ನಮ್ಮ ದೇಶದ ಪ್ರಧಾನ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಭಾರತೀಯ ಬಾಹ್ಯಕಾಶ ಯಾತ್ರಿಕನಾದ ರಾಕೇಶ್ ಶರ್ಮಾ ಅವರು ಬಾಹ್ಯಕಾಶದಲ್ಲಿ ಇದ್ದಾಗ… ಮೇಲಿಂದ ನಮ್ಮ ಭಾರತ ಹೇಗೆ ಕಾಣುತ್ತದೆ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಾಗಿ ರಾಕೇಶ್ ಶರ್ಮಾ ಹೇಳಿದರು… ಸಾರೇ ಜಹಾಂ ಸೇ ಅಚ್ಚಾ ಹಿಂದೂಸ್ತಾನ್ ಹಮಾರಾ…
ಅಜಾದಿ ಕಾ ಅಮೃತ್ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಜಾತಿ, ಧರ್ಮ, ರಾಜಕೀಯ ಭಾವ ಭೇದ ವಿಲ್ಲದೆ ಪ್ರತಿಯೊಬ್ಬ ನಾಗರೀಕನು ಭಾರತ ಸಂಸ್ಕೃತಿ ಮತ್ತು ನಮ್ಮ ದೇಶದ ಸಂವಿಧಾನ ವನ್ನು ಎತ್ತಿ ಹಿಡಿಯುವ ಮೂಲಕ ದೇಶವನ್ನು ಅಭಿವೃದ್ಧಿಯ ಪಥದತ್ತ ಚಲಾಯಿಸಬೇಕು. ಒಂದೊಂದು ಗ್ರಾಮದಲ್ಲಿ ಭಾರತ ನಿರ್ಮಾಣವಾಗಬೇಕು. ಗ್ರಾಮ ಭಾರತ ಎಂಬ ಆಶಯದೊಂದಿಗೆ ಗ್ರಾಮ ಮಟ್ಟದ, ಸಾಮಾನ್ಯ ಜನರ ಮೂಲಭೂತ ಕೊರತೆಯನ್ನು ( ರಸ್ತೆ, ಸೇತುವೆ, ವಸತಿ, ವಿದ್ಯುತ್, ನೆಟ್ ವರ್ಕ್, ನಿರುದ್ಯೋಗ ಉದ್ಯೋಗ ವಿಲ್ಲದೆ ಯುವಕರು ಕಂಗಲಾಗಿದೆ ಇತ್ಯಾದಿ ಸಮಸ್ಯೆ ) ನೀಗಿಸುವಲ್ಲಿ ಜನಪ್ರತಿನಿದಿಗಳು, ಅಧಿಕಾರಿಗಳು ನಿಸ್ವಾರ್ಥ ಸೇವೆ ಮಾಡುವ ಮೂಲಕ ಆಯಾ ಗ್ರಾಮವನ್ನು ಗ್ರಾಮ ಭಾರತ ಮಾಡಬಹುದು.ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ದೇಶದ ಹಳ್ಳಿ ಗಳನ್ನು, ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಕೊಡುಗೆ ನಮ್ಮ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ನೀಡುತ್ತೇವೆ ಎಂಬುವುದು ನಮ್ಮ ಭರವಸೆ .
ಭಾರತ ನನ್ನ ದೇಶ, ಎಲ್ಲಾ ಭಾರತೀಯರು ನನ್ನ ಸಹೋದರ, ಸಹೋದರಿಯರು….. ಸಾಮರಸ್ಯ ದಿಂದ ಮುಂದೆ ಸಾಗೋಣ. ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿದರೆ ಮಾತ್ರ ಸ್ವಾತಂತ್ರ್ಯ. ಪ್ರಜಾಪ್ರಭುತ್ವ ಇಲ್ಲದ ದೇಶದಲ್ಲಿ ಸ್ವಾತಂತ್ರ್ಯ ಇಲ್ಲ.ಪ್ರತಿಯೊಬ್ಬ ನಾಗರೀಕನು ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಲು ಬದ್ಧನಾಗಿರಬೇಕು.
ದೇಶದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ನಮಿಸುತ್ತಾ… ಜೈ ಭಾರತ… ಸಾರೇ ಜಹಾಂ ಸೇ ಅಚ್ಚಾ, ಹಿಂದೂಸ್ತಾನ್ ಹಮಾರಾ…