ಬಹು ಉಪಯೋಗಿ ಬೂದುಗುಂಬಳ | ಆರಂಭದಿಂದ ಅಂತ್ಯದವರೆಗೂ ಕುಂಬಳ..! | ಆರೋಗ್ಯದ ದೃಷ್ಟಿಯಲ್ಲಂತೂ ಬಹಳ ಪ್ರಯೋಜನಕಾರಿ |

November 17, 2023
2:30 PM
ಬೂದುಗುಂಬಳದ ಉಪಯೋಗಗಳ ಹಲವು....

ಬೂದುಗುಂಬಳ(Gray Gourd) ಬಲಿತಾಗ ಒಂದು ತರಕಾರಿಯಾಗಿ(Vegetable) ಉಪಯೋಗಿಸುವ, ಹಾಗೂ  ಬಹಳ ದೊಡ್ಡ ಹಣ್ಣಿಗಾಗಿ ಬೆಳೆಯಲಾಗುವ ಒಂದು ಹಬ್ಬು ಬಳ್ಳಿ ಸಸ್ಯ(Creeper). ಎಳೆಯದಾಗಿದ್ದಾಗ ಹಣ್ಣು ಜಾಳುಜಾಳಾಗಿ ಇರುತ್ತದೆ. ಅಪಕ್ವ ಕುಂಬಳವು ದಪ್ಪ ಬಿಳಿ ತಿರುಳನ್ನು ಹೊಂದಿದ್ದು ತಿಂದಾಗ ಸಿಹಿಯಿರುತ್ತದೆ. ನಮ್ಮಲ್ಲಿ ಅದರ ಬಳಕೆ, ತರಕಾರಿ, ಔಷಧಿ(Medicine) ಮತ್ತು ಬಲಿಗಾಗಿ ಬಳಸುತ್ತಾರೆ. ಹಿಂದಿನ ಕಾಲದಲ್ಲಿ ಕೋಣ, ಕುರಿ, ಕುಳಿ ಬಲಿ ಕೊಡುವ ಬದಲು ಕೆಲವು ಕಡೆ ಕುಂಬಳ ಕಾಯಿ ಬಲಿ ಕೊಡುತ್ತಾರೆ. ಹೊಸ ಟ್ರಕ್ ಪೂಜೆಗೂ ಇದನ್ನು ಬಲಿಯಾಗಿ ಬಳಸುತ್ತಾರೆ.

ಇದರ ವೈಜ್ಞಾನಿಕ ಹೆಸರು ಕುಕರ್ಬಿಟ ಮೊಕ್ಚಾಟಾ. ಇತ್ತೀಚಿನ ವರ್ಷಗಳಲ್ಲಿ ಮಂಗನ ಕಾಟದಿಂದ, ತಿರುಗಾಟಕ್ಕೆ ಹೋಗಿ ಬರುವಷ್ಟರಲ್ಲಿ ಒಂದು ಮಿಡಿಯೂ ಉಳಿಯಲಿಲ್ಲ. ಬೆಳೆಯುವುದು ಅಷ್ಟೂ ಈ ಪ್ರಾಣಿಗೇ ಹೋಗುತ್ತಿದೆ ಅನ್ನುವ ಕೂಗು ತೀವ್ರವಾಗಿದೆ. ಗ್ವಾಟೆಮಾಲ, ಕೊಲಂಬಿಯ, ಮೆಕ್ಸಿಕೊ ಮುಂತಾದ ಅಮೆರಿಕದ ಉಷ್ಣವಲಯದ ಪ್ರದೇಶ ಇದರ ಉಗಮಸ್ಥಾನ. ಮಾನವನಿಗೆ ಇದರ ಪರಿಚಯ ನಾಲ್ಕು ಸಹಸ್ರವರ್ಷಗಳಿಂದಲೂ ಇರುವುದು ಕಂಡು ಬಂದಿದೆ. ಬೂದುಗುಂಬಳದ ನಿಜವಾದ ಸಂಭ್ರಮ ಸವಿಯಲು ಬೆಂಗಳೂರಿನ ಹನುಮಂತ ನಗರದ ಉಡುಪಿ ಭಟ್ಟರ ವೆಂಕಟೇಶ್ವರ ಮೆಸ್ಸಿಗೆ ಹೋಗಿ ಗುರುವಾರ ಮಾತ್ರ ಮಾಡುವ ಮಜ್ಜಿಗೆ ಹುಳಿ ಸವಿಯಬೇಕು.

ಮತ್ತೊಂದು ಅದ್ಭುತ ಸೀನ್ ನೋಡಲು ಸಿಗುವುದು ಆಯುಧ ಪೂಜೆ(Ayudha Pooja) ಮತ್ತು ಲಕ್ಷ್ಮಿ ಪೂಜೆ ದಿನ ಲಕ್ಷ ಲಕ್ಷ ಬೂದುಗುಂಬಳ ಕಾಯಿಗಳು ಹೊಟ್ಟೆ ಒಡೆದುಕೊಂಡು ಕುಂಕುಮ ಹೊದ್ದು ಎಲ್ಲಾ ಕಡೆ ಹರಡಿ ಸಂಭ್ರಮ ಪಡುತ್ತವೆ ಮತ್ತು ಮರುದಿನ ಕಸ ಅಥವಾ ಹಸುಗಳ ಬಾಯ ರಸ ಆಗುತ್ತವೆ.ಆಯುಧ ಪೂಜೆಯಂದು ಇದೇ ಆಯುಧ. ಪ್ರತೀ ಮನೆ, ಅಂಗಡಿಗಳಲ್ಲಿ ಬೂದಕುಂಬಳಕಾಯಿಯನ್ನು ದೃಷ್ಟಿ ನಾಶಕ್ಕಾಗಿ ಬಳಸಲಾಗುತ್ತದೆ.

ಕುಂಬಳಕಾಯಿಯ ಆರೋಗ್ಯ ಪ್ರಯೋಜನಗಳು: ಬೂದುಗುಂಬಳದ ಬೀಜಗಳಿಗೆ ಜಂತುಹುಳುನಾಶಕ ಗುಣವಿದೆ. ಕಾಯಿ ಬಹಳ ಪುಷ್ಟಿದಾಯಕವೆಂದೂ ಮೂತ್ರೋತ್ತೇಜಕವೆಂದೂ ಹೇಳಲಾಗಿದೆ. ಕಾಯಿಯಿಂದ ಅದೇ ತಾನೇ ತೆಗೆದು ರಸವನ್ನು ಅಂತರ್ ರಕ್ತಸ್ರಾವವನ್ನು ತಡೆಯಲು ಬಳಸುವುದುಂಟು. ಇದು ಪ್ರತಿವಿಷವೂ ಹೌದು. ಕ್ಷಯರೋಗ ಮುಂತಾದ ರೋಗಗಳಲ್ಲಿ ಇದನ್ನು ಶಕ್ತಿದಾಯಕವಾಗಿ ಉಪಯೋಗಿಸುತ್ತಾರೆ. ಬಲಿತ ಬೂದಗುಂಬಳ ಇತರ ಕುಂಬಳಗಳಂತೆ ನಾಲ್ಕಾರು ತಿಂಗಳು ನಿಲ್ಲುತ್ತದೆ. ಆಯುರ್ವೇದದಲ್ಲಿ ಕುಷ್ಮಾಂಡ ಲೇಹ್ಯ ಅನ್ನುವ ಶಕ್ತಿ ಲೇಹ್ಯದಲ್ಲಿ ಬೂದುಗುಂಬಳ ಪ್ರಮುಖ ಪಾತ್ರ ವಹಿಸುತ್ತದೆ. ಮನುಷ್ಯನಿಗೆ ಗೊತ್ತಿರುವ ತರಕಾರಿಗಳಲ್ಲಿ ಅತೀ ದೊಡ್ಡ ಮತ್ತು ತೂಕದ ಕಾಯಿ ಇದು.

ಬೂದುಗುಂಬಳದ ಮೂವತ್ತು ಮಿಲಿ ರಸಕ್ಕೆ ಸ್ವಲ್ಪ ಸೈಂಧವ ಲವಣ ಸೇರಿಸಿ ಮತ್ತು ಒಂದು ಚಿಟಿಕೆ ಇಂಗನ್ನು ಸೇರಿಸಿ ಹಾಗೂ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ಮೂತ್ರ ಕಟ್ಟುವ ಸಮಸ್ಯೆಗೆ ಇದು ಪರಿಣಾಮಕಾರಿ ಔಷಧಿ. ಅಷ್ಟೇ ಅಲ್ಲದೆ ಈ ಔಷಧಿಯನ್ನು ಆಯುರ್ವೇದದ ಎಷ್ಟೋ ಮಾತ್ರೆ ಮದ್ದುಗಳ ಹೇರಳವಾಗಿ ಬಳಸಲಾಗುತ್ತದೆ. ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಬೂದುಗುಂಬಳ ಒಂದು ವಿಶೇಷ ಔಷಧಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೂದು ಕುಂಬಳ ಕಾಯಿಗೆ ಮೊದಲನೆಯ ಸ್ಥಾನ. ಬೂದು ಕಂಬಳದಲ್ಲಿರುವ ಫೈಬರ್ ಹಾಗೂ ಹೆಚ್ಚಿನ ನೀರಿನ ಅಂಶ ಮೂತ್ರಕೋಶ ಮೂತ್ರಪಿಂಡ, ಮೂತ್ರಕೋಶ ಹಾಗೂ ಯಕೃತ್ ಕರುಳಿನ ಕಲ್ಲುಗಳನ್ನು ಕರಗಿಸಲು ಒಳ್ಳೆಯ ದಿವ್ಯ ಔಷಧಿ.

ದೇಹದಲ್ಲಿರುವ ಹುಣ್ಣುಗಳನ್ನು ವಾಸಿ ಮಾಡಲು ಬೂದು ಕುಂಬಳಕಾಯಿ ಬಹಳ ಸಹಕಾರಿಯಾಗಿದೆ ಜೀರ್ಣಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಅರ್ಧ ಲೋಟ ಬೂದು ಕುಂಬಳಕಾಯಿ ರಸಕ್ಕೆ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯುವುದರಿಂದ ಅಸಿಡಿಟಿ ಹಾಗೂ ಗ್ಯಾಸ್ ಸಮಸ್ಯೆಗಳಿಂದ ಪರಿಹಾರ ಹೊಂದಬಹುದು. ಬೂದುಗುಂಬಳ ಕಾಯಿ ಒಳಗೆ ಸಕ್ಕರೆ ತುಂಬಿ, ಆಗ್ರಾಪೆಟ್ ಅನ್ನುವ ಸಿಹಿ ಮತ್ತು ಶಕ್ತಿಯುತ ಖಾದ್ಯ ತಯಾರು ಮಾಡುತ್ತಾರೆ.

Gray Gourd is a creeper plant that is used as a vegetable when mature, and grown for its very large fruit. Fruit is smooth when young. Immature pumpkin has a thick white pulp that is sweet when eaten. We use it as vegetable, medicine and sacrifice. In the past, in some places where kona, kuri and kuli were sacrificed, like Bhatta’s Anati, kumbala koi is sacrificed. It is also used as a sacrifice for New Truck Puja.

(Source : Digital Media)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror