofRTrJdz
— theruralmirror (@ruralmirror) March 25, 2022
Advertisement