ವಾಯು ಗುಣಮಟ್ಟ ನಿರ್ವಹಣಾ ಆಯೋಗವು ಶುಕ್ರವಾರ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಇತರ ಸ್ಥಳಗಳಲ್ಲಿ ಶ್ರೇಣಿಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (GRAP)ಯ ಹಂತ-1 ರ ಅಡಿಯಲ್ಲಿ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ರದ್ದುಗೊಳಿಸಿದೆ. ಈ ನಿರ್ಧಾರವು ತಕ್ಷಣದಿಂದ ಜಾರಿಗೆ ಬಂದಿದೆ.
ಗುರುವಾರ (ಜನವರಿ 1,2026) ರಂದು 380 ಎಂದು ದಾಖಲಾಗಿದ್ದ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ(AQI) ಗಮನಾರ್ಹವಾಗಿ ಸುಧಾರಿಸಿದ್ದು, ಶುಕ್ರವಾರ ಸಂಜೆಗೆ 4ಗಂಟೆಗೆ 236 ದಾಖಲಾಗಿದೆ. ಗಾಳಿಯ ಗುಣಮಟ್ಟದ ಚಾಲ್ತಿಯಲ್ಲಿರುವುದು ಗಮನದಲ್ಲಿಟ್ಟುಕೊಂಡು, ಗ್ರಾಪ್ ನ ಸಿಎಕ್ಯೂಎಂ ಉಪ ಸಮಿತಿಯು ಅಸ್ತಿತ್ವದಲ್ಲಿರುವ GRAP ಯ ಹಂತ-3 ರ ಅಡಿಯಲ್ಲಿ ಕಲ್ಪಿಸಲಾದ ಎಲ್ಲಾ ಕ್ರಮಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ GRAP ಯ ಹಂತ-1 ಮತ್ತು 2ರ ಅಡಿಯಲ್ಲಿ ಎಲ್ಲಾ ಕ್ರಮಗಳು NCR ನಲ್ಲಿ ಜಾರಿಯಲ್ಲಿರುತ್ತವೆ ಎಂದು ಅಧಿಕಾರಿ ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




