Advertisement
Exclusive - Mirror Hunt

ಪಂಜದಲ್ಲಿ ನವಸಾಕ್ಷರರಿಂದ ಗ್ರಾಮಾಭಿವೃದ್ದಿಯ ಚಿಂತನೆ | ಗ್ರಾಮ ಸ್ವರಾಜ್ಯದತ್ತ ವಿನೂತನ ಹೆಜ್ಜೆ |

Share
ಗಾಂಧೀಜಿಯವರ ಚಿಂತನೆಯೇ ಗ್ರಾಮ ಸ್ವರಾಜ್ಯ. ಈಗ ಈ ಚಿಂತನೆ ಆರಂಭವಾಗಿರುವುದು  ಸುಳ್ಯ ತಾಲೂಕಿನ ಪಂಜದಲ್ಲಿ ನವಸಾಕ್ಷರರಿಂದ. ಈ ಹೆಜ್ಜೆ ಸದ್ದಿಲ್ಲದೆ ಮುಂದಡಿ ಇಡುತ್ತಿದೆ. ವಿವಿಧ ಕಾರಣಗಳಿಂದ ಗಮನ ಸೆಳೆದಿದೆ ಈ ಚಳುವಳಿ. ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಪ್ರದೇಶದ ಜಿನ್ನಪ್ಪ ಗೌಡ ಅವರು ಗ್ರಾಮ ಸ್ವರಾಜ್ಯ ಸಾಕಾರದಲ್ಲಿ ಮುಂಚೂಣಿಯಲ್ಲಿದ್ದಾರೆ.

ರೂರಲ್‌ ಮಿರರ್‌ ಸಂದರ್ಶನ

ಸಾಕ್ಷರತಾ ಆಂದೋಲನ ಆರಂಭವಾದಾಗ ಸುಳ್ಯ ತಾಲೂಕಿನ ಪಂಜದಲ್ಲಿ ಕೂಡಾ ಓದು ಬಾರದೇ ಇರುವವರಿಗೆ ಓದಿಸುವ, ಬರೆಯಿಸುವ ಆಂದೋಲನ ಆರಂಭವಾಯಿತು. ಹೀಗಾಗಿ ಪಂಜದಲ್ಲೂ 1990 ರಲ್ಲಿ ಸಾಕ್ಷರತಾ ಆಂದೋಲನ ಹೆಜ್ಜೆ ಇರಿಸಿತು. 1995 ರ ಹೊತ್ತಿಗೆ ನವಸಾಕ್ಷರರ ಪ್ರೇರಕರಾಗಿ ಜಿನ್ನಪ್ಪ ಅವರು ತೊಡಗಿಸಿಕೊಂಡರು. ಅಕ್ಷರ ಕಲಿಸುವುದು  ಹಾಗೂ ಅನೇಕರ ಬದುಕಿಗೆ ಪ್ರೇರೇಪಣೆ ನೀಡುವ ಕೆಲಸ ಆರಂಭಿಸಿದರು. ರಾತ್ರಿ ಶಾಲೆ ನಡೆಸಿ ಕಾಲನಿ ನಿವಾಸಿಗಳಿಗೆ, ಅಕ್ಷರ ಬಾರದೇ ಇರುವವರಿಗೆ ಅಕ್ಷರ ಬರೆಯಲು, ಸಹಿ ಹಾಕಲು ಕಲಿಸಿದರು.  2010 ರ ವರೆಗೆ ಪ್ರೇರಕರಾಗಿ ಕೆಲಸ ಮಾಡಿ ನಂತರ  2015  ರ ವರೆಗೆ ನವಸಾಕ್ಷರರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡಿದರು. ಅಷ್ಟವರೆಗೂ ನವಸಾಕ್ಷರರ ಸಂಘಟನೆ ಮಾಡುತ್ತಾ ಬಂದಿರುವ ಜಿನ್ನಪ್ಪ ಅವರು ನವಸಾಕ್ಷರರ ಬದುಕಿಗೆ ಪ್ರೇರಣಾದಾಯಿಯಾಗಿದ್ದರು. ಪುರುಷೋತ್ತಮ ಮುಡೂರು ಅವರಂತಹವರೂ ಮಾರ್ಗದರ್ಶನ ನೀಡಿದರು.

 

 

ನವಸಾಕ್ಷರರ ಸಂಘಟನೆಯ ಸಮಯದಲ್ಲಿ  ಪಂಜದ ಪ್ರದೇಶದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು  ಮಾಡಿದರು. ಅದರಲ್ಲಿ  ನವಸಾಕ್ಷರರ ಭೂಮಿ ಸಮಸ್ಯೆ ನಿವಾರಣೆ,  ಮನೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸ ಮಾಡಿದ್ದರು. ಈಗ ಹಲವು ನವಸಾಕ್ಷರರು ಸ್ವತಂತ್ರವಾಗಿ ಯೋಚಿಸುವ ಹಂತಕ್ಕೆ ಬಂದಿದ್ದಾರೆ ಎಂದು ಜಿನ್ನಪ್ಪ ಹೇಳುತ್ತಾರೆ. ಆದರೆ ಅನೇಕ ಮೂಲಭೂತ ಸಮಸ್ಯೆಗಳು ಇದೆ. ಈ ಕಾರಣಕ್ಕೆ ಪಂಚಾಯತ್‌ ಗ್ರಾಮ ಸಭೆಯಲ್ಲಿ ಧ್ವನಿ ಎತ್ತುವ ಕಾರ್ಯ ಮಾಡಲಾಗಿತ್ತು. ಈ ಸಮಯದಲ್ಲಿ  ಕೆಲವು ವಿರೋಧಗಳು ಬಂದಾಗ ನವಸಾಕ್ಷರರೆಲ್ಲರೂ ಒಂದಾಗಿ ಗ್ರಾಮ ಪಂಚಾಯತ್‌ ಚುನಾವಣೆಗೆ ಸ್ಫರ್ಧೆ ಮಾಡಲು ನಿರ್ಧರಿಸುತ್ತಾರೆ. ಇಲ್ಲಿಂದ ಬಳಿಕ ಸಾಮಾಜಿಕವಾಗಿ ನವಸಾಕ್ಷರರ ಚಟುವಟಿಕೆ ತೆರೆದುಕೊಳ್ಳುತ್ತದೆ. ಪಂಚಾಯತ್‌ ಗಳು ಜನರ ಪಂಚಾಯತ್‌ ಆಗಬೇಕೆಂದು ಹೆಜ್ಜೆ ಇಡುತ್ತಾರೆ ಚುನಾವಣಾ ಕಣಕ್ಕೆ ಧುಮುಕುತ್ತಾರೆ. ಪಂಜ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ಪಂಜದ 5  ವಾರ್ಡ್‌ ಗಳಲ್ಲಿ ಗ್ರಾಮ ಸ್ವರಾಜ್‌ ಎಂಬ ತಂಡದ ಮೂಲಕ ಸ್ಫರ್ಧೆ ಮಾಡುತ್ತಾರೆ. ಚುನಾವಣೆಗೆ ಸ್ಫರ್ಧೆ ಮಾಡಿದವರಲ್ಲಿ  ಇಬ್ಬರು ನವಸಾಕ್ಷರರು ಉಳಿದೆಲ್ಲರೂ ವಿಧ್ಯಾಭ್ಯಾಸ ಮಾಡಿದರು.

ಚುನಾವಣಾ ಸಮಯದಲ್ಲಿ  ಅಳ್ಪೆ ಚಿಂಗಾಣಿ ಗುಡ್ಡೆಯಲ್ಲಿ  ಕುಡಿಯುವ ನೀರಿನ ಟ್ಯಾಂಕ್‌  ರಚನೆ, ವಿದ್ಯುತ್‌ ಸಮಸ್ಯೆ ನಿವಾರಣೆ ಹೀಗೇ ವಿವಿಧ ಯೋಜನೆ ಹಾಗೂ ಗುರಿ ಇರಿಸಿ ಸ್ಫರ್ಧೆ ಮಾಡಿದ್ದರು. ಸೋತರೂ ತಾವು ಕೆಲಸ ಮಡುವುದಾಗಿ ಜನರಿಗೆ ತಿಳಿಸಿದ್ದರು. ಈಗ ಕೆಲಸ ಮಾಡುತ್ತಿದ್ದಾರೆ.

 

ಧ್ವಜ ಸ್ತಂಭದ ಬಗ್ಗೆ ಧ್ವನಿ
ನವಸಾಕ್ಷರರು ಹಣ ಹಾಕಿಸಿ ನಿರ್ಮಿಸಿದ ಧ್ವಜಸ್ತಂಭವನ್ನು  ಗ್ರಾಮ ಪಂಚಾಯತ್‌ ಕಟ್ಟದ ನಿರ್ಮಾಣದ ವೇಳೆ ಒಡೆದು ಹಾಕಿದೆ. ಅಮೃತ ಮಹೋತ್ಸವ ಕಾರಣ ಈ ಬಾರಿಯ ಸ್ವಾತಂತ್ರ್ಯ ಉತ್ಸವ ಮಹತ್ವ ಪಡೆದಿದೆ. ನವಸಾಕ್ಷರರಿಗೆ ಇದೀಗ ಆ.15  ರ ಒಳಗಾಗಿ ಮತ್ತೆ ಧ್ವಜ ಸ್ತಂಭ ನಿರ್ಮಿಸಿ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ನವಸಾಕ್ಷರರು  1990  ರಲ್ಲಿ  50 ಪೈಸೆ, ಒಂದು ರೂಪಾಯಿ ಹಣ ಸಂಗ್ರಹಿಸಿ, ನವ ಸಾಕ್ಷರರು ಪ್ರತಿಯೊಬ್ಬರೂ ಎರಡು ರೂಪಾಯಿ ಸಂಗ್ರಹಿಸಿ ಕಟ್ಟಿದ ಧ್ವಜ ಸ್ಥಂಭ ತೆಗೆದಿದ್ದಾರೆ, ಆಗ ನೀಡಿದ ಭರವಸೆಯಂತೆ ಪುನರ್‌ ನಿರ್ಮಾಣ ಮಾಡಬೇಕು ಎಂಬುದು ಒತ್ತಾಯವಾಗಿದೆ.

ಮೂಲಭೂತ ಸೌಕರ್ಯ ಪಡೆಯಲು ಗಾಂಧಿತತ್ತ್ವದ ಮೂಲಕ ನಡೆಯಲಾಗುತ್ತಿದೆ ಎನ್ನುವ ಜಿನ್ನಪ್ಪ ಅಳ್ಪೆ,  ಗ್ರಾಮ ಪಂಚಾಯತ್‌ ಗಳು ಯಾವತ್ತೂ ಜನರ ಪಂಚಾಯತ್ ಆಗಬೇಕು  ಪಕ್ಷಗಳ ಪಂಚಾಯತ್‌ ಆಗಬಾರದು ಎನ್ನುತ್ತಾರೆ  ಜಿನ್ನಪ್ಪ

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ರೈತರಿಗೆ ಬಜೆಟ್‌ನಲ್ಲಿ ಸಿಕ್ಕ 15 ಘೋಷಣೆಗಳು | ಕೃಷಿ, ಅಡಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ವಿಶೇಷ ಯೋಜನೆಗಳು

ರಾಜ್ಯ ಬಜೆಟ್‌ 2026-27ರಲ್ಲಿ ರೈತರಿಗೆ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ…

8 hours ago

ರಾಜ್ಯ ಬಜೆಟ್‌ 2026-27: ಕೃಷಿ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೊಸ ಯೋಜನೆಗಳ ಘೋಷಣೆ

ರಾಜ್ಯ ಬಜೆಟ್‌ 2026-27ರಲ್ಲಿ ಕೃಷಿ, ತೋಟಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಹಲವು ಹೊಸ…

8 hours ago

ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ

ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಳಿಕ ಮೋಡದ ವಾತಾವರಣ ಹೆಚ್ಚಾಗುವ ಸಾಧ್ಯತೆ ಇದೆ. ಘಟ್ಟದ…

12 hours ago

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

2 days ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

2 days ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

2 days ago