ಹೋಬಳಿ ಮಟ್ಟದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು ಎಂದು ಒತ್ತಾಯಿಸಿ ಪಂಜದ ಗ್ರಾಮಸ್ವರಾಜ್ ತಂಡದ ಸದಸ್ಯರು ಜಿಲ್ಲಾದಿಕಾರಿಗಳನ್ನು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಈಚೆಗೆ ಮನವಿ ನೀಡಲಾಯಿತು.
ಪಂಜ ಹೋಬಳಿ ಕೇಂದ್ರಕ್ಕೆ 19 ಗ್ರಾಮವು ಬರುತ್ತಿದ್ದು, ಪ್ರಮುಖ ಆರೋಗ್ಯ ಕೇಂದ್ರವೂ ಇದಾಗಿದೆ. ಸದ್ಯ ಎಲ್ಲಾ ವ್ಯವಸ್ಥೆಗಳನ್ನೂ ಹೊಂದಿದೆ, ಇನ್ನಷ್ಟು ವ್ಯವಸ್ಥೆಗಳು ಬೇಕಾಗಿದೆ. ಪಂಜವು ಎಲ್ಲಾ ಪ್ರದೇಶಗಳಿಗೂ ಪ್ರಮುಖ ಕೇಂದ್ರವೂ ಆಗಿದೆ. ಹೀಗಾಗಿ ಬಡ ಜನರ ಆರೋಗ್ಯ ದೃಷ್ಟಿಯಿಂದ ತಕ್ಷಣವೇ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಬೇಕು, ದಿನದ 24 ಗಂಟೆಯೂ ಸೇವೆ ಲಭ್ಯವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಒಂದು ವೇಳೆ ಈ ಬಗ್ಗೆ ಯಾವುದೇ ಕ್ರಮ ಆಗದೇ ಇದ್ದಲ್ಲಿ ಪಂಜ ಹೋಬಳಿ ಕೇಂದ್ರಕ್ಕೆ 19 ಜನರು ಒಂದಾಗಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂಬಂಧವಾಗಿ ಅ.2 ರಂದು ಸಾಂಕೇತಿಕವಾಗಿ ಗ್ರಾಮ ಸ್ವರಾಜ್ ಇದರ ವತಿಯಿಂದ ಸತ್ಯಾಗ್ರಹ ಮಾಡುವುದೆಂದು ನಿರ್ಣಯಿಸಲಾಗಿದೆ. ಈ ಸತ್ಯಾಗ್ರಹಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರು ಭಾಗವಹಿಸಬೇಕಾಗಿ ಗ್ರಾಮಸ್ವರಾಜ್ ತಂಡದ ಮುಖಂಡ , ಸಾಮಾಜಿಕ ಕಾರ್ಯಕರ್ತ ಜಿನ್ನಪ್ಪ ಗೌಡ ಅಳ್ಪೆ ತಿಳಿಸಿದ್ದಾರೆ.