Advertisement
ಪ್ರಮುಖ

ಗ್ರಾಮಸಭೆಗೆ ಜನ ಯಾಕೆ ಬರುತ್ತಿಲ್ಲ? ಗ್ರಾಮಸಭೆಗಳು ಔಪಚಾರಿಕತೆಗೆ ಸೀಮಿತವೇ?

Share

ದೇಶದ ಗ್ರಾಮೀಣ ಪ್ರಜಾಪ್ರಭುತ್ವದ ಬೆನ್ನೆಲುಬಾಗಿರುವ ಗ್ರಾಮಸಭೆಗಳು ಅನೇಕ ಕಡೆಗಳಲ್ಲಿ ಕೇವಲ ಶಾಸನಬದ್ಧ ಔಪಚಾರಿಕತೆಯಾಗಿ ಉಳಿದಿವೆ ಎಂಬ ಆತಂಕಕಾರಿ ಸಂಗತಿ ರಾಷ್ಟ್ರೀಯ ಅಧ್ಯಯನವೊಂದರಲ್ಲಿ ಬಹಿರಂಗವಾಗಿದೆ. ಜೀವನೋಪಾಯದ ಒತ್ತಡ, ಸಮಯದ ಅಭಾವ, ಅರಿವಿನ ಕೊರತೆ ಮತ್ತು ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಪರಿಣಾಮಕಾರಿತ್ವದ ಬಗ್ಗೆ ವಿಶ್ವಾಸ ಕುಸಿದಿರುವುದು ಗ್ರಾಮಸಭೆಗಳಲ್ಲಿ ಜನರ ಭಾಗವಹಿಸುವಿಕೆ ಕಡಿಮೆಯಾಗಲು ಪ್ರಮುಖ ಕಾರಣಗಳಾಗಿವೆ.

ಈ ಅಧ್ಯಯನವನ್ನು ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (NIRDPR) ನಡೆಸಿದ್ದು, ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಸಹಯೋಗದಲ್ಲಿ ಸಿದ್ಧಪಡಿಸಿದ ವರದಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದೆ. ದೇಶದ 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 213 ಜಿಲ್ಲೆಗಳ 400 ಗ್ರಾಮ ಪಂಚಾಯಿತಿಗಳ ಸುಮಾರು 7,790 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 50 ಪೆಸಾ (PESA) ಗ್ರಾಮ ಪಂಚಾಯಿತಿಗಳು ಹಾಗೂ 130 ಮಹಿಳಾ ಸ್ನೇಹಿ ಪಂಚಾಯಿತಿಗಳು ಸೇರಿವೆ.

ಅಧ್ಯಯನದ ಪ್ರಕಾರ 55.5% ಗ್ರಾಮೀಣರು ಕೃಷಿ ಕೆಲಸ, ದಿನಗೂಲಿ ಹಾಗೂ ಇತರ ಜೀವನೋಪಾಯದ ಒತ್ತಡಗಳಿಂದ ಗ್ರಾಮಸಭೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ 16.2% ಜನರಿಗೆ ಗ್ರಾಮಸಭೆಯ ಬಗ್ಗೆ ಸಮರ್ಪಕ ಮಾಹಿತಿ ತಲುಪದಿರುವುದು ಹಾಗೂ 9.9% ಜನರು ಆಸಕ್ತಿಯ ಕೊರತೆಯನ್ನು ಕಾರಣವಾಗಿ ಉಲ್ಲೇಖಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ವಿಶ್ವಾಸ ಕುಸಿತವೂ ಪ್ರಮುಖ ಕಾರಣ : ಗ್ರಾಮಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಅನುಷ್ಠಾನವಾಗುವುದಿಲ್ಲ ಎಂಬ ಭಾವನೆ ಜನರಲ್ಲಿ ಹೆಚ್ಚುತ್ತಿದೆ. ಸಮೀಕ್ಷೆಯಲ್ಲಿ..

  • 45.5% ಜನರು ಪಾರದರ್ಶಕತೆ ಕೊರತೆ ಇದೆ ಎಂದಿದ್ದಾರೆ.
  • 41.9% ಜನರು ಸಭೆಗಳಿಂದ ಸ್ಪಷ್ಟ ಫಲಿತಾಂಶ ಕಾಣುತ್ತಿಲ್ಲ ಎಂದಿದ್ದಾರೆ.
  • 33.4% ಜನರು ಗ್ರಾಮಸಭೆಗಳು ಕೇವಲ ಔಪಚಾರಿಕ ಸಭೆಗಳಾಗಿ ಮಾರ್ಪಟ್ಟಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾತನಾಡಲು ಹಿಂಜರಿಕೆ :  ಗ್ರಾಮಸಭೆಯಲ್ಲಿ ಮುಕ್ತವಾಗಿ ಮಾತನಾಡಲು ಹಿಂಜರಿಯುವವರ ಸಂಖ್ಯೆಯೂ ಇದೆ. ಇದರಲ್ಲಿ  35.8% ಆತ್ಮವಿಶ್ವಾಸದ ಕೊರತೆಯನ್ನು, 17.4% ಅಧಿಕಾರಿಗಳ ಭಯವನ್ನು, 17.2% ಪ್ರಭಾವಿ ವ್ಯಕ್ತಿಗಳ ಪ್ರಾಬಲ್ಯವನ್ನು ಕಾರಣವೆಂದು ತಿಳಿಸಿದ್ದಾರೆ. ಇದಲ್ಲದೆ ಲಿಂಗ ಹಾಗೂ ಜಾತಿ ಆಧಾರಿತ ತಾರತಮ್ಯವೂ ಕೆಲವರ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಅಧ್ಯಯನದ ಪ್ರಕಾರ ಗ್ರಾಮಸಭೆಗೆ ಹಾಜರಾಗದವರಲ್ಲಿ 55.50% ಜನರು ಜೀವನೋಪಾಯ ಹಾಗೂ ಸಮಯದ ಒತ್ತಡವನ್ನು ಪ್ರಮುಖ ಕಾರಣವೆಂದಿದ್ದಾರೆ.  16.22% ಜನರು ಮಾಹಿತಿ ಮತ್ತು ಅರಿವಿನ ಕೊರತೆಯನ್ನು ಉಲ್ಲೇಖಿಸಿದ್ದಾರೆ. 9.93% ಜನರು ಆಸಕ್ತಿಯ ಕೊರತೆಯನ್ನು ತಿಳಿಸಿದ್ದಾರೆ. 5.54% ಜನರು ಸೇರ್ಪಡೆಗೆ ಸಂಬಂಧಿಸಿದ ಅಡೆತಡೆಗಳಿವೆ ಎಂದಿದ್ದಾರೆ.  4.92% ಜನರು ಸರ್ಕಾರಿ ಸೇವೆಗಳ ವಿತರಣೆಯ ಸಮಸ್ಯೆಗಳನ್ನು ಕಾರಣವೆಂದಿದ್ದಾರೆ. 3.97% ಜನರು ಗ್ರಾಮಸಭೆಗಳ ಮೇಲಿನ ವಿಶ್ವಾಸ ಕಡಿಮೆಯಾಗಿದೆ ಎಂದಿದ್ದಾರೆ. 2.92% ಜನರು ಮೂಲಸೌಕರ್ಯದ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.

ಭೆಗಳು ಕೇವಲ ಔಪಚಾರಿಕತೆ ಎಂಬ ಅಭಿಪ್ರಾಯ :  ಸಮೀಕ್ಷೆಯಲ್ಲಿ ಭಾಗವಹಿಸಿದ ಹಲವರು ಗ್ರಾಮಸಭೆಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ. 15–24 ಜನರು ಗ್ರಾಮಸಭೆಗಳು ಕೇವಲ ಔಪಚಾರಿಕತೆಯಾಗಿ ಉಳಿದಿವೆ ಎಂದಿದ್ದಾರೆ. ಶೇ. 18–28 ಜನರು ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಗೆ ಫಲಿತಾಂಶ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ. ಶೇ. 14–22 ಜನರು ತಮ್ಮ ಅಭಿಪ್ರಾಯಗಳಿಗೆ ಯಾವುದೇ ಮಹತ್ವ ನೀಡುವುದಿಲ್ಲ ಎಂದಿದ್ದಾರೆ.  ಶೇ. 12–20 ಜನರು ಪಾರದರ್ಶಕತೆ ಕೊರತೆ ಹಾಗೂ ರಾಜಕೀಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇ. 10–18 ಜನರು ಕುಂದುಕೊರತೆಗಳು ಪರಿಹಾರವಾಗುವುದಿಲ್ಲ ಎಂದು ಹೇಳಿದ್ದಾರೆ.

ಸುಧಾರಣೆಗೆ ಜನರ ಅಭಿಪ್ರಾಯ ಏನು ? : ಸಮೀಕ್ಷೆಯಲ್ಲಿ ಪಾಲ್ಗೊಂಡ ನಾಗರಿಕರು ಗ್ರಾಮಸಭೆಗಳನ್ನು ಪರಿಣಾಮಕಾರಿಯಾಗಿಸಲು ಹಲವು ಸಲಹೆಗಳನ್ನು ನೀಡಿದ್ದಾರೆ. 48.2% ಜನರು ಮನೆ-ಮನೆಗೆ ಜಾಗೃತಿ ಅಭಿಯಾನ ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಭೆಯ ದಿನಾಂಕವನ್ನು 7 ರಿಂದ 10 ದಿನಗಳ ಮುಂಚಿತವಾಗಿ ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.  10.6% ಜನರು ಸಂಜೆ ಅಥವಾ ರಜಾದಿನಗಳಲ್ಲಿ ಗ್ರಾಮಸಭೆ ನಡೆಸಬೇಕು ಎಂದು ಶಿಫಾರಸು ಮಾಡಿದ್ದಾರೆ. ಪರಿಣಾಮಕಾರಿ ಕುಂದುಕೊರತೆ ಪರಿಹಾರ ವ್ಯವಸ್ಥೆ ಜಾರಿಯಾಗಬೇಕು ಎಂದೂ ಒತ್ತಾಯಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಫಾಲೋಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಪರಿಹಾರಕ್ಕೆ ಶಿಫಾರಸುಗಳು :  ವರದಿ ಹಲವು ಮಹತ್ವದ ಸಲಹೆಗಳನ್ನು ನೀಡಿದೆ. ಅವುಗಳಲ್ಲಿ ಕೃಷಿ ಹಂಗಾಮು ಮತ್ತು ಕೆಲಸದ ಸಮಯ ತಪ್ಪಿಸಿ ಗ್ರಾಮಸಭೆ ನಡೆಸುವುದು, ಸಂಜೆ ಅಥವಾ ರಜಾದಿನಗಳಲ್ಲಿ ಸಭೆ ಆಯೋಜಿಸುವುದು, ಗ್ರಾಮಸಭೆ ಕುರಿತು ಜಾಗೃತಿ ಅಭಿಯಾನಗಳನ್ನು ಬಲಪಡಿಸುವುದು, ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಅನುಷ್ಠಾನ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದು, ಮಹಿಳೆಯರು, ಯುವಕರು, ದಿನಗೂಲಿ ಕಾರ್ಮಿಕರು ಹಾಗೂ ದುರ್ಬಲ ವರ್ಗಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ವಿಶೇಷ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರ ಕೆಲವು ಸಲಹೆ ನೀಡಿದೆ.

ವರದಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಮಣಿಯನ್ ಅವರು, ಮಾಹಿತಿಯುಕ್ತ, ಜಾಗೃತ ಮತ್ತು ಸಬಲೀಕರಣಗೊಂಡ ನಾಗರಿಕರೇ ಬಲವಾದ ಗ್ರಾಮಸಭೆಯ ಆಧಾರ ಎಂದು ಹೇಳಿದರು.

ಕೇಂದ್ರ ಪಂಚಾಯತ್ ರಾಜ್ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಅವರು, ಕಳೆದ ದಶಕದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಾಕಷ್ಟು ಆಗಿದೆ. ಈಗ ಗ್ರಾಮಸಭೆಗಳನ್ನು ಹೆಚ್ಚು ಭಾಗವಹಿಸುವಿಕೆ, ಪಾರದರ್ಶಕತೆ ಹಾಗೂ ಪರಿಣಾಮಕಾರಿತ್ವ ಹೊಂದಿದ ವೇದಿಕೆಯನ್ನಾಗಿ ರೂಪಿಸುವುದು ಅಗತ್ಯ. ಬಲವಾದ ಗ್ರಾಮಸಭೆಯೇ ಬಲವಾದ ಪಂಚಾಯತ್ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ…ಅಭಿಪ್ರಾಯ-ಪ್ರತಿಕ್ರಿಯೆನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಕಮೆಂಟ್‌ ಮೂಲಕ ತಿಳಿಸಿ...

A national study commissioned by the Ministry of Panchayati Raj has found that 55.5% of rural citizens miss Gram Sabha meetings due to livelihood and work-related pressures. The report also highlights low awareness, lack of visible action on resolutions, and declining public trust as key reasons for poor participation. It recommends flexible meeting schedules, stronger awareness campaigns, and improved accountability to strengthen grassroots democracy.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

2 hours ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

18 hours ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

1 day ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

2 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

2 days ago

ರಾಜ್ಯದಲ್ಲಿ ಬರದ ಛಾಯೆ | 178 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಜಲಾಶಯಗಳ ನೀರಿನ ಮಟ್ಟ ಶೇ.40ಕ್ಕೆ ಕುಸಿತ

ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…

3 days ago