ಕಲೆಗೆ ಎಲ್ಲೆ ಇಲ್ಲ. ಅದು ಯಾರ ಸೊತ್ತು ಅಲ್ಲ. ಅದರಲ್ಲೂ ಕಲೆಯನ್ನು ಉಳಿಸಬೇಕಾದವರು ನಮ್ಮ ಮುಂದಿನ ಮಕ್ಕಳು(Children). ಅವರಿಗೆ ಈಗಿನಿಂದಲೇ ಅದರ ಬಗ್ಗೆ ಪರಿಚಯ, ಅಭಿನಯ, ತಾಲೀಮು ಮಾಡಿಸಿದರಷ್ಟೇ ಅವರು ಅದನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯ. ಅದಕ್ಕೆ ಮುಖ್ಯವಾಗಿ ಬೇಕಾದದ್ದು ಹಿರಿಯರ ಸಹಕಾರ. ಆದರೆ ಇಲ್ಲೊಂದು ಕಡೆ ರಾಜಕೀಯ(political) ವೈಷಮ್ಯಕ್ಕೆ ಕಲೆಯನ್ನೇ ನುಂಗಿ ಹಾಕಿ ಸಣ್ಣ ಮಕ್ಕಳಿಗೆ, ಕಲಾವಿದರಿಗೆ(Artists), ಕಲಾಭಿಮಾನಿಗಳಿಗೆ ಅವಮಾನ ಮಾಡಿದ ಘಟನೆ ನಡೆದಿದೆ.
ಕುಂದಾಪುರ(Kundapura) ತಾಲೂಕು ಹೇರಿಕುದ್ರುನಲ್ಲಿ ನಡೆಯುತ್ತಿದ್ದ ಮಕ್ಕಳ ಯಕ್ಷಗಾನವನ್ನು(Yakshagana) ನಿಲ್ಲಿಸಿದ ರಾಜಕೀಯ ಕಾರ್ಯಕರ್ತರು. ರಾಜಕೀಯವನ್ನು ಇಂತಹ ವಿಚಾರದಲ್ಲಿ ತರುವುದು ಸರಿಯೇ? ಮಕ್ಕಳ ಹಾಗೂ ಅವರ ಕುಟುಬದವರಿಗೆ ಎಸ್ಟು ನೋವಾಗಿರಬಹುದು.? ಆರಕ್ಷಕರು ಉದಯ ಪೂಜಾರಿ ಹೆರಿಕುದ್ರು ದೂರು ಬಂದಿರುವುದಾಗಿ ತಿಳಿಸಿದರು. ಮಹಾಂಕಲಿ ದೇವಸ್ಥಾನದ ಅರ್ಚಕ ಸ್ಥಾನದಲ್ಲಿರುವ ಇವರು ಇಂತ ಹೀನ ಕೆಲಸ ಮಾಡುವುದು ಸರಿಯೇ?
ರಾಜಕೀಯ ವೈಷಮ್ಯ ಹಿನ್ನೆಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿರುವಂತಹ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಹೇರಿಕುದ್ರುವಿನಲ್ಲಿ ನಡೆದಿದೆ. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಮಕ್ಕಳ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಂದಾಪುರ ಪೊಲೀಸ್ ಠಾಣೆಗೆ ಆನೆಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ದೂರು ನೀಡಿದ್ದರು. ದೂರಿನ ಹಿನ್ನಲೆ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ರಾತ್ರಿ 10:30 ರ ವರೆಗೆ ಯಕ್ಷಗಾನ ನಡೆಸಲು ಸಮಿತಿ ಅನುಮತಿ ಪಡೆದಿದ್ದು, ಆದರೆ ಸಮಯ ಮೀರುತ್ತಿದ್ದಂತೆ ಉದಯ ಪೂಜಾರಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಯಕ್ಷಗಾನದಲ್ಲಿ ಭಾಗವಹಿಸಬೇಕಿದ್ದ ಭಾಗವತರ ಅನಾರೋಗ್ಯದಿಂದ ವಿಳಂಬವಾಗಿದ್ದು, ಒಂದು ಗಂಟೆ ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಿದೆ. ಅವಧಿ ಮುಗಿದ ಬಳಿಕ ಯಕ್ಷಗಾನ ನಡೆಸುತ್ತಿರುವ ಕುರಿತು ಉದಯ ಪೂಜಾರಿಯಿಂದ ದೂರು ನೀಡಿದ್ದು, ರಾಜಕೀಯ ಪ್ರೇರಿತವಾಗಿ ಯಕ್ಷಗಾನ ನಿಲ್ಲಿಸುವ ಯತ್ನ ನಡೆಯುತ್ತಿರುವ ಕುರಿತು ಆಯೋಜಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲೆಯನ್ನು ಉಳಿಸುವಲ್ಲಿ ಎಲ್ಲರು ಸಹಕರಿಸಬೇಕು. ನಮ್ಮ ಮಕ್ಕಳು ಇಂಮಥ ಕಲೆಯನ್ನು ಅಭಿನಯಿಸುತ್ತಿರುವಾಗ ಅದಕ್ಕೆ ಅಡ್ಡಿ ಪಡಿಸಿರುವುದು ಖೇದಕರ ಸಂಗತಿ. ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬೆಳೆಸಲು ನಾವೇ ಮುಂದು ಬರದಿದ್ದರೆ ಮುಂದೆ ನಮ್ಮ ಕಲೆ ಬೆಳೆಯುವುದಿಲ್ಲ. ಇಂತವರು ಇರುವವರೆಗೆ ನಾಟಕ, ಯಕ್ಷಗಾನ ಮಾಡುವುದು ಬಹಳ ಕಷ್ಟ ಇದೆ ಎಂದು ಈ ಕುರಿತು ಬೇಸರ ವ್ಯಕ್ತಪಡಿಸಿದರು.