ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನವೇ ಹುಲ್ಲು | ಕಳೆನಾಶಕ, ಕ್ರಿಮಿನಾಶಕದಿಂದ ಭೂಮಿಯ ಭೋಜನ ಹಾಳು ಮಾಡದಿರೋಣ.. |

November 18, 2023
12:46 PM
ಭೂಮಿಯ ಆರೋಗ್ಯ ಕಾಪಾಡುವ ಕಡೆಗೆ ಗಮನ ಹರಿಸೋಣ...

ಭೂಮಿ ತನ್ನ ಸವಕಳಿಯ(Depreciation) ರಕ್ಷಣೆಗಾಗಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುದಕ್ಕಾಗಿ, ಸೂರ್ಯನ ಪ್ರಖರ ಕಿರಣಗಳಿಂದ ರಕ್ಷಿಸುವುದಕ್ಕಾಗಿ, ನೀರಾವಿಯನ್ನು ತಡೆಗಟ್ಟುವುದಕ್ಕಾಗಿ, ಕೋಟ್ಯಾಂತರ ಸೂಕ್ಷ್ಮ ಜೀವಿಗಳ ಆವಾಸಕ್ಕಾಗಿ ನಿರ್ಮಿಸುವ ವ್ಯವಸ್ಥೆಯೇ ಹುಲ್ಲು.

Advertisement
Advertisement

ಒಂದೇ ಮಣ್ಣು, ಒಂದೇ ನೀರು ಕುಡಿದರೂ, ಬೆಳೆಯುವ ಸಸ್ಯ ವೈವಿಧ್ಯಗಳು ನೂರಾರು ಮತ್ತು ಸಸ್ಯದ ವಾಸನೆ ರುಚಿ ಎಲ್ಲವೂ ನೂರಾರು. ನಮ್ಮ ಶರೀರಕ್ಕೆ ಷಡ್ರಸ ಭೋಜನವು ಎಷ್ಟು ಅಗತ್ಯವೋ, ಅಂತೆಯೇ ಭೂಮಿಯ ಆರೋಗ್ಯಕ್ಕೆ ಷಡ್ರಸ ಭೋಜನಾ ವ್ಯವಸ್ಥೆಯೇ ಹುಲ್ಲು. ಆ ಹುಲ್ಲನ್ನು ನಾವು ವಿಷ ಹೊಡೆದು ನಾಶ ಮಾಡಿದರೆ, ಭೂಮಿಗೆ ಸಹಜವಾಗಿ ಸಿಗಬೇಕಾದ ಪೋಷಕಾಂಶಗಳನ್ನು ನಾಶ ಮಾಡಿದಂತಲ್ಲವೇ? ಒಂದು ಇಂಚಿನ ಸಾವಯವ ಇಂಗಾಲಯುಕ್ತ ಮೇಲ್ಮಣ್ಣಿನ ಪದರ ಉಂಟಾಗಬೇಕಾದರೆ ಧಾರಾಳ ಸವಯವ ವಸ್ತು ಬಿದ್ದು ಕಳಿತರೆ, ಒಂದು ಸಾವಿರ ವರ್ಷವಾದರೂ ಬೇಕಾಗಬಹುದಂತೆ.

Advertisement

ಕೋಟ್ಯಾಂತರ ವರ್ಷಗಳಿಂದ ರಚಿತವಾದ ಭೂಮಿಯನ್ನು ನಮ್ಮ ಸ್ವಾರ್ಥಕ್ಕಾಗಿ, ಕೃಷಿಯ ಸುಲಭಕ್ಕಾಗಿ, ಕಳೆಯೆಂದು ಉದ್ಘೋಷಿಸಿ ನಾಶ ಮಾಡಲು ನಮಗೆ ಹಕ್ಕಿದೆಯೇ? ಪ್ರಕೃತಿ ಸಹಜ ವಿಧಾನದಿಂದ ನಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ನಿವಾರಿಸಿಕೊಂಡು ಸಹಜೀವನಕ್ಕೆ ಶರಣು ಹೋಗುವುದು ಲೇಸೆಂಬ ಸಿದ್ಧಾಂತವನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂಬುದು ನನ್ನ ನಂಬಿಕೆ.ಅಲ್ಲವಾದರೆ, ಶರೀರದಲ್ಲಿ ಆದ ಗಾಯದ ಮೇಲ್ಪದರವನ್ನು ಕಿತ್ತಾಗ ಆಗುವ ನವೆ, ಉರಿ ಭೂಮಿಗೂ ಆಗಿ ಪ್ರತಿ ರೋಧವನ್ನು ವ್ಯಕ್ತಪಡಿಸೀತು. ಕಳೆಯನ್ನು ಬೆಳೆಸಿ ಮತ್ತೆ ಕತ್ತರಿಸಿ. ಬುಡ ಸಮೇತ ಕಿತ್ತು ಹಾಕುವುದು ಬೇಡ. ಪಾರ್ಕ್ ಗಳಲ್ಲಿ ಇರುವಂತೆ 1 ಇಂಚು ಕಳೆ ಉಳಿಯಲು ಬಿಡಿ. ಸುಲಭವಾಗಿ ಕಳೆ ಕತ್ತರಿಸುವ ಯಂತ್ರಗಳನ್ನು ಬಳಸಿ. ಪದೇ ಪದೇ ಬರುವ ಕಳೆ ನಮಗೆ ಹಸಿರು ಎಲೆ ಗೊಬ್ಬರವಾಗಿ ಭೂಮಿಯಲ್ಲಿ ಸೂಕ್ಷ್ಮದ ಜೀವಾಣುಗಳು ಎರೆಹುಳು ಸಮೃದ್ಧ ವಾಗಿ ಬೆಳೆಯುತ್ತವೆ. ತೋಟದ ಇಳುವರಿಯನ್ನು ಹೆಚ್ಚಿಸುವುದು.

ನಿರಂತರ ಕಳೆನಾಶಕ ಸಿಂಪಡಣೆ ಮಾಡುವುದರಿಂದ ಭೂಮಿಯ ಮೇಲಿನ ಗಿಡಗಳು ನಾಶವಾಗಿ ಪರ್ಯಾಯವಾಗಿ ಪಾಚಿ ಮಾಡದರಿಯ ಗಿಡ ಬೆಳೆಯುತ್ತದೆ. ಇದರಿಂದ ಭೂಮಿಯ ಆರೋಗ್ಯ ಹದಗೆಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಭೂಮಿಯ ಮೇಲ್ಮೈ ಮಣ್ಣು ನೀರಿನಿಂದ ಕೊಚ್ಚಿ ಹೋಗುತ್ತದೆ. ಇದರಿಂದ ಭೂಮಿಯೂ ಸಾರ ರಹಿತವಾಗುತ್ತದೆ. ಗಿಡಗಳಿಗೆ, ನಮ್ಮ ಬೆಳೆಗಳಿಗೂ ಹೆಚ್ಚಿನ ರೋಗ ಬಾಧೆ ಕಾಡುತ್ತದೆ. ಇದಕ್ಕಾಗಿಯೇ ಭೂಮಿಯ ಆರೋಗ್ಯ ಕಾಪಾಡೋಣ.  ಇದಕ್ಕಾಗಿ ವಾದಗಳಿಗೆ ಇಳಿಯದೆ ನಮ್ಮ ಜೊತೆಗೆ ಭೂಮಿ, ಗಿಡ, ಈ ನಾಡು ಉಳಿಯುವ ಕಡೆಗೆ ಗಮನಹರಿಸೋಣ…

Advertisement

Even if you drink the same soil, the same water, there are hundreds of varieties of plants and the smell and taste of the plant are hundreds. Just as nutrition is essential to our body, so is grass to the earth’s nutritional system. If we poison and destroy that grass, isn’t it like destroying the nutrients that the earth needs naturally? It may take at least a thousand years for an inch of organic carbon-rich topsoil to form, if loose organic material falls and rots.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

ಇದನ್ನೂ ಓದಿ

ಇಂದು ಕಾರ್ಗಿಲ್ ವಿಜಯೋತ್ಸವ ದಿನ : ನೂರಾರು ಸೈನಿಕರ ಪ್ರಾಣ ತ್ಯಾಗಕ್ಕೊಂದು ನಮನ
July 26, 2024
11:51 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ ಮಾತು ನಡೆಯುತ್ತಿಲ್ಲ : ರೈತರು ಇಂತ ಕಡೆ ಪ್ರಶ್ನಿಸುವಂತಾಗಬೇಕು
July 26, 2024
11:35 PM
by: The Rural Mirror ಸುದ್ದಿಜಾಲ
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಕೋರಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ : ಕೇಂದ್ರ ಸರ್ಕಾಕ್ಕೆ ಕೋರಿಕೆ
July 26, 2024
3:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 26-07-2024 | ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ | ಜುಲೈ 31 ರ ತನಕವೂ ಗಾಳಿ ಸಹಿತ ಮಳೆ ಸಾಧ್ಯತೆ |
July 26, 2024
12:40 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror